ಮೀರಾ ತಟಗಾರ, ಮಹಾಲಿಂಗಪುರ
24-11ಶನಿವಾರ ದಿವಸ ಸಾಯಿ ನಿಕೇತನ ಸಭಾಭವನ, ಮುಧೋಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮುಧೋಳ ಸಹಯೋಗದೊಂದಿಗೆ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.
ಈ ಸಾಹಿತ್ಯ ಪರಿಷತ್ತಿನ ಸವರ್ಾಧ್ಯಕ್ಷರಾಗಿ ಮಹಾಲಿಂಗಪುರದ ಅಣ್ಣಾಜಿ ನಾನಾಸಾಹೇಬ ಪಡತಾರೆ ಇವರು ಆಯ್ಕೆಗೊಂಡಿದ್ದು ಬೆಲ್ಲದ ನಗರ ಮಹಾಲಿಂಗಪುರದ ಸಮಸ್ತ ಜನತೆಗೆ ಒಂದು ಸಂತೋಷದ ಘಳಿಗೆಯಾಗಿ ಪರಿಣಮಿಸಿದೆ.
ಅಣ್ಣಾಜಿಯವರು ಹುಟ್ಟು ಮುಧೋಳದಲ್ಲಿ 8 ಮಾರ್ಚ, 1932 ರಲ್ಲಿ ಆಯಿತು. ತಂದೆ ನಾನಾಸಾಹೇಬ ತಾಯಿ ತಾರಾಬಾಯಿ ಇವರ ಜೇಷ್ಠ ಪುತ್ರ ಇವರಾಗಿದ್ದಾರೆ. ಇವರು ಮುಧೋಳದಲ್ಲಿ ಪ್ರಾಥಮಿಕ ಹಾಗೂ ಪ್ರೌಢ, ಪಿಯುಸಿ ಮುಗಿಸಿದರು. ಬಿ.ಎ., ಎಮ್.ಎ. ಪದವಿ ಧಾರವಾಡ ವಿವಿಯಿಂದ ಪಡೆದರು. ಇವರು ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಹಾಗೂ ಸಂಸ್ಕೃತ ಈ ಪಂಚ ಭಾಷೆಗಳ ಪಾಂಡಿತ್ಯ ಹೊಂದಿದ್ದಾರೆ. ಅಲ್ಲದೆ ಹಿಂದಿ ವಿಷಯದ ಸಂಪನ್ಮೂಲ ವ್ಯಕ್ತಿಯೂ ಹಾಗೂ 1991 ರಲ್ಲಿ ಸಾಕ್ಷರತಾ ಆಂದೋಲನದಲ್ಲಿ ವಿಶಿಷ್ಟವಾದಂತಹ ಛಾಪು ಮೂಡಿಸಿದ್ದಾರೆ. ಮಹಾಲಿಂಗಪುರದಲ್ಲಿ ಸುಮಾರು 200 ಸಾಕ್ಷರತಾ ಶಾಲೆಗಳ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುವಲ್ಲಿ ಅಗ್ರಗಣ್ಯರಾಗಿದ್ದಾರೆ.
1960 ರಲ್ಲಿ ಮಹಾಲಿಂಗಪುರದ ಎಸ್.ಸಿ.ಪಿ. ಹೈಸ್ಕೂಲ್ದಲ್ಲಿ ಚಿತ್ರಕಲಾ, ಹೊಲಿಗೆ, ಪದವಿ, ಕನ್ನಡ ಉಪನ್ಯಾಸಕರಾಗಿ ಒಟ್ಟು 35 ವರ್ಷಗಳ ವರೆಗೆ ಆ ಟ್ರಸ್ಟಿನ ಅಧೀನ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ ಎಲ್ಲರ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡು ತಮ್ಮ ನಿವೃತ್ತಿಯನ್ನು 1995 ರಲ್ಲಿ ಪಡೆದರು. ತದನಂತರ ಬಸವಾನಂದ ಶಾಲೆಯ ಟ್ರಸ್ಟಿನವರು ಮುಖ್ಯೋಪಾಧ್ಯಾಯರನ್ನಾಗಿ ಅವರನ್ನು ನೇಮಿಸಿ ಗೌರವಿಸಿದರು. ಅಲ್ಲಿಂದ ಇಲ್ಲಿಯವರೆಗೆ ಶಾಲೆಯ ಉನ್ನತಿ ಪಡೆಯುವಲ್ಲಿ ಇವರು ಅಗ್ರಗಣ್ಯರು.
ಇವರು ವರದಿಗಾರರಲ್ಲದಿದ್ದರೂ ಸಹ ಊರಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಉಪಸ್ಥಿತರಿದ್ದು ಅಲ್ಲಿ ನಡೆಯುವಂತಹ ಕಾರ್ಯಕ್ರಮದ ಯಾದಿಯನ್ನು ತಯಾರಿಸಿ ಹಲವಾರು ಪತ್ರಿಕೆಗಳಿಗೆ ಸುದ್ದಿಯನ್ನು ರವಾನಿಸಿ ವರದಿಗಾರರಾಗಿದ್ದಾರೆ. ಇದು ಪತ್ರಿಕಾ ರಂಗದ ವರದಿಗಾರರಿಗೆ ಮಾದರಿಯಾಗಿ ಪರಿಣಮಿಸಿದ್ದಾರೆ.
2011 ನಿಂಗಾಪುರ ಮುಧೋಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸವರ್ಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಅದೇ ವರ್ಷ ಬಾಗಲಕೋಟ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಆಗಿನ ಜಿಲ್ಲಾಧಿಕಾರಿಯಾದ ಮೇಘಣ್ಣವರ ಉಪಸ್ಥಿತಿಯಲ್ಲಿ ಪಡೆದಿದ್ದರು.
ರನ್ನ ವಿಚಾರ ವೇದಿಕೆ, ಶರಣ ಚೇತನ ಪತ್ರಿಕೆಯ ಸಹ ಸಂಪಾದಕರು, ಬಸವ ಬಳಗ ಹೀಗೆ ಇನ್ನೂ ಹಲವಾರು ಸಂಘ-ಸಂಸ್ಥೆಗಳೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದಾರೆ.
ಇವರು ಮಕ್ಕಳ ಸಾಹಿತ್ಯದಲ್ಲಿ ಬಾಲರ ಬಯಕೆ, ಕಂದನ ಕವನ, ಗೆಳೆತನ, ಪುಟ್ಟನ ಪ್ರಪಂಚ, ಪುಟ್ಟ-ಪುಟ್ಟಿ ಹೀಗೆ 6 ಕವನ ಸಂಕಲನಗಳನ್ನು ಬರೆದು ಚಿಣ್ಣರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ತಿರುಮಂತ್ರ, ಹುಲಿ ಮತ್ತು ಮಂಗ ಎಂಬ ಎರಡು ಕಥಾ ಸಂಕಲನಗಳು, ಮಹಾಲಿಂಗೇಶ್ವರ ಮಹಾತ್ಮೆ, ಪಾರಿಜಾತ ಕೇಸರಿ ಮುರಿಗೆಪ್ಪನವರು ಜೀವನ ಚರಿತ್ರೆ ಗ್ರಂಥ ಬರೆದಿದ್ದಾರೆ. ಅದೇ ರೀತಿ ನಗೆ ಹನಿಗಳು ಎಂಬ ಹಾಸ್ಯ ಸಂಕಲನಗಳು ಹಾಗೂ ನೂರೊಂದು ಚುಟುಕುಗಳು ಅಲ್ಲದೆ ಮಹಾಲಿಂಗೇಶ್ವರ ಅಷ್ಟೋತ್ತರ ನಾಮಾವಳಿಯನ್ನು ಬರೆದು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸೇವೆ ಗುರುತಿಸಿ ಸಾವಳಗಿಯ ಚಿಗುರು ಸಾಹಿತ್ಯ ವೇದಿಕೆ, ಬಿಜಾಪುರದ ಮರಾಠಾ ನೌಕರರ ಸಂಘ, ಸ್ಥಳೀಯ ನೀಲಕಂಠೇಶ್ವರ ಕುರುಹಿನಶೆಟ್ಟಿ ಸಂಘ ಹಾಗೂ 1997 ರಲ್ಲಿ ಬನಹಟ್ಟಿ ಸ್ನೇಹ ಸಂಘದ ಪ್ರಕಾಶನದವರು ದಿ. ತಮ್ಮಣ್ಣೆಪ್ಪ ಚಿಕ್ಕೋಡಿ ಸಮಿತಿಯು ಇವರ 'ಪುಟ್ಟ-ಪುಟ್ಟಿ' ಮಕ್ಕಳ ಕವನ ಸಂಕಲನಕ್ಕೆ ಸಾಹಿತ್ಯ ಪುರಸ್ಕಾರವನ್ನು ನೀಡಿದ್ದಾರೆ. ಧಾರವಾಡದಲ್ಲಿ 'ಶಿಕ್ಷಣ ಸಿರಿ' ರಾಜ್ಯಮಟ್ಟದ ಪ್ರಶಸ್ತಿ 2007 ರಲ್ಲಿ ಹೊಸಪೇಟೆಯ ಸಿರಿಗಂಧ ಸಾಹಿತ್ಯ ವೇದಿಕೆಯವರು ರಾಜ್ಯಮಟ್ಟದ ಚುಟುಕು ಶ್ರೇಷ್ಠ ಪ್ರಶಸ್ತಿ ನೀಡಿದ್ದಾರೆ. ಹಂದಿಗುಂದದ ಛಲಗಾರ ಪತ್ರಿಕಾ ಬಳಗವು 2008 ರಲ್ಲಿ 'ಸಾಹಿತ್ಯರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. 2012 ರಲ್ಲಿ ನೆಮ್ಮದಿ ಪತ್ರಿಕೆಯ ಸಂಪಾದಕರಾದ ವೀರೇಶ ಆಸಂಗಿ ಇವರ ನೇತೃತ್ವದಲ್ಲಿ ಅಭಿನಂದನಾ ಸಮಾರಂಭವು ಮಹಾಲಿಂಗಪುರದಲ್ಲಿ ನಡೆಯಿತು. ಇವರು ಮಕ್ಕಳ ಮೇಲಿನ ಪ್ರೀತಿಗಾಗಿ ಬರೆದ ನೀತಿ ಕತೆಗಳು, ಕವನ, ಚುಟುಕುಗಳು ಹಲವಾರು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.