ಪತ್ರಕರ್ತರು ಕಾವಲುಗಾರನಂತೆ ಕಾರ್ಯ ನಿರ್ವಹಿಸಬೇಕು: ಕರಡಿ

ಗಂಗಾವತಿ 28: ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳು ಕಲುಷಿತಗೊಂಡಿವೆ. ಆದರೆ ಪತ್ರಿಕಾರಂಗ ಮಾತ್ರ ತನ್ನ ಪಾವಿತ್ರ್ಯವನ್ನು ಕಾಪಾಡಿಕೊಂಡು ಬಂದಿದೆ ಎಂದು ಸಂಸದ ಕರಡಿ ಸಂಗಣ್ಣ ಕರಡಿ ತಿಳಿಸಿದರು.

ಸಂಸದರು ತಮ್ಮ ಅನುದಾನದಲ್ಲಿ ಪತ್ರಕರ್ತರ ಭವನದ ಕಟ್ಟಡ ನವೀಕರಣಗೊಳ್ಳಲು 5ಲ.ರು. ಅನುದಾನ ನೀಡಿದ್ದು ಬುಧವಾರ ನವೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆಳುವ ಸರಕಾರಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಾವಲುಗಾರ ನಾಯಿಯಂತೆ ಛಾಟಿ ಏಟು ಬೀಸುತ್ತ ಪತ್ರಕರ್ತರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ರಾಜಕಾರಣಿಗಳ ಅಂಕುಡೊಂಕುಗಳನ್ನು ಬಯಲುಗೊಳಿಸುವ ಮೂಲಕ ಅವರನ್ನು ಎಚ್ಚರ ಮಾಡುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಸಂಸದರು ಹೇಳಿದರು.

ಜಿಲ್ಲೆಯಲ್ಲಿ ಗಂಗಾವತಿ ಪತ್ರಕರ್ತರು ಸದಾ ಕ್ರಿಯಾಶೀಲರಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇದು ತಮಗೆ ಸಂತಸ ಉಂಟು ಮಾಡಿದೆ. ಹೈದ್ರಾಬಾದ ಕನರ್ಾಟಕ ಪ್ರದೇಶದಲ್ಲಿ ಇಲ್ಲಿರುವ ಪತ್ರಿಕಾಭವನದಂತೆ ಬೇರೆಡೆ ಇಲ್ಲ ಎಂದು ಹೇಳಿದರು.

ಶಾಸಕರಿಂದ 5ಲಕ್ಷ.ರೂ ಅನುದಾನ: ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿಯವರ ಮನವಿಯ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಪರಣ್ಣ ಮುನವಳ್ಳಿಯವರು ಭವನದ ಹಿಂಭಾಗದಲ್ಲಿ ಅರ್ಧಕ್ಕೆ ನಿಂತಿರುವ ಕಟ್ಟಡ ಮುಂದುವರೆಸಲು ಮತ್ತು ಪತ್ರಕರ್ತರ ಗ್ರಂಥಾಲಯಕ್ಕೆ 5 ಲ.ರು. ಅನುದಾನ ನೀಡುವದಾಗಿ ಘೋಷಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘದ ಮಾಧ್ಯಮ ಪ್ರಶಸ್ತಿ ಪುರಸ್ಕಾರಗೊಂಡಿರುವ ಪ್ರಜಾಪ್ರಪಂಚ ದಿನಪತ್ರಿಕೆ ಸಂಪಾದಕ ವೀರೇಶ್ ಇರಕಲ್ ಅವರನ್ನು ಸನ್ಮಾನಿಸಲಾಯಿತು.  ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ವೀರೇಶ್ ಬಳ್ಳಾರಿ, ಜಿಲ್ಲಾ ಕಾರ್ಯದಶರ್ಿಗಳಾದ ವೃಷಬೇಂಧ್ರಸ್ವಾಮಿ ನವಲಿ ಹಿರೇಮಠ, ವೆಂಕಟೇಶ ಕುಲಕಣರ್ಿ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ನಗರಸಭೆ ಸದಸ್ಯರಾದ ಸಿದ್ದಾಪುರ ರಾಚಪ್ಪ, ನವಲಿ ವಾಸುದೇವ, ಸಿಂಗನಾಳ ಉಮೇಶ ಪಾಲ್ಗೊಂಡಿದ್ದರು.