ಲೋಕದರ್ಶನ ವರದಿ
ಕುಮಟಾ: ರಾಜ್ಯದಲ್ಲಿ ಅನೇಕ ಪ್ರೌಢಶಾಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹದಿನಾಲ್ಕು ಪ್ರೌಢಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಯಲಿಕ್ಕೆ ವಿದ್ಯಾಥರ್ಿಗಳು ಆಸಕ್ತಿ ತೋರಿಸಿದರೂ ಸಹ ಸಂಸ್ಕೃತ ಶಿಕ್ಷಕರು ಇಲ್ಲದೇ ಇರುವ ಕಾರಣ ಆ ಭಾಷೆಯನ್ನು ಕೈ ಬಿಟ್ಟು ಹಿಂದಿಯನ್ನು ಹೇರಲಾಗುತ್ತಿದೆ.
ಸಂಸ್ಕೃತ ಭಾಷೆಯ ಅಧ್ಯಯನದಿಂದ ಕನ್ನಡ ಭಾಷೆ ಸಮೃದ್ಧವಾಗುತ್ತದೆ ಮತ್ತು ಬಾಲಕರಿಗೆ ಕನ್ನಡ ಭಾಷೆಯ ಬಗ್ಗೆ ಒಲವು ಹೆಚ್ಚಾಗಲಿಕ್ಕೆ ಸಂಸ್ಕೃತ ಭಾಷೆಯ ಕಲಿಕೆಯಿಂದ ಸಾಧ್ಯವಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಮುದ್ರದಷ್ಟು ವಿಶಾಲವಾಗಿರುವ "ನೈತಿಕ ಶಿಕ್ಷಣ"ಕ್ಕೆ ಪೂರಕವಾದ ಪಂಚತಂತ್ರ, ಹಿತೋಪದೇಶ, ಸುಭಾಷಿತ ಮೊದಲಾದ ಗ್ರಂಥಗಳು ಇವೆ. ಇಂತಹ ಗ್ರಂಥಗಳನ್ನು ಓದುವುದರಿಂದ ವಿದ್ಯಾಥರ್ಿಗಳಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗುತ್ತವೆ.
ಆದಕಾರಣ ರಾಜ್ಯದಲ್ಲಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸಂಸ್ಕೃತ ಶಿಕ್ಷಕರ ಹುದ್ದೆಯನ್ನು ವಿಳಂಬ ಮಾಡದೆ ತುಂಬಬೇಕು ಎಂದು ಉತ್ತಾಯಿಸಿ ಕುಮಟಾದ ಸಂಸ್ಕೃತಿ ಉಪನ್ಯಾಸ ವೇದಿಕೆಯ ಅಧ್ಯಕ್ಷ ಪ್ರೊ ವಿಷ್ಣು ಜೋಶಿ ಅವರು ಕೇಂದ್ರ ಮಾಜಿ ಸಚಿವ ಹಾಗೂ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆಯವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಸಂಸದರು ಕೇಂದ್ರಮಟ್ಟದಲ್ಲಿ ನಾನು ಈ ಬಗ್ಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ನಾನೂ ಸಹ ಸಂಸ್ಕೃತ ಭಾಷೆಯ ಅಭಿಮಾನಿ. ಅಷ್ಟೇ ಅಲ್ಲ ಸಂಸ್ಕೃತ ಭಾಷೆಯಲ್ಲಿ ಕೃಷಿ ಮಾಡಿದವನು ಆಗಿದ್ದೇನೆ. ನಿಮ್ಮ ಮನವಿ ಸಕಾಲಿಕ.
ನಾನು ಮಾಡಿದ ಪ್ರಯತ್ನವನ್ನು ಮೇಲ್ ಮುಖಾಂತರ ನಿಮಗೆ ತಿಳಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಿ ಡಿ ಶೇಟ, ಶ್ರೀಮತಿ ಶಾನಭಾಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು.