ಕಾಗವಾಡ 25: ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಪ್ರವೇಶ ದ್ವಾರವಾಗಿರುವ ಕಾಗವಾಡದಲ್ಲಿ ದೇಶದ ಸ್ವಾತಂತ್ರ್ಯದ ಬಳಿಕ ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಇವರ ಅನುದಾನದಿಂದ 1.60 ಕೋಟಿ ರೂ. ವೆಚ್ಚದಲ್ಲಿ ಕಟ್ಟಿಸಿದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಕೊನೆಗೊಂಡಿದ್ದು, ಉದ್ಘಾಟನೆ ಪ್ರತೀಕ್ಷೆಯಲ್ಲಿದೆ.
ಕನರ್ಾಟಕ-ಮಹಾರಾಷ್ಟ್ರ ರಾಜ್ಯಗಳಿಂದ ದಿನನಿತ್ಯ ಕಾಗವಾಡ ಬಸ್ ನಿಲ್ದಾಣ ಮುಖಾಂತರ 700 ಬಸ್ಗಳು ಸಂಚಾರಿಸುತ್ತಿವೆ. ನಿಲ್ದಾಣದಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬಾಗಲಕೋಟ, ಬೆಳಗಾವಿ, ಮಹಾರಾಷ್ಟ್ರದ ಮುಂಬೈ, ಪುಣೆ, ರತ್ನಾಗೀರಿ, ಕನಕವಲಿ, ಸೋಲಾಪುರ ಮುಂತಾದ ನಗರಗಳಿಗೆ ಬಸ್ಗಳು ಸಂಚರಿಸುತ್ತಿವೆ.
ಕಾಗವಾಡ ಗಡಿಭಾಗದ ಮುಖ್ಯ ತಾಲೂಕಾ ಕೇಂದ್ರವಾಗಿದೆ. ದಿನನಿತ್ಯ ಸಾವಿರಾರು ಪ್ರಯಾಣಿಕರು, ಶಾಲೆಯ ವಿದ್ಯಾಥರ್ಿಗಳು ಸಂಚಾರಿಸುತ್ತಾರೆ. ಬಸ್ ನಿಲ್ದಾಣದ ಕೊರತೆಯಿತ್ತು. ಇದನ್ನು ಸಂಸದರು ಆಲಿಸಿ ಆಗಿನ ಶಾಸಕ ರಾಜು ಕಾಗೆ ಇವರು ಸಹ ಪ್ರಯತ್ನಿಸಿ, ಹೈಟೆಕ್ ಬಸ್ ನಿಲ್ದಾಣ ನಿಮರ್ಿಸಲು ಮುಂದಾಗಿ ಕಳೇದ ವರ್ಷ ಕಟ್ಟಡಕ್ಕೆ ಪೂಜೆ ಸಲ್ಲಿಸಿದರು. ಒಂದೆ ವರ್ಷದಲ್ಲಿ ಸುಸಜ್ಜಿತ ಕಟ್ಟಡ ನಿಮರ್ಾಣಗೊಂಡಿದೆ.
ಸಾವಿರಾರು ಪ್ರಯಾಣಿಕರು ರಸ್ತೆ ಬಳಿ ನಿಂತು ಪ್ರಯಾಣ:
ಕಳೆದ 1 ವರ್ಷದ ಹಿಂದೆ ಇಲ್ಲಿಯ ಹಳೆಯ ನಿಲ್ದಾಣ ನೆಲಸಮಮಾಡಿ, ಹೊಸ ಕಟ್ಟಡ ಪ್ರಾರಂಭಿಸಿದ್ದಾರೆ. ದಿನನಿತ್ಯ 2 ರಾಜ್ಯಗಳಿಂದ ಈಗಲೂ 700 ಬಸ್ಗಳು ಸಂಚರಿಸುತ್ತಿವೆ. ಈ ಎಲ್ಲ ಬಸ್ಗಳಿಗೆ ಪ್ರಯಾಣ ಸಂಪೂರ್ಣ ದಿನ ಬಿಸಿಲಿನಲ್ಲಿ ರಸ್ತೆ ಬಳಿ ನಿಂತು ಪ್ರಯಾಣಿಕರು, ನೂರಾರು ವಿದ್ಯಾಥರ್ಿಗಳು ಸಂಚರಿಸುತ್ತಿದ್ದಾರೆ.
ಬಸ್ ನಿಲ್ದಾಣ ಉದ್ಘಾಟಿಸಿರಿ:
ಕಾಗವಾಡ ಬಸ್ ನಿಲ್ದಾಣ ಕಟ್ಟಡ ಕೊನೆಗೊಂಡಿದ್ದು, ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಸಾರಿಗೆ ಇಲಾಖೆಯ ಅಧಿಕಾರಿಗಳು ಕಟ್ಟಿಸಿದ ಹೈಟೆಕ್ ಬಸ್ಸ್ ನಿಲ್ದಾಣ ಉದ್ಘಾಟಿಸಿ ಚಾಲನೆ ನೀಡಿ, ಅನುಕೂಲ ಮಾಡಲಿ ಎಂಬುದು ಅನೇಕ ಪ್ರಯಾಣಿಕರ ಬೇಡಿಕೆಯಾಗಿದೆ.