ಲೋಕದರ್ಶನವರದಿ
ಶಿಗ್ಗಾವಿ20 : ಬೇಸಿಗೆ ಬಂದಿದೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಬೇಟಿ ನೀಡಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನ ಕೈಗೊಳ್ಳಿ, ಮಾರ್ಚ ವೇಳೆಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಿ ಎಂದು ಜಿ ಪಂ ಅದ್ಯಕ್ಷ ಎಸ್ ಕೆ ಕರಿಯಣ್ಣವರ ತಾಲೂಕಿನ ಪಿಡಿಓಗಳಿಗೆ ಕಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಆಯಾ ಪಿಡಿಓಗಳ ವ್ಯಾಪ್ತಿಗಳಲ್ಲಿ ನೀರಿನ ಕೊಳವೆ ಬಾವಿ, ಪೈಪ್ಲೈನ್ ಕಾಮಗಾರಿ ಕೈಗೊಂಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ, ಕುಡಿಯುವ ನೀರಿಗಾಗಿಯೇ ಸರಕಾರ ಸಾಕಷ್ಟು ಅನುಧಾನ ಬಿಡಿಗಡೆ ಮಾಡಿದೆ ನಿಮ್ಮ ಮೈಗಳ್ಳತನದಿಂದ ಜನರು ಸಮಸ್ಯೆ ಅನುಭವಿಸಬಾರದು, ನಿಮ್ಮಲ್ಲಿ ಸಮಸ್ಯೆಯಿದ್ದರೆ ಕೂಡಲೇ ಹೇಳಿ ಅಗತ್ಯ ಕೆಲಸಗಳನ್ನು ಈ ಕೂಡಲೇ ಜಿಪಂ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರ ಎಸ್ಸಿ-ಎಸ್ಟಿ ಕಾಲೋನಿಗಳ ಅಭಿವೃದ್ದಿಗೆ ನೀಡುವ ಅನುಧಾನಸದ್ಬಳಕೆಯಾಗಬೇಕು ಇಲ್ಲಿ ನಿಯೋಜಿತ ಕಾಮಗಾರಿಗಳು ಬದಲಿಸದಂತೆ ಕೆಲಸ ಮಾಡಲು ಸೂಚಿಸಿದರು.
ವಿವಿಧ ಕಾರ್ಯಕ್ರಮಗಳಿಗೆ ನೀಡಿದ ಸರಕಾರದ ಅನುಧಾನ ಕಾಮಗಾರಿಗಳ ಮಾಹಿತಿಗೆ ಉತ್ತರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಮ್ಮ ನೇರ ನುಡಿಯಲ್ಲಿಯೇ ನಿಮ್ಮ ವ್ಯಾಪ್ತಿಯಲ್ಲಿ ವಸತಿ ನಿಲಯಗಳೆಷ್ಟು ? ವ್ಯವಸ್ಥೆ ಹೇಗಿದೆ ? ಎಂದು ಪ್ರಶ್ನಿಸಿದ ಅದ್ಯಕ್ಷರು, ಮಕ್ಕಳ ಊಟಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ , ವಾರದಲ್ಲಿ ಎರಡ್ಮೂರು ಭಾರಿ ನಿಲಯಗಳಿಗೆ ಬೇಟಿ ಮಾಡಿ ಮಾಹಿತಿ ಪಡೆಯಿರಿ ಎಂದರು.
ಜಿ ಪಂ ಸದಸ್ಯ ಬಸವರಾಜ ದೇಸಾಯಿ ಮಾತನಾಡಿ, 14 ನೇ ಹಣಕಾಸು ಯೋಜನೆಯ ಅನುಧಾನ ಬೋರ್ವೆಲ್ ದುರಸ್ತಿಗೆ ಸದ್ಬಳಕೆಯಾಗಲಿ ಎಂದು ಅತ್ತೀಗೇರಿ ಪಿಡಿಓಗೆ ಸೂಚಿಸಿದ ದೇಸಾಯಿ ಎಸ್ಸಿ-ಎಸ್ಟಿ ಕಾಲೋನಿಗಳಲ್ಲಿ ಕೈಗೊಂಡ ಕಾಮಗಾರಿ ಕುರಿತು ಪಿಡಿಓಗಳು ತಾಪಂ ಕಾರ್ಯನಿವರ್ಾಹಕಾಧಿಕಾರಿ ಅವರ ಧೃಢೀಕರಣ ಪತ್ರ ಪಡೆದ ನಂತರ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲು ಸೂಚಿಸಿದರು.
ಇನ್ನು ದುಂಡಶಿಯ ಅಂಬೇಡ್ಕರ್ ಭವನ ನಿಮರ್ಾಣಕ್ಕೆ 50 ಲಕ್ಷ ಮಂಜೂರಾಗಿ ಎರಡು ವರ್ಷಗಳು ಕಳೆದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಮರ್ಾಣ ಸಾದ್ಯವಾಗಿಲ್ಲ ಎಂದು ದೇಸಾಯಿ ಅಕ್ರೋಷ ವ್ಯಕ್ತಪಡಿಸಿದರು, ಶೀಘ್ರ ಕಾಮಗಾರಿ ಕೈಗೊಳ್ಳುವ ಬರವಸೆ ನೀಡುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮಾತಿಗೆ ಬ್ರೇಕ್ ಹಾಕಿದ ದೇಸಾಯಿ ನೀವೇನು ಮಾತನಾಡಬೇಡಿ ಮಾತನಾಡಿದರೆ ಕಾನೂನಿನ ಚೌಕಟ್ಟಿನಲ್ಲಿ ನಾನು ಮಾತನಾಡಬೇಕಾಗುತ್ತದೆ ಹೋಗಿ ಕುಳಿತುಕೊಳ್ಳಿ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ : ಸಭೆ ನಿಗದಿಯಾಗಿ ದಿನಾಂಕ ತಿಳಿಸಿದರೂ ಸಭೆಗೆ ಹಾಜರಾಗದ ಶಿಶು ಅಭಿವೃದ್ದಿ ಅಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಾಪಂ ಇಓ ಗೆ ಅದ್ಯಕ್ಷರು ಸೂಚಿಸಿದರು, ಸದಸ್ಯ ದೇಸಾಯಿಯವರೂ ದನಿಗೂಡಿಸಿದರು.
ಸಭೆಯಲ್ಲಿ ತಾಪಂ ಅದ್ಯಕ್ಷೆ ಪಾರವ್ವ ಆರೇರ, ಜಿಪಂ ಅಧಿಕಾರಿ ಜಾಫರ್ ಸುತಾರ, ತಾಪಂ ಇಓ ಚಂದ್ರು ಪೂಜಾರ ಇದ್ದರು.