ಲೋಕದರ್ಶನ ವರದಿ
ತಾಳಿಕೋಟೆ 28:ಐತಿಹಾಸಿಕ ಕೋಟೆ ನಾಡಿನಲ್ಲಿ ವಿಜಯಪುರ ಜಿಲ್ಲಾ 16 ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದಲ್ಲಿ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು. ಸಮ್ಮೇಳನದ ಸವರ್ಾಧ್ಯಕ್ಷರ ಭವ್ಯ ಮೆರವಣಿಗೆಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಅವರು ಚಾಲನೆ ನೀಡಿದರು.
ಸಮ್ಮೇಳನದ ಸವರ್ಾಧ್ಯಕ್ಷ ಮೆರವಣಿಗೆಯು ಎಸ್.ಕೆ.ಕಾಲೇಜ್ ಮೈಧಾನದಿಂದ ಪ್ರಾರಂಭಗೊಂಡು ವಿಜಯಪುರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಕತ್ರಿ ಜಾರ, ಶಿವಾಜಿ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು ಸಮ್ಮೇಳನದ ಪ್ರಧಾನ ವೇದಿಕೆಗೆ ಆಗಮಿಸಿತು. ಈ ವೇಳೆ ಮೇರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳಾದ ಸಾರವಾಡದ ಶಕ್ತಿ ಕೀಲು ಕುದರೆ ಕುಣಿತ, ಡೋಳ್ಳು ಕುಣಿತ, ಮಲ್ಲಿಕಾಜರ್ುನ ಅಲೇಮಾರಿ ಸಂಸ್ಕೃತಿಕ ಕಲಾ ತಂಡ, ನಂದಿಕೇಶ್ವರದ ಕುಮಾರೇಶ್ವರ ಭಜನಾಮಂಡಳಿಯವರ ನ್ನೋಳಗೊಂಡಂತೆ ಗೊಂಬೆ ಕುಣಿತ, ವಿವಿಧ ಶಾಲಾ ಮಕ್ಕಳಿಂದ ಲೇಜಿಮ್, ಕೋಲಾಟ,ಗಳು ವಿದ್ಯಾ ಭಾರತಿ ಶಾಲೆಯ ವಿದ್ಯಾಥರ್ಿಗಳು ವಾಧ್ಯ ಮೇಳ, ಜೋಡೆತ್ತುಗಳು ವೇದಿಕೆಗೆ ಆಗಮಿಸಿ ನೇರೆದ ಸಾಹಿತ್ಯಾಸಕ್ತ ಗಮನ ಸೇಳೆಯಿತು ಎಸ್.ಕೆ.ಕಾಲೇಜ್ ವಾರಣದಲ್ಲಿ ಬೆಳಿಗ್ಗೆ 9 ಘಂಟೆಗೆ ಸವರ್ಾಧ್ಯಕ್ಷರ ಭವ್ಯ ಮೆರವಣಿಗೆ ಚಾಲನೆ ಕೊಡುವ ಮುಂಚೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ರಾಷ್ಟ್ರ ದ್ವಜಾರೋಹಣವನ್ನು ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಅವರು ಪರಿಷತ್ ದ್ವಜಾರೋಹಣವನ್ನು ನೆರವೇರಿಸಿದರು, ನಾಡದ್ವಜಾರೋಹಣವನ್ನು ಕಸಾಪ ತಾಲೂಕಾ ಅಧ್ಯಕ್ಷ ಶ್ರೀಮತಿ ಸುಮಂಗಲಾ ಕೊಳೂರ ಅವರು ನೆರವೇರಿಸಿದರು.
ನಂತರ ಸಮ್ಮೇಳನದ ಸವರ್ಾಧ್ಯಕ್ಷ ಸಾಹಿತಿ ಪೋ.ಬಿ.ಆರ್.ಪೊಲೀಸ್ಪಾಟೀಲ ಅವರ ಭವ್ಯ ರಥದಲ್ಲಿ ಕೂಡ್ರಿಸಿ ಮೆರವಣಿಗೆಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಚಾಲನೆ ನೀಡಿದರು. ಮೇರವಣಿಗೆಯ ಸಮಯದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ವಿದಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಆರ್.ಎಸ್.ಪಾಟೀಲ(ಕೂಚಬಾಳ), ಜಿಪಂ ಸದಸ್ಯ ಜ್ಯೋತಿ ಅಸ್ಕಿ, ಬಸನಗೌಡ ವಣಕ್ಯಾಳ ಒಳಗೊಂಡಂತೆ ಮೊದಲಾದ ರಾಜಕೀಯ ಧುರಿಣರು, ಮುಖಂಡರುಗಳು ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ ಸಮ್ಮೇಳನ ಮೀರಿಸುವ ರೀತಿಯಲ್ಲಿ ಪಟ್ಟಣದ ಜನರು ಕನ್ನಡ ಸಾಹಿತ್ಯ ಪರಿಷತ್ತುಗೆ ಎಲ್ಲ ರೀತಿಯಿಂದಲೂ ಬೆಂಬಲವನ್ನು ನೀಡಿ ಪಟ್ಟಣದ ತುಂಬೆಲ್ಲಾ ಕನ್ನಡದ ದ್ವಜಗಳನ್ನು ನೆಟ್ಟು ಹಾಗೂ ಸಮ್ಮೇಳನಕ್ಕೆ ಬರು ಹೋಗುವ ಕನ್ನಢಾಭಿಮಾನಿಗಳಿಗೆ ಸ್ವಾಗತ ಕೋರವ ಕಟೌಟ್ಗಳು ರಾರಾಜುಸುಮಂತೆ ಮಾಡಿದ್ದಲ್ಲದೇ ಪಟ್ಟಣದ ತುಂಬೆಲ್ಲಾ ಭಾರಿಸು ಕನ್ನಡ ಡಿಂ ಡಿಂ ವಾ ಎಂಬಂತೆ ಹಬ್ಬದ ವಾತಾವರಣ ನಿಮರ್ಾಣವಾಗುವಲ್ಲಿ ಶ್ರಮಿಸಿದ್ದು ಸಮ್ಮೇಳನಕ್ಕೆ ಆಗಮಿಸಿದ ಕನ್ನಡಾಭಿಮಾನಿಗಳಿಗೆ ಸಂತೋಷದ ಕೂಟವನ್ನು ಏರ್ಪಡಿಸಿದ್ದಂತೆ ಮಾರ್ಪಟ್ಟಿತು.
ಎಚ್.ಎಸ್.ಪಾಟೀಲ ಶಾಲಾ ಆವರಣದ ಸಮ್ಮೇಳನದ ಮುಖ್ಯ ವೇದಿಕೆಯ ಅಕ್ಕ ಪಕ್ಕದಲ್ಲಿ ಬೇಡಿಕೆಯಂತೆ ನೆತ್ತಿಗೆ ಜ್ಞಾನದ ಹೊತ್ತಿಗೆಯನ್ನು ತುಂಬುವಂತಹ ರಾಜ್ಯ ಸಮ್ಮೇಳನದ ಮಾದರಿಯಲ್ಲಿ 50 ಮಳಿಗೆಗಳನ್ನು ಸ್ಥಾಪನೆಗೊಂಡಿದ್ದವಲ್ಲದೇ ಮಳಿಗೆಗಳಲ್ಲಿ ಎಲ್ಲ ಸಾಹಿತಿಗಳ ಅನೇಕ ಜ್ಞಾನದ ಹೊತ್ತಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದ ತುಂಬೆಲ್ಲಾ ಕನ್ನಡದ ಕಲರವ ಅರಿಳಿಸುವ ಕನ್ನಡ ನಾಡು ನುಡಿ ಜಾತ್ರೆ ಬಿಂಬಿಸುವ ದ್ವಜಗಳಿಂದ ಹಾಗೂ ಪಟ್ಟಣದ ಮುಖ್ಯವೃತ್ತವಾದ ವಿಜಯಪುರ ವೃತ್ತದ ನಾಲ್ಕು ದ್ವಾರಗಳಿಗೆ ಸ್ವಾಗತ ಕೋರುವ ಕಮಾನಗಳು ವಿಜೃಂಬಿಸುತ್ತಿವೆ. ಸಮ್ಮೇಳನಾಧ್ಯಕ್ಷರ ಮೇರವಣಿಗೆ ಪ್ರಾರಂಭಗೊಳ್ಳುವ ಮುಖ್ಯ ರಸ್ತೆಯಿಂದ ಹಿಡಿದು ಸಮ್ಮೇಳನದ ಪ್ರಧಾನ ವೇದಿಕೆ ಎಚ್.ಎಸ್.ಪಾಟೀಲ ಕಾಲೇಜ್ ಮೈಧಾನದ ವರೆಗೆ ಪರಪರಿಗಳಿಂದ ಅಲಂಕೃತಗೊಳಿಸಲಾಗಿತ್ತು
ಒಟ್ಟಾರೆ ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಜಯಪುರ ಜಿಲ್ಲಾ 16 ನೇ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ ಸಮ್ಮೇಳನದ ಮಾದರಿಯಲ್ಲಿ ಜರುಗಿಸಲು ಪಟ್ಟಣದ ತುಂಬೆಲ್ಲಾ ಅಲಂಕೃತಗೊಳಿಸಿ ಸಾಹಿತ್ಯಾಭಿಮಾನಿಗಳಿಗೆ, ಕನ್ನಢಾಭಿಮಾನಿಗಳಿಗೆ ಕೈ ಬೀಸಿ ಕರೆಯುಂತೆ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿಮರ್ಾಣವಾಗಿತ್ತು. ಸಮ್ಮೇಳನದಲ್ಲಿ ಕನ್ನಢಾಭಿಮಾನಿಗಳಿಗೆ ಕೂಡ್ರಲು 5 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದರಿಂದ ಸಮ್ಮೇಳನಕ್ಕೆ 10 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸಿದ್ದರಿಂದ ಸಮ್ಮೇಳನವನ್ನು ನಿಂತುಕೊಂಡೇ ವಿಕ್ಷೀಸಿದರು.