ಕರಾಟೆ ಪುರಾತನ ಆತ್ಮರಕ್ಷಣೆ ಕಲೆ: ಗುಂಡ್ರು ಹನುಮಂತಪ್ಪ

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 10:ಇತ್ತೀಚೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಬಳ್ಳಾರಿ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಹಗರಿಬೊಮ್ಮನಹಳ್ಳಿಯ ಟ್ರಡಿಶನಲ್ ಶೋಟೊಕಾನ್ ಕರಾಟೆ ಸಂಸ್ಥೆಯ 20 ಕ್ಕೂ ಹೆಚ್ಚು ಕರಾಟೆಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪಧರ್ಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪಟುಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಟ್ರಡಿಶನಲ್ ಶೋಟೋಕಾನ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಗುಂಡ್ರು ಹನುಮಂತಪ್ಪ ಕರಾಟೆ ಪುರಾತನ ಆತ್ಮರಕ್ಷಣೆ ಕಲೆಯಾಗಿದ್ದು ಸದ್ಯ ಇದೊಂದು ಕ್ರೀಡೆಯಾಗಿದೆ. ಕರಾಟೆ ಅಭ್ಯಾಸದಿಂದ ಮಕ್ಕಳಿಗೆ ಏಕಾಗ್ರತೆ ಆತ್ಮವಿಶ್ವಾಸ ಬೆಳೆಯಲು ಸಹಕಾರಿ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಎಣ್ಣಿ ಭಾಷಾ ಕರಾಟೆ ಕಲೆ ಇಂದಿನ ದಿನಮಾನದಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಅವಶ್ಯಕವಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಉಚಿತ ಕರಾಟೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. 

ಮುಖ್ಯ ಕರಾಟೆ ತರಬೇತುದಾರ ಸುಭಾಷ್ಚಂದ್ರ ಮಾತನಾಡಿ ಈ ವರ್ಷದಿಂದ ಸಕರ್ಾರಿ ಪ್ರೌಢಶಾಲಾ ಬಾಲಕೀಯರಿಗೆ ಕರಾಟೆ ತರಬೇತಿಯನ್ನು ಸ್ಥಗಿತಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.  ಈ ಸಂದಂರ್ಭದಲ್ಲಿ ಕಲ್ಯಾಣ ರಾಜ್ಯಕ್ಕಿಂತಲೂ ಮೊದಲು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದ ನಮ್ಮ ಜನರು ಕಾಡು ಪ್ರಾಣಿಗಳು, ದರೋಡೆ ಕೋರರಿಂದ ರಕ್ಷಸಿಕೊಳ್ಳಲು ಇಂತಹ ಆತ್ಮರಕ್ಷಣೆಯ ಕಲೆಗಳನ್ನು ಮೈಗೂಡಿಸಿ ಕೊಂಡಿದ್ದರು ಎಂದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಐದು ವರ್ಷದ ಕರಾಟೆ ಪಟು ಸಾನಿಯಾ ಮುಂದಿನ ದಿನಗಳಲ್ಲಿ ಹೆಚ್ಚು ಸ್ಥಾನಗಳಲ್ಲಿ ಬಹುಮಾನಗಳನ್ನು ಗೆಲ್ಲಲಿ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಬಾಬುವಲಿ ಶುಭ ಹಾರೈಸಿದರು. 

ಗೌರವ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಆತೀಫ್, ಕರವೇ ಅಧ್ಯಕ್ಷ ನಾಣಿಕೇರಿ ಭರಮಜ್ಜ ನಾಯಕ, ತರಬೇತುದಾರರಾದ ದೊಡ್ಡಬಸವರಾಜ, ನಭಿಸಾಭ್, ಮಾರೇಶ್, ಪಕ್ಕಿರಜ್ಜ ಇದ್ದರು.

ಪ್ರಶಸ್ತಿ ಪಡೆದ ಸ್ಥಾನಗಳು: ಕಾತ ವಿಭಾಗದಲ್ಲಿ ರವಿತೇಜ್, ಮೇದಾರ್ ಉದಯ್ ಚಿನ್ನದ ಪದಕ, ಗೋವರ್ಧನ್, ದೇವರಾಜ್, ನಿಶಾಪಾಟೇಲ್, ಸಾಥ್ವಿಕ್ ಬೆಳ್ಳಿ ಪದಕ, ಹರ್ಷವರ್ಧನ್ ಕಂಚು ಪದಕ. ಕುಮುತೆ ವಿಭಾಗದಲ್ಲಿ ಗೋಣಿಸ್ವಾಮಿ, ಉದಯ್, ಸಾನಿಯಾ, ರವಿತೇಜ್ ಬೆಳ್ಳಿ ಪದಕ, ಹನುಮಜ್ಜ, ಸುಮಿತ್, ಅಮಿತ್, ಹರ್ಷವರ್ಧನ್ ಕಂಚು ಪದಕ, ಬ್ಲಾಕ್ ಬೆಲ್ಟ್ ಕಾತ ವಿಭಾಗದಲ್ಲಿ ಯಮನೂರ್ ಚಿನ್ನದ ಪದಕ, ನಭಿಸಾಬ್ ಬೆಳ್ಳಿ ಪದಕ, ಕುಮುತೆ ವಿಭಾಗದಲ್ಲಿ ಹೆಚ್.ಮಾರೇಶ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಗಣೇಶ್ ರಾಥೋಡ್ ಸ್ವಾಗತಿಸಿದರು. ಕೊರವರ ರಾಮಣ್ಣ ವಂದಿಸಿದರು. ಶಿಕ್ಷಕ ಕೆ.ಎಂ.ಶಿವಶಂಕ್ರಯ್ಯ ನಿರೂಪಣೆ ಮಾಡಿದರು.