ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮ: ಇವಿಎಮ್, ವಿವಿಪ್ಯಾಟ್ ಬಳಕೆಯ ಪ್ರಾತ್ಯಕ್ಷಿಕೆ ಪ್ರದರ್ಶನ: ಮತಯಂತ್ರಗಳ ಜಾಗೃತಿ ಅಭಿಯಾನ
ಉಗರಗೋಳ(ತಾ,ಸವದತ್ತಿ) 20: ಸುಭದ್ರ ಸಕರ್ಾರ ಹಾಗೂ ಪ್ರಭುದ್ಧ ಭಾರತ ನಿಮರ್ಾಣಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಾಲೂಕಾ ಸ್ವ್ವಿಫ್ ಸಮಿತಿ ಅಧ್ಯಕ್ಷ ಮತ್ತು ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಸಿ ಬಿ ದೇವರಮನಿ ಹೇಳಿದರು.
ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರೈತರ ಜಮೀನಿನಲ್ಲಿ ಸಭೆ ಜರುಗಿತು. ನರೇಗಾ ಯೋಜನೆ ಅಡಿ ಜಲಾವೃತ ಕಾಮಗಾರಿಯಲ್ಲಿ ಕ್ಷೇತ್ರದ ಹೊಲಗಳ ಬದುವುಗಳ ನಿಮರ್ಾಣ ಕಾಮಗಾರಿಯಲ್ಲಿ 500 ಕ್ಕೂ ಹೆಚ್ಚು ಕೂಲಿಕಾಮರ್ಿಕರಿಗೆ ಇವಿಎಮ್ ಹಾಗೂ ವಿವಿಪ್ಯಾಟ್ ಮಷಿನ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿತೆೆ ಬಗ್ಗೆ ತಿಳುವಳಿಕೆ ನೀಡಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯ ನಿಮಿತ್ತ ರೈತರಿಗೆ, ಕೂಲಿ ಕಾಮರ್ಿಕರಿಗೆ ಇವಿಎಮ್ ಹಾಗೂ ವಿವಿಪ್ಯಾಟ್ ಮಷಿನ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕತೆ ಪ್ರದರ್ಶನದ ಮೂಲಕ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಪಿಡಿಒ ಸಂಗನಗೌಡ ಹಂದ್ರಾಳ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಮತಯಂತ್ರಗಳ ಬಳಕೆಯ ಬಗ್ಗೆ ಸಂದೇಹವನ್ನು ಹೋಗಲಾಡಿಸುವದು, ಕಾರ್ಯಕ್ರಮವನ್ನು ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಪ್ರಾತ್ಯಕ್ಷಿಕತೆಯ ಮೂಲಕ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮತ ಪ್ರಮಾಣವನ್ನು ಹೆೆಚ್ಚಿಸಲು ಸಕಲ ರೀತಿಯ ಕ್ರಮವನ್ನು ಕೈಗೊಳ್ಳಲಾಗುವದು ಎಂದರು.
ಕೂಲಿ ಕಾಮರ್ಿಕರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಲಾ ಮಕ್ಕಳಿಂದ ಜಾಥಾ, ಮನೆ ಮನೆಗೆ ಭೆೇಟಿ, ಗ್ರಾಮಸ್ಥರಿಂದ ರಂಗೋಲಿ ಸ್ವಧರ್ೆ ಏರ್ಪಡಿಸಿ ಮತದಾರಲ್ಲಿ ಅರಿವು ಮೂಡಿಸಲಾಯಿತು.
ಸಹಾಯಕ ನಿದರ್ೇಶಕ ಪ್ರವೀಣಕುಮಾರ ಶಾಲಿ, ಕೃಷಿ ಅಧಿಕಾರಿ ಮಲ್ಲಪ್ಪ ಬಿಸಗುಪ್ಪಿ, ರಾವಳ, ಫಕ್ಕೀರಪ್ಪ ಕರೆನ್ನವರ, ಮಾದೇವಪ್ಪ ಮದಭಾವಿ, ಪುಂಡಲೀಕ ಶಿಂಗಾಡಿ, ಬಸಪ್ಪ ಮಾಯನ್ನವರ ಹಾಗೂ ಕೂಲಿ ಕಾಮರ್ಿಕರು, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಉಪಸ್ಥಿತರಿದ್ದರು.