ಕೆ.ಎಲ್.ಇ. ಆಸ್ಪತ್ರೆಯು ಉತ್ತಮ ಸೇವೆಗೆ ಸದಾ ಸಿದ್ದ : ಮುನವಳ್ಳಿ

ಲೋಕದರ್ಶನ ವರದಿ

ಅಂಕೋಲಾ 8: ಹೊಸ ಹೊಸ ಸುಧಾರಣೆಗಳೊಂದಿಗೆ ನುರಿತ ತಜ್ಞ ವೈದ್ಯರನ್ನು ನೇಮಿಸುವ ಮೂಲಕ ಅಂಕೋಲಾ ಜನರ ಹೆಚ್ಚಿನ ಸೇವೆಗೆೆ ಒತ್ತು ನೀಡಲಾಗುವುದಲ್ಲದೆ, ಡಾ.ಲತಾ ಇವರ ಸ್ಥಾನಿಕ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿಯೊಂದಿಗೆ ಪ್ರೇಮಾತಾಯಿ ಪಿಕಳೆಯವರ ಆಶಯಕ್ಕನುಗುಣವಾಗಿ ಈ ಭಾಗದ ಸವರ್ೋತೋಮುಖ ಅಭಿವೃದ್ಧಿಗೆ ಕೆ.ಎಲ್.ಇ. ಸಂಸ್ಥೆ ಬದ್ದವಾಗಿದೆ ಎಂದು ಸಂಸ್ಥೆಯ ನಿದರ್ೇಶಕ ಶಂಕರಣ್ಣ ಮುನವಳ್ಳಿ ಹೇಳಿದರು. 

ಕೆ.ಎಲ್.ಇ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾದ ಪತ್ರಿಕಾಗೋಷ್ಠಿಯ ಮುಖ್ಯಸ್ಥರಾಗಿ ಅವರು ಮಾತನಾ ಡಿದರು. ಈ ಹಿಂದೆ ಕೆ.ಎಲ್.ಇ. ಸಂಸ್ಥೆಯ ಸ್ಥಾನಿಕ ಆಡಳಿತಾಧಿಕಾರಿಯಾಗಿ ಡಾ.ಡಿ.ಎಲ್. ಭಟ್ಕಳವರು ದೀಘರ್ಾವಧಿಯಲ್ಲಿ ಉತ್ತಮ ಸೇವೆ ನೀಡಿ ಹೆಸರಾಗಿದ್ದರು. ಹೊಸ ಬದಲಾವಣೆಯನ್ನುವಂತೆ ಈಗ ಕಮಲಾ ಮೆಡಿಕಲ್ ಆಸ್ಪತ್ರೆಯಲ್ಲಿ ಸುಮಾರು 20 ವರ್ಷಗಳಿಂದ ಸ್ತ್ರೀರೋಗ ತಜ್ಞೆಯಾಗಿ ಅನುಭವಿರುವ ಡಾ.ಲತಾ ಇವರಿಗೆ ಮುಖ್ಯಸ್ಥರಾಗಿ ಜವಬ್ದಾರಿ ನೀಡಲಾಗಿದ್ದು, ಹಿಂದಿನ ಮತ್ತು ಇಂದಿನ ಆಡಳಿತ ಮಂಡಳಿಯೊಂದಿಗೆ ಜನಪರ ಸೇವೆಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಕೆ.ಎಲ್.ಇ. ಸಂಸ್ಥೆ ಆರಂಭಿಸಿದ ಯಾವುದೇ ಅಂಗಸಂಸ್ಥೆಗಳನ್ನು ಮುಚ್ಚುವ ಇಲ್ಲವೆ ಪರಭಾರೆ ಮಾಡುವ ಉದ್ದೇಶವಿಲ್ಲಾ. ಲಾಭ-ಹಾನಿ ಲೆಕ್ಕ ಹಾಕುತ್ತಾ ಕೂಡ್ರುವ ಬದಲು ಜನರ ಸೇವೆಗಾಗಿ ವ್ಯವಹಾರಿಕ ಬುದ್ದಿಯನ್ನು ಮರೆತು ಸೇವೆಯೇ ಪರಮ ಧ್ಯೇಯವಾಗಿರುವ ಡಾ.ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಅಂದು ನಮ್ಮ ಸಂಸ್ಥೆಯ ಹುಟ್ಟಿಗೆ ಕಾರಣರಾದ ಸಪ್ತಷರ್ಿಗಳ ಧ್ಯೆಯೋದ್ಧೇಶಗಳಿಗೆ ಚ್ಯುತಿಬಾರದಂತೆ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡಲಾಗುವುದು ಎಂದರು. 

ಡಾ.ಡಿ.ಎಲ್.ಭಟ್ಕಳ ಅವರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಈ ಹಿಂದೆ ನಮ್ಮ ಕಮಲಾ ಮೆಡಿಕಲ್ ಆಸ್ಪತ್ರೆಗೆ ಪ್ರತಿ ತಿಂಗಳು ಅಂದಾಜು 40 ಸಾವಿರದಷ್ಟು ಜನ ಬೇಟಿ ನೀಡಿ, ಒಳ-ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದದ್ದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಮತ್ತು ಸರಕಾರಿ ಆಸ್ಪತ್ರೆಯ ಸುಧಾರಣೆಯಿಂದಾಗಿ ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂದರು. 

ಈ ಸಂದರ್ಭದಲ್ಲಿ ಸಂಸ್ಥೆಯ ನಿದರ್ೇಶಕ ಹಾಗೂ ಬೈಲಹೊಂಗಲ ಮಾಜಿ ಶಾಸಕ ಡಾ.ವಿ.ಐ. ಪಾಟೀಲ್, ಸಂಯೋಜಕ ನಟರಾಜ್, ಡಾ.ಲತಾ, ಡಾ. ಸಂಜೀವ ನವಲ್ಯಾಳ, ನೂತನ ವೈದ್ಯರಾದ ಡಾ. ಮನೀಷ್ಸಿಂಗ್ (ಎಂ.ಡಿ), ಡಾ.ಅನಿಲ, ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಅಧೀಕ್ಷಕ ಉಮೇಶ ನಾಯ್ಕ, ಆಸ್ಪತ್ರೆಯ ಮೇಲುಸ್ತು ವಾರಿ ಪ್ರವೀಣ ಬಿ. ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.