ಹಾರೂಗೇರಿಯಲ್ಲಿ ಕಲ್ಲಪ್ಪಣ್ಣಾ ಆವಾಡೆ ಬ್ಯಾಂಕ್ ಶಾಖೆ ಉದ್ಘಾಟನೆ
ಹಾರೂಗೇರಿ, 26 : ರೈತರ ಹಾಗೂ ವ್ಯಾಪಾರಸ್ಥರ ಜೀವನಾಡಿಯಾಗಿರುವ ಕಲ್ಲಪ್ಪಣ್ಣಾ ಆವಾಡೆ ಇಂಚಲಕರಂಜಿ ಜನತಾ ಸಹಕಾರಿ ಬ್ಯಾಂಕಿನ ಹಾರೂಗೇರಿ ಶಾಖೆ ಇಲ್ಲಿನ ಜನರ ಮೆಚ್ಚುಗೆ ಪಡೆದು ವಿಶ್ವಾಸ ಗಳಿಸಲಿದೆ. ಜನರು ಬ್ಯಾಂಕ್ ಏಳಿಗೆಗೆ ಕೈಜೋಡಿಸಬೇಕೆಂದು ಬ್ಯಾಂಕ್ ಅಧ್ಯಕ್ಷ ಸ್ವಪ್ನಿಲ್‌ದಾದಾ ಆವಾಡೆ ಹೇಳಿದರು.
ಪಟ್ಟಣದ ಗೋಕಾಕ ರಸ್ತೆಯ ಕರ್ಣವಾಡಿ ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ ಸಂಜೆ ಕಲ್ಲಪ್ಪಣ್ಣಾ ಆವಾಡೆ ಇಂಚಲಕರಂಜಿ ಜನತಾ ಸಹಕಾರಿ ಬ್ಯಾಂಕ್ ಹಾರೂಗೇರಿ ಶಾಖೆಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯ ಸೇರಿ ಒಟ್ಟು 54 ಶಾಖೆಗಳನ್ನು ಹೊಂದಿದ್ದು, ಇಲ್ಲಿನ ಜನರ ಆಶಯದಂತೆ ಹಾರೂಗೇರಿ ಮತ್ತು ಅಥಣಿ ಸೇರಿ ಕರ್ನಾಟಕದಲ್ಲಿ 8 ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಒಟ್ಟು 2700ಕೋಟಿ ರೂ. ಠೇವಣಿಯಿದ್ದು, 1700ಕೋಟಿ ರೂ. ಸಾಲ ವಿತರಿಸಲಾಗಿದೆ. ನಮ್ಮ ಬ್ಯಾಂಕಿನಲ್ಲಿ ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಮೊಬೈಲ್ ಬ್ಯಾಂಕಿಂಗ್, ವಿದೇಶಿ ವಿನಿಮಯ, ಭೀಮ್ ಯ್ಯಾಪ್, ಯುಪಿಐ, ಎಟಿಎಮ್, ಸಿಡಿಎಂ, ಅಟೋ ಪಾಸ್ ಬುಕ್ ಸೇವೆಗಳನ್ನು ಒದಗಿಸಲಾಗಿದೆ. ಕರ್ನಾಟಕ ಸರ್ಕಾರದಿಂದ ಬ್ಯಾಂಕ್ ಮೂಲಕ ಎಲ್ಲ ಸವಲತ್ತು ನೀಡಲಾಗುತ್ತಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಇಂಚಲಕರಂಜಿ ನಗರಸಭೆ ಮಾಜಿ ಅಧ್ಯಕ್ಷೆ ಈಶ್ವರಾತಾಯಿ ಆವಾಡೆ ಮಾತನಾಡಿ, ಗ್ರಾಹಕರ ಆರ್ಥಿಕಾಭಿವೃದ್ಧಿ ಮತ್ತು ಸಾಮಾಜಿಕ ಅನುಕೂಲಕ್ಕಾಗಿ ಕಲ್ಲಪ್ಪಣ್ಣಾ ಆವಾಡೆ ಸಹಕಾರಿ ಶಾಖೆಯನ್ನು ಹಾರೂಗೇರಿಯಲ್ಲಿ ತೆರೆಯಲಾಗಿದೆ. ಗ್ರಾಹಕರು ಠೇವು ಇಡುವುದರ ಜೊತೆಗೆ ಬ್ಯಾಂಕಿನ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು.
ಮಹಾರಾಷ್ಟ್ರ ಸ್ಟೇಟ್ ಕೋ-ಆಪ್ ಕ್ರೇಡಿಟ್ ಬ್ಯಾಂಕಿನ ಅಧ್ಯಕ್ಷೆ ವೈಶಾಲಿತಾಯಿ ಆವಾಡೆ, ಬ್ಯಾಂಕಿನ ಉಪಾಧ್ಯಕ್ಷ ಸಂಜಯಕುಮಾರ ಅನಿಗೋಳ, ಚಂದ್ರಕಾಂತ ಚೌಗಲಾ, ಬಂಡುಪಂತ ಲಾಡ್, ಮುಖ್ಯಕಾರ್ಯನಿವಾಹಕ ಅಧಿಕಾರಿ ಸಂಜಯ ಶಿರಗಾಂವೆ, ಅನೀಲ ನೇರಲೆ, ಶಾಖಾ ವ್ಯವಸ್ಥಾಪಕ ಸನ್ನತಕುಮಾರ ಪಾಟೀಲ, ಡಾ.ಸಿ.ಆರ್.ಗುಡಸಿ, ಗೀರೀಶ ದರೂರ, ಜೀನೇಂದ್ರ ಖೇಮಲಾಪೂರೆ, ಭೀಮಗೌಡ ಕರ್ಣವಾಡಿ, ಡಾ.ಪುಷ್ಪದಂತ ದಾನಿಗೊಂಡ, ಡಾ.ಆಲಗೂರ, ಶ್ರೀಧರ ಸದಲಗಿ, ಬಾಬೂ ಹಳ್ಳೂರ, ಶಾಂತಿನಾಥ ಅಸ್ಕಿ, ಸಿದ್ದಪ್ಪ ನಾಗನೂರ, ಚಂದ್ರಕಾಂತ ಆಸಂಗಿ, ರಾಜು ಹಳಿಂಗಳಿ, ಅನೀಲ ಹಂಜೆ, ಪ್ರದ್ಯುಮ್ನಕುಮಾರ ಬದ್ನಿಕಾಯಿ, ಭೂಪಾಲ ಆಲಗೂರ, ಶ್ರೀನಾಥ ಕಮತಗಿ, ಹಣಮಂತ ಯಲಶೆಟ್ಟಿ, ಜ್ಞಾನೇಶ್ವರ ಧರ್ಮಟ್ಟಿ, ಡಿ.ಎಸ್.ಡಿಗ್ರಜ್ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.