ಕಿತ್ತೂರ ಉತ್ತಮ ಪ್ರವಾಸಿ ತಾಣ: .ವಿಜಯಕುಮಾರ
ಬೈಲಹೊಂಗಲ 28: ಕಿತ್ತೂರ ಚೆನ್ನಮ್ಮ ಕೋಟೆ ಸ್ಥಳ, ಬೈಲಹೊಂಗಲ ಚೆನ್ನಮ್ಮ ಸಮಾಧಿ ಸ್ಥಳವನ್ನು ಕಿತ್ತೂರ ಪ್ರಾಧಿಕಾರದಿಂದ ಉತ್ತಮ ಪ್ರವಾಸಿ ತಾಣವಾಗಿ ರೂಪಿಸಬೇಕೆಂದು ಬೆಂಗಳೂರಿನ ಕನ್ನಡ ಹೋರಾಟಗಾರ ನಂ.ವಿಜಯಕುಮಾರ ಹೇಳಿದರು. ಅವರು ಬೈಲಹೊಂಗಲದ ವೀರರಾಣಿ ಕಿತ್ತೂರ ಚೆನ್ನಮ್ಮನ ಸಮಾಧಿ ಸ್ಥಳ ಮತ್ತು ಚನ್ನಮ್ಮನ ಕಿತ್ತೂರಿನ ಕೋಟೆ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಕಿತ್ತೂರಿನಲ್ಲಿರುವ ಅಳಿದುಳಿದ ಕೋಟೆಯನ್ನು ಸಂರಕ್ಷಿತ ಪ್ರದೇಶವಾಗಿ ಅಭಿವೃದ್ದಿಪಡಿಸಬೇಕು. ಚೆನ್ನಮ್ಮ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಸರಕಾರ ಘೋಷಿಸಬೇಕೆಂದರು.ಕನ್ನಡ ಅಂಕಿಗಳ ಪೋಷಕರು, ಹಿರಿಯ ಸಾಹಿತಿಗಳಾದ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಸುರೇಶ ದೇಸಾಯಿ ಮಾತನಾಡಿ, ಬೈಲಹೊಂಗಲ ಚೆನ್ನಮ್ಮ ಸಮಾಧಿ ಸ್ಥಳವನ್ನು ಅಭಿವೃದ್ದಿ ಮಾಡುತ್ತಿರುವದು ಶ್ಲಾಘನೀಯ. ಇಂದಿನ ಯುವಕರು ವೀರರಾಣಿ ಚೆನ್ನಮ್ಮ , ಬೆಳವಡಿ ಮಲ್ಲಮ್ಮ, ಸಂಗೋಳ್ಳಿ ರಾಯಣ್ಣನ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.ಇದೇ ವೇಳೆ ಕನ್ನಡ ಹೋರಾಟಗಾರ ನಂ.ವಿಜಯಕುಮಾರ ಅವರನ್ನು ಸತ್ಕರಿಸಲಾಯಿತು.ಬೈಲಹೊಂಗಲ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಸಿ.ವಾಯ್.ಮೆಣಸಿನಕಾಯಿ, ಸಾಹಿತಿ ಲಕ್ಷ್ಮಣ ಡೊಂಬರ, ಇನ್ನಿತರರು ಇದ್ದರು..