ಲೋಕದರ್ಶನ
ವರದಿ
ಕೊಪ್ಪಳ 11:
ನಮ್ಮ ದೇಹ ಚೆನ್ನಾಗಿ ಇರಬೇಕು
ಅಂದರೆ ನಮ್ಮ ಕಣ್ಣುಗಳು ಬಹಳ
ಮುಖ್ಯ ಆದ್ದರಿಂದ ನಮ್ಮ ಕಣ್ಣುಗಳನ್ನು ಬಹಳ
ಜಾಗೃತಿಯಿಂದ ಕಾಪಾಡಿಕೊಳ್ಳಬೇಕೆಂದು ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ (ಕಿಮ್ಸ) ಕಣ್ಣಿನ ವಿಭಾಗದ ಮುಖ್ಯಸ್ಥೆ ಡಾ. ಜಯಶ್ರೀ ಅವರು
ಹೇಳಿದರು.
ಕೊಪ್ಪಳ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (ಕಿಮ್ಸ್) ಮತ್ತು ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನ ರೆಡ್ ಕ್ರಾಸ್ ಘಟಕದ
ಸಹಯೋಗದಲ್ಲಿ ವಿಶ್ವ ದೃಷ್ಟಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೃಷ್ಟಿ ಚೆನ್ನಾಗಿ
ಇದ್ದರೆ ನಿಸರ್ಗವನ್ನು ಸವಿಯಬಹುದು ಮತ್ತು ಪ್ರಪಂಚವನ್ನು ಚೆನ್ನಾಗಿ ನೋಡಬಹುದು. ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಚೆನ್ನಾಗಿ ಆಹಾರ ತೆಗೆದುಕೊಂಡರೆ ಕಣ್ಣಿನ
ದೋಷ ಇರುವುದಿಲ್ಲ ಎಂದು ಅವರು ವಿದ್ಯಾಥರ್ಿಗಳಿಗೆ
ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (ಕಿಮ್ಸ್)ಯ ಜಿಲ್ಲಾ ಉಪ
ಆರೋಗ್ಯ ಶಿಕ್ಷಣಾಧಿಗಳಾದ ಆರ್. ರೂಪಸೇನ ಚವ್ಹಾಣ
ಅವರು ಮಾತನಾಡಿ ಪ್ರತಿಯೊಬ್ಬರು ಭೌದ್ಧಿಕವಾಗಿ, ಶಾರೀರಕವಾಗಿ,
ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಅರೋಗ್ಯವಂತರಾಗಿರಬೇಕು. ರಾಷ್ಟ್ರೀಯ ಅಂದತ್ವ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ ಎರಡನೆಯ
ಗುರುವಾರದಂದು ಆಚರಣೆ ಮಾಡುತ್ತಾರೆ. 2018ಸಾಲೀನ
ವಿಶ್ವ ದೃಷ್ಟಿ ದಿನಾಚರಣೆಯ ಕಾರ್ಯಕ್ಕೆ ಕರೆ ಎಂಬ ಘೋಷವಾಕ್ಯವಾಗಿದೆ
ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ
ಲಮಾಣಿ ಅವರು ಮಾತನಾಡಿ ಇಂತ
ಕಣ್ಣಿನ ಜಾಗೃತಿ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ಹಮ್ಮಿಕೊಂಡು ಹಳ್ಳಿಯ ಜನರನ್ನು ಹೆಚ್ಚಾಗಿ ಜಾಗೃತಿಗೋಳಿಸಬೇಕು. ಇಂದು
ನಾವು ಸೇವಿಸುವ ಆಹಾಋದಲ್ಲಿ ರಾಸಾಯನಿಕಗಳನ್ನು ಕಲಬೆರಿಕೆ ಮಾಡುತ್ತಿದ್ದಾರೆ. ಇದರಿಂದ
ಮನುಷ್ಯರಿಗೆ ಆರೋಗ್ಯದ ಆನೇಕ ಪರಿಣಾಮಗಳು ಉಂಟಾಗುತ್ತವೆ.
ದೇಶದಲ್ಲಿ ಬಡತನ ಜಾಸ್ತಿ ಇದೆ.
ಅದದರಿಂದ ಜನರು ಹಣ್ಣುಗಳು ತಿನ್ನಲು
ಅಗುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನ್ನಪೂರ್ಣ ಅವರು ಪ್ರಾರ್ಥನೆ ಗೀತೆ
ಹಾಡಿದರು. ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ ಬಿ
ನಿರೂಪಿಸಿದರು. ಡಾ. ನರಸಿಂಹ ಗುಂಜಹಳ್ಳಿ
ಸ್ವಾಗತಿಸಿದರು. ಸುಮಿತ್ರ ಅವರು ವಂದಿಸಿದರು.