ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾರ್ಥಕ್ಕಾಗಿ ನಡೆದ ಸಮ್ಮೇಳನ

ಲೋಕದರ್ಶನ ವರದಿ

ಬ್ಯಾಡಗಿ 20:  ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೆಲವರ ಸ್ವಾರ್ಥಕ್ಕಾಗಿ ನಡೆದ ಸಮ್ಮೇಳನವಾಗಿದೆ. ಈ ಸಮ್ಮೇಳನದಿಂದ ಜಿಲ್ಲೆಯ ಸಮಸ್ತ ಸಾಹಿತಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಆಗಿರು ಅವಮಾನಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ರವರೆ ನೇರ ಕಾರಣವೆಂದು ನ್ಯಾಯವಾದಿ ಹಾಗೂ ಲೇಕಕರಾದ ಕೆ.ಎನ್ ಚಿನವಾಲಗಟ್ಟಿ ಆರೋಪಿಸಿದರು.

      ನಗರದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಹಾವೇರಿ ಜಿಲ್ಲೆಯಾಗಿ 11 ವರ್ಷ ಕಳೆದ ನಂತರ ನಮ್ಮೂರಿನಲ್ಲಿ ಸಾಹಿತ್ಯ ಜಾತ್ರೆ ನಡೆಯುತ್ತಿರುವುದು ಎಲ್ಲರಿಗೂ ಸಂತಸದ ವಿಷಯವಾಗಿತ್ತು. 

    ಸಾಹಿತ್ಯ ಸಮ್ಮೇಳನದ ಕುರಿತು ನಡೆದ ಪೂರ್ವ ಭಾವಿ ಸಭೆಗಳಲ್ಲಿ ಜಿಲ್ಲೆಯ ಎಲ್ಲಾ ಕಲಾವಿಧರನ್ನು, ಸಾಹಿತಿಗಳನ್ನು, ಲೇಕಕರನ್ನು, ವಿವಿಧ ಸಂಘಟನೆಗಳ ಮುಖಂಡರನ್ನು, ಮಹಿಳಾ ಸಂಘಟನೆಯ ಮುಖಂಡರನ್ನು, ಹೋರಟಗಾರರನ್ನು ಕರೆಸಲು ತಿಮರ್ಾನಿಸಲಾಗಿತ್ತು.

      ಜಿಲ್ಲಾ ಅಧ್ಯಕ್ಷರಾದ ಲಿಂಗಯ್ಯನವರು ತಮ್ಮ ಸ್ವಾಥಸಾದನೆ ಹಗೂ ಸಹಿತ ಚಿಂತನೆಗಳ ದೃಷ್ಟಿಯಿಂದ ಜಿಲ್ಲೆಯ ಮತ್ತು ಬ್ಯಾಡಗಿ ತಾಲೂಕಿನ ಸಾಹಿತಿಗಳನ್ನು, ಕಲಾವಿಧರನ್ನು, ಚುಟುಕು ಸಾಹಿತಿಗಳನ್ನು ಹಗೂ ವಿವಿಧ ಸಂಘಟನೇಗಳ ಮುಖಂಡರನ್ನು, ನ್ಯಾಯವಾದಿಗಳನ್ನು, ಲೇಕಕರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರ ಪಲವಾಗಿ ಬ್ಯಾಡಗಿಯಲ್ಲಿ ನಡೆದ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆಯ ಆಗರವಾಗಿ ಮಾರ್ಪಟಿದೆ ಎಂದು ನ್ಯಾಯವಾದಿ ಹಾಗೂ ಲೇಕಕರಾದ ಕೆ.ಎನ್ ಚಿನವಾಲಗಟ್ಟಿ ಆರೋಪಿಸಿದರು.

      ನ್ಯಾಯವದಿ ದೇವರಾಜ ಹೆಚ್ ಬುಡ್ಡನಗೌಡ್ರ ಮಾತನಾಡಿ, ಶನಿವಾರ ಸಮ್ಮೇಳನದ ವೇದಿಕೆಯ ಪಕ್ಕದಲ್ಲಿಯೇ ಕರ್ತವ್ಯ ನಿರತ ಹಾಗೂ ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಪೊಲೀಸ್ ಪೇದೆಯೋಬ್ಬರು ಹೃದಯಾಘಾತದಿಂದ  ನಿಧನ ಹೊಂದಿದ ಸಮಯದಲ್ಲಿ, 5 ನಿಮಿಷ ಮೌನಾಚರಿಸಿದ್ದನ್ನು ಬಿಟ್ಟರೆ, ಸೌಜನ್ಯಕ್ಕಾದರೂ  ನಿಧನ ಹೊಂದಿದ ಪೊಲೀಸರ ಮನೆಗೆ ತೆರಳಿ ಒಂದು ಹುಮಾಲೆಯನ್ನು ಹಾಕಿ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಗೌರವಿಸಿಲ್ಲವೆಂದು ಬುಡ್ಡನಗೌಡ್ರ ಆರೋಪಿಸಿದರು.

      ವೀರಕನ್ನಡಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಚನ್ನಬಸಪ್ಪ ಶೆಟ್ಟರ ನಿವೃತ್ತ ಶಿಕ್ಷಕರನ್ನು, ವಿವಿಧ ಇಲಾಖೆಯ ನೌಕರರನ್ನು, ಸಾಹಿತಿಗಳನ್ನು, ಸಂಘಟಿಕರನ್ನು ಮರೆತಿದ್ದಾರೆಂದು ಆರೋಪಿಸಿದರು. ಕನರ್ಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ತಾಲೂಕಾ ಉಪಾಧ್ಯಕ್ಷ ಬಸವರಾಜ ಹಾವನೂರು, ಮಂಜುನಾಥ ಜಾಧವ, ಮಂಜುನಾಥ ಶಿರಾಳಕೊಪ್ಪ, ಶಶಿಧರ ಕೊಲ್ಲಾಪುರ ಉಪಸ್ಥಿತರಿದ್ದರು.