ಕರ್ನಾಟಕ ಬಯಲಾಟ ಅಕಾಡೆಮಿ ಕೆ.ಆರ್ .ದುರ್ಗಾದಾಸ ಹೇಳಿಕೆ ಫೆ.10 ರಂದು ಗೌರವ, ವಾರ್ಷಿಕ ಪ್ರಶಸ್ತಿ ಪ್ರಧಾನ

Karnataka Bayalata Academy K.R. Durgadasa Statement on Feb. 10 Honour, Annual Award Principal

ಕರ್ನಾಟಕ ಬಯಲಾಟ ಅಕಾಡೆಮಿ  ಕೆ.ಆರ್ .ದುರ್ಗಾದಾಸ ಹೇಳಿಕೆ ಫೆ.10 ರಂದು ಗೌರವ,  ವಾರ್ಷಿಕ  ಪ್ರಶಸ್ತಿ  ಪ್ರಧಾನ 

ಬಾಗಲಕೋಟೆ 8 : ಕರ್ನಾಟಕ ಬಯಲಾಟಅಕಾಡೆಮಿಯ ಕಳೆದ 2021 ರಿಂದ 2024ನೇ ಸಾಲಿನ ವರೆಗಿನ ಒಟ್ಟು ನಾಲ್ಕು ವರ್ಷಗಳ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಫೆಬ್ರವರಿ 10 ರಂದು ಹಮ್ಮಿಕೊಳ್ಳಲಾಗುತ್ತಿದೆ ಎಂದುರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ.ಆರ್‌.ದುರ್ಗಾದಾಸ ಹೇಳಿದರು. ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕಳೆದ 4 ವರ್ಷಗಳಿಂದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿರುವುದಿಲ್ಲ. ಹೀಗಾಗಿ 59 ಜನಕಲಾವಿದರು ಈ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿ ಸಲಿದ್ದಾರೆ. ನವನಗರದ ಕಲಾಭವನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಅಬಕಾರಿ ಹಾಗೂ ಜಿಲಾ ್ಲಉಸ್ತುವಾರಿ ಸಚಿವಆರ್‌.ಬಿ. ತಿಮ್ಮಾಪೂರ ಪ್ರಶಸ್ತಿ ಪುರಷ್ಕೃತರ ಪರಿಚಯ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಶಾಸಕರು ಹಾಗೂ ಬಿಟಿಡಿ ಎ ಅಧ್ಯಕ್ಷ ಎಚ್‌.ವಾಯ್‌. ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಎನ್‌.ಮಂಜುಳಾ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ನವದೆಹಲಿಯಕರ್ನಾಟಕದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಬೀಳಗಿ ಶಾಸಕ ಹಾಗೂ ಹಟ್ಟಿಚಿನ್ನದಗಣಿ ನಿಯಮಿತದಅಧ್ಯಕ್ಷ ಜೆ.ಟಿ.ಪಾಟೀಲ, ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದಕಾಶಪ್ಪನವರ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣ ಸಾಭಾಂಡಗೆ ಸೇರಿದಂತೆ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಆಗಮಿಸಲಿದ್ದಾರೆಂದರು. ಕಾರ್ಯಕ್ರಮದ ಪೂರ್ವದಲ್ಲಿ ಸಂಜೆ 4 ಗಂಟೆಗೆ ನಗರದ ಎಲ್‌.ಐ.ಸಿ ಸರ್ಕಲ್‌ದಿಂದ ಕಲಾಭವನದ ವರೆಗೆ ವಿವಿಧ ಜಾನಪದ ಕಲಾ ತಂಡದೊಂದಿಗೆ ಪ್ರಶಸ್ತಿ ಪುರಷ್ಕೃತರ ಮೆರವಣಿಗೆ ನಡೆಯಲಿದೆ. ಬಯಲಾಟ ಕಲೆಯನ್ನು ಶತಮಾನಗಳಿಂದ ಕಲೆಮಾರಿನಿಂದ ಉಳಿಸಿಕೊಂಡು ಬರುವಲಿ ್ಲಕಲಾವಿದರ ಪಾತ್ರ ತುಂಬಾ ದೊಡ್ಡದು. ಬಯಲಾಟದಲ್ಲಿ ನಾನಾ ಪ್ರಕಾರಗಳಿದ್ದು, ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟ ಮುಂತಾದ ಆಟಗಳಲ್ಲಿ ಹೆಸರಾಂತ ಕಲಾವಿದರುಇದ್ದಾರೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಅಕಾಡೆಮಿಯದ್ದಾಗಿದೆ ಎಂದು ದುರ್ಗಾದಾಸ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಲಕ್ಷ್ಮಣದೇ ಸಾರಟ್ಟಿ, ಅನಸೂಯಾ ವಡ್ಡರ, ಸುಜಾತಾ ಬಿರಾದಾರ, ಮಲ್ಲಮ್ಮ ಮಾದರ, ಭೀಮಪ್ಪ ಹುದ್ದಾರ ಹಾಗೂ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕಹಾಗೂ ರಜಿಸ್ಟ್ರಾರ್ ಕರ್ಣ ಕುಮಾರ ಜೈನಾಪೂರ ಉಪಸ್ಥಿತರಿದ್ದರು.