ಅಧ್ಯಕ್ಷರಾಗಿ ಕೇದಾರ್ಪ ಶಂಕ್ರ್ಪ ಬಗಾಡೆ ಆಯ್ಕೆ
ಶಿಗ್ಗಾವಿ 4: ಪಟ್ಟಣದ ವಿಠಲ ಹರಿ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜದ ನೂತನ ಕಾರ್ಯಕಾರಿಣಿ ಸಮಿತಿಯನ್ನು ಸರ್ವ ಸದಸ್ಯರ ನೇತೃತ್ವದಲ್ಲಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸುರೇಶ ಮೂಳೆ, ಅಧ್ಯಕ್ಷರಾಗಿ ಕೇದಾರ್ಪ ಶಂಕ್ರ್ಪ ಬಗಾಡೆ, ಉಪಾಧ್ಯಕ್ಷರಾಗಿ ಕೃಷ್ಣಾ ಮೂಳೆ, ಏಕನಾಥ ಮಾಳವಾದೆ, ಕಾರ್ಯದರ್ಶಿಯಾಗಿ ಸುಧೀರ ಮಾಳವಾದೆ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.ನೂತನ ಅಧ್ಯಕ್ಷ ಕೇದಾರ್ಪ ಬಗಾಡೆ ಮಾತನಾಡಿದ ಅವರು ಸಮಾಜ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಯ ಕೆಲಸ ಕಾರ್ಯಗಳು ಸಾಗಬೇಕಾಗಿವೆ, ಈ ನಿಟ್ಟಿನಲ್ಲಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿ ಸಮಾಜದ ಏಳಿಗೆಗೆ ಇನ್ನಷ್ಟು ಕೊಡುಗೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕೇಶವರಾವ ಉಂಡಾಳೆ, ವಿನೋಬಾ ಮಾಳವದೆ, ಆನಂದ ಲಾಳಗೆ, ರಾಮಚಂದ್ರ್ಪ ಗಂಡೊಳಕರ, ಸಂಜೀವ ಮಾಳವದೆ, ದಾಮೋದರ ಮಾಳವದೆ, ಗೋಪಾಲ ಮಾಳವದೆ, ಪ್ರಕಾಶ ಮಿರಜಕರ, ಸುನಿಲ್ ಮಾಳವದೆ, ನಾಗರಾಜ ಗಂಜೀಗಟ್ಟಿ, ಮಂಜುನಾಥ ಗಂಜೀಗಟ್ಟಿ, ಕೃಷ್ಣ ಮಾಳವದೆ ಅಮಿತ ಗಂಜೀಗಟ್ಟಿ, ಅನುರಾಧಾ ಗಂಜೀಗಟ್ಟಿ, ರೂಪಾ ಬಗಾಡೆ ಮುಂತಾದವರು ಉಪಸ್ಥಿತರಿದ್ದರು.