ಕನಕ ಜಯಂತಿ ಪೂರ್ವಭಾವಿ ಸಭೆ

ಲೋಕದರ್ಶನ ವರದಿ

ಬ್ಯಾಡಗಿ21: ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ವತಿಯಿಂದ ದಾಸಶ್ರೇಷ್ಠ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸ್ವಾಗತಾರ್ಹ, ಆದರೆ ಇದರಿಂದ ಪಟ್ಟಣದಲ್ಲಿ ಕನಕ ಜಯಂತಿ ಗೌಣವಾಗುತ್ತಿದ್ದು ಸರಕಾರ ನೀಡುತ್ತಿರುವ ಅನುದಾನದಲ್ಲಿ ಪಟ್ಟಣದ ಸಮಾಜ ಬಾಂಧವರಿಗೆ ಸ್ವಲ್ಪ ಮೀಸಲಿಟ್ಟಲ್ಲಿ ಪಟ್ಟಣದಲ್ಲಿ ಕನಕ ಜಯಂತಿ ಆಚರಿಸಲು ಸಹಕಾರಿಯಾಗಲಿದೆ ಎಂದು ಕುರುಬ ಸಮಾಜದ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ ಆಗ್ರಹಿಸಿದರು.

  ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕನಕ ಜಯಂತಿ ಆಚರಣೆಯನ್ನು ತಾಲೂಕಿನ ಪ್ರತಿ ಗ್ರಾಮದಲ್ಲೂ ಸಮಾಜ ಬಾಂಧವರು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. 

     ಕಾಗಿನೆಲೆ ಸುತ್ತ ಮುತ್ತಲ ಗ್ರಾಮದ ಜನರು ಕನಕ ಜಯಂತಿ ದಿನ ಕಾಗಿನೆಲೆ ಗುರುಪೀಠಕ್ಕೆ ತೆರಳಿ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಆದರೆ ಬ್ಯಾಡಗಿ ಪಟ್ಟಣದಲ್ಲಿಯೂ ಸಹ ಸಾಕಷ್ಟು ಕುರುಬ ಸಮಾಜದ ಜನರಿದ್ದು ಜಯಂತಿ ಆಚರಣೆಗೆ ಹಿನ್ನಡೆಯಾಗುತ್ತಿದೆ ಆದ್ದರಿಂದ ಬರುವ ಅನುದಾದಲ್ಲಿ ಸ್ವಲ್ಲ ಭಾಗ ನೀಡಿದ್ದೇ ಆದಲ್ಲಿ ನಮ್ಮಗಳ ಅಲ್ಪ ಸೇವೆಯೊಂದಿಗೆ ಜಯಂತಿಯನ್ನು ಸಡಗರದಿಂದ ಆಚರಸಿಲು ಸಾಧ್ಯವಾಗಿಲಿದೆ ಎಂದರು.

 ಬೀರಪ್ಪ ಬಣಕಾರ ಮಾತನಾಡಿ, ಕನಕದಾಸರ ಕರ್ಮಭೂಮಿ ಕಾಗಿನೆಯಲ್ಲಿ ಕನಕ ಜಯಂತಿ ಮಾಡಲು ನಾವೇಲ್ಲರೂ ಬದ್ಧರಾಗಿದ್ದೇವೆ ಅಲ್ಲದೇ ಈ ಬಾರಿ ಪಟ್ಟಣದ ಯುವ ಉತ್ಸಾಹಿ ಯುವಕರು ಬ್ಯಾಡಗಿಯಲ್ಲಿಯೂ ಜಯಂತಿಯನ್ನು ವಿಜೃಂಭಣೆಯಿಂದ ಮಾಡಲು ಮುಂದಾಗುತ್ತಿದ್ದಾರೆ ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜೊತೆ ಚಚರ್ಿಸಿ ನಿಧರ್ಾರ ತಿಳಿಸುವಂತೆ ತಹಶೀಲ್ದಾರಗೆ ಮನವಿ ಮಾಡಿದರು.

 ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕನಕ ಜಯಂತಿ ಮಾಡುವ ಕುರಿತಂತೆ ಸಮಾಜ ಬಾಂಧವರ ಸಲಹೆಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಗಳ ಜೊತೆಗೂಡಿ ಚಚರ್ಿಸಿ ಅನುದಾನ ನೀಡಲು ಬರುವುದಾದೆ ನೀಡಿ ಇದರಿಂದ ಪಟ್ಟಣದಲ್ಲಿ ಕನಕ ಜಯಂತಿ ಸಡಗರದಿಂದ ನೇರವೇರಲಿ ಎಂದು ತಹಶಿಲ್ದಾರ ಕೆ.ಗುರುಬಸವರಾಜ ಅವರಿಗೆ ಸೂಚಿಸಿದರು. ಈ ಸಂದರ್ಬದಲ್ಲಿ ಮಲ್ಲೇಶಪ್ಪ ಬಣಕಾರ, ಬಿ.ಎಂ.ಜಗಾಪುರ. ಯಮನೂರಪ್ಪ ಉಜನಿ, ಮೊಹನ ಬಿನ್ನಾಳ, ನಿಂಗರಾಜ ಆಡಿನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.