27 ರಂದು ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ: ಸವರ್ಾಧ್ಯಕ್ಷೆಯಾಗಿ ಲೇಖಕಿ ಸುನಂದಾ ಎಮ್ಮಿ ಸವರ್ಾನುಮತದಿಂದ ಆಯ್ಕೆ

ಚನ್ನಮ್ಮನ ಕಿತ್ತೂರ 20ಃ ಕನ್ನಡ ಸಾಹಿತ್ಯ ಪರಿಷತ್ತ ಕಿತ್ತೂರು ತಾಲೂಕಾ ಘಟಕದ ಪ್ರಥಮ ಸಮ್ಮೇಳನವನ್ನು ದಿ.27ರಂದು ಹಮ್ಮಿಕೊಳ್ಳಲಾಗಿದ್ದು, ಸವರ್ಾಧ್ಯಕ್ಷೆಯಾಗಿ ಲೇಖಕಿ ಸುನಂದಾ ಎಮ್ಮಿ ಅವರನ್ನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು.

ಸೋಮವಾರ ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ನಡೆದ ತಾಲೂಕ ಮಟ್ಟದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಡಾ. ಜಚಿನಿಯವರ ಜನ್ಮಸ್ಥಳವಾದ ಅಂಬಡಗಟ್ಟಿಯಲ್ಲಿ ಹಾಗೂ ಸತೀಶಣ್ಣಾ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಮಾಡಲು ತೀಮರ್ಾನಿಸಲಾಯಿತು. 

ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನ ಕಿತ್ತೂರ ಉತ್ಸವವಿದ್ದಂತೆ ಎಲ್ಲ ಸಾಹಿತಿಗಳು, ಲೇಖಕರು, ಕನ್ನಡಾಭಿಮಾನಿಗಳು ಶಿಕ್ಷಕರು, ಪತ್ರಕರ್ತರು, ಇದರಲ್ಲಿ ಎಲ್ಲರೂ ಭಾಗವಹಿಸಿ ತಾಯಿಯ ಸೇವೆಯನ್ನು ಮನಪೂರ್ವಕವಾಗಿ ಮಾಡಬೇಕೆಂದರು. ಮಾಡುವ ಮನಸ್ಮ್ಸಗಳು ಸೇರಿದರೆ ಯಶಸ್ವಿಯಾಗುತ್ತದೆ ಎಂದು ಹೇಳಿದರು. ಇಂತಹ ಸೇವೆಗೆ ಕೊಡುವ ಮನಸ್ಮ್ಸಗಳು ಬಹಳ ಇವೆ ಆದರೆ ಸರಿಯಾಗಿ ಮಾಡಬೇಕೆಂದರು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಘಟನೆಯನ್ನು ಮಾಡಬೇಕೆಂದರು.

ಲಯನ್ಸಕ್ಲಬ್ಬ್ ಅಧ್ಯಕ್ಷ ಹಬೀಬ ಶಿಲ್ಲೇದಾರ ಮಾತನಾಡಿ ಡಾ ಜಚನಿ ಯವರ ಜನ್ಮ ಸ್ಥಳ ಅಂಬಡಗಟ್ಟಿಯಲ್ಲಿ ಸಮ್ಮೇಳನ ನಡೆಯುತ್ತಿರುವದು ನಮ್ಮ ಭಾಗ್ಯ ವೆಂದರು ಕನ್ನಡಾಂಬೆಯ ಸೇವೆ ಮಾಡಲು ಯಾವದೇ ಜಾತಿ ಪಕ್ಷ ಬೇದಬಾವ ಮಾಡದೇ ಕನ್ನಡ ಉಳಿಸುವ ಕೆಲಸವನ್ನು  ಎಲ್ಲರೂ  ಸೇರಿ ಮಾಡೋಣವೆಂದರು. ಈ ಸಮ್ಮೇಳನಕ್ಕೆ ಬರುವ ಜನರಿಗೆ ಬೆಳಿಗ್ಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು, ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಎಲ್ಲ ಸೇವೆಯನ್ನು ನಾನು ಮಾಡುತ್ತೇನೆಂದು ಹೇಳಿದರು. ನಾನು ಈಗಾಗಲೇ ನನ್ನ ಆದಾಯದ ಶೇ 25 ರಷ್ಟು ಹಣವನ್ನು ಸಮಾಜ ಸೇವೆ ಮಾಡುತ್ತಿದ್ದೇನೆ ಜೀವನದಲ್ಲಿ ಸಮಾಜ ಸೇವೆಯನ್ನು ಕೈಲಾದಷ್ಟು ಮಾಡುವದಾಗಬೇಕೆಂದರು.

ಕಸಾಪ ಅಧ್ಯಕ್ಷ ಶೇಖರ ಹಲಸಗಿ ಮಾತನಾಡಿ ತಾಲೂಕಾ ಮಟ್ಟದ ಪ್ರಥಮ ಸಮ್ಮೇಳನವನ್ನು ಅಂಬಡಗಟ್ಟಿಯ ಸತೀಶಣ್ಣಾ ಕಲ್ಯಾಣ ಮಂಟಪದಲ್ಲಿ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ ಇವರ ನೇತೃತ್ವದಲ್ಲಿ  ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನಾಧ್ಯಕ್ಷೆಯಾಗಿ ಸುನಂದಾ ಎಮ್ಮಿ ಯವರನ್ನು ಆಯ್ಕೆ ಮಾಡಲಾಗಿದೆ  ಎಂದು ಹೇಳಿದರು.

ಜಿಪಂ ಸದಸ್ಯೆ ರಾಧಾ ಕಾದ್ರೋಳ್ಳಿ ಮಾತನಾಡಿದರು. ಕಸಾಪ ಗೌರವ ಕಾರ್ಯದಶರ್ಿ ಎಸ್ ಬಿ ದಳವಾಯಿ, ಶ್ರೀಕರ ಕುಲಕಣರ್ಿ, ಉಪಸ್ಥಿತರಿದ್ದರು. ಸಾಹಿತಿ ಮಂಜುನಾಥ ಕಳಸನ್ನವರ ನೀರೂಪಿದರು. ಪ್ರಕಾಶಗೌಡ ಪಾಟೀಲ ವಂದಿಸಿದರು..