ಲೋಕದರ್ಶನ ವರದಿ
ಇಂಡಿ 02:ತನ್ನ ಸಮಸ್ಯೆಯನ್ನೇ ಮರೆತು ಸದಾ ಅನೇಕ ಕಷ್ಟ ಹಾಗೂ ಭಯಾನಕ ಸಂದರ್ಭದಲ್ಲೂ ತನ್ನ ಜೀವದ ಹಂಗು ತೊರೆದು ಸಾಮಾಜಿಕ ಸಮಸ್ಯೆಗಳನ್ನು ಎತ್ತಿತೋರಿಸಿ ಆಡಳಿತಾರೂಢ ಸರಕಾರದಿಂದ ಸಮಸ್ಯೆಗೆಸ್ಪಂದಿಸುವಂತೆ ಪತ್ರಕರ್ತರು ಸದಾ ಕಾರ್ಯ ಮಾಡುತ್ತಾರೆ ಎಂದು ಪತ್ರಕರ್ತ ಪರಶುರಾಮ ಭಾಸಗಿ ಅಭಿಪ್ರಾಯಪಟ್ಟರು
ಅವರು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಬೆಂಗಳೂರು ತಾಲೂಕು ಘಟಕ ಇಂಡಿ ಇವರು ಪಟ್ಟಣದಲ್ಲಿ ಹಮ್ಮಿಕೊಂಡ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸಚಿವರಿಗೆ,ಶಾಸಕರಿಗೆ ಮತ್ತು ಜಿಲ್ಲಾಘಟಕದ ನೂತನ ಪದಾದಿಕಾರಿಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಪತ್ರಕರ್ತರು ತನ್ನ ಸಮಸ್ಯೆಯನ್ನೇ ಮರೆತು ಸದಾ ಅನೇಕ ಕಷ್ಟ ಹಾಗೂ ಭಯಾನಕ ಸಂದರ್ಭದಲ್ಲೂ ತನ್ನ ಜೀವದ ಹಂಗು ತೊರೆದು ಸಾಮಾಜಿಕ ಸಮಸ್ಯೆಗಳನ್ನು ಎತ್ತಿತೋರಿಸಿ ಆಡಳಿತಾರೂಢ ಸರಕಾರದಿಂದ ಸಮಸ್ಯೆಗೆಸ್ಪಂದಿಸುವಂತೆ ಪತ್ರಕರ್ತರು ಸದಾ ಕಾರ್ಯ ಮಾಡುತ್ತಾರೆ ಸಮಸ್ಯೆಗಳಾದಾಗ ಗೊಲಿಬಾರ ನಡೆದಾಗ ಸುದ್ದಿ ಮಾಡಲು ಹೋದ ಅನೇಕಪತ್ರಕರ್ತರು ತಮ್ಮ ಅಂಗಾಂಗಳನ್ನು ಕಳೆದುಕೊಂಡ ಉದಾಹರಣೆಗಳಿವೆ ಸದಾ ನೋವಿನಲ್ಲಿರುವ ಜನರ ಕಣ್ಣಿರುಒರೆಸುವ ಪತ್ರಕರ್ತರ ಕಣ್ಣಿರು ಒರೆಸುವವರಿಲ್ಲ ಪತ್ರಕರ್ತರಿಗೇ ಸಾಕಷ್ಟು ಸಮಸ್ಯೆಗಳಿವೆ. ಸರಿಯಾದ ಸಂಬಳವಿಲ್ಲದೇ ಅದೆಷ್ಟೋ ಪತ್ರಕರ್ತರು ತೊಂದರೆ ಅನುಭವಿಸುತ್ತಿದ್ಧರೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಇನ್ನು ಅನೇಕ ಸಮಸ್ಯೆಗಳಿವೆ ಜನರ ಸಮಸ್ಯೆಗಳನ್ನು ಸರಕಾರಕ್ಕೆ ತೋರಿಸುವುದು ಜನಪ್ರತಿನಿಧಿಗಳ ಗಮನಕ್ಕೆ ತರಲು ಸಮಸ್ಯೆಗಳನ್ನು ಬರೆಯಬೇಕಾಗುತ್ತದೆ ಎಂದು ಅವರು ಹೇಳಿದರು ಪತ್ರಕರ್ತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುವಂತೆ ಮಾಡಲು ಈ ಸಂಘಟನೆಯ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಸೀಲದಾರ ಸಿದ್ದರಾಯ ಭೋಸಗಿ ಮಾತನಾಡಿ ನಾಲ್ಕನೆಯ ಅಂಗವಾದ ಪತ್ರಿಕಾ ರಂಗದಲ್ಲಿ ಪತ್ರಕರ್ತರು ಸಲ್ಲಿಸುವ ಸೇವೆ ನಿಜವಾಗಿಯೂ ಸಾರ್ಥಕಪೂರ್ಣವಾದುದುನಿಮ್ಮ ತೊಂದರೆಯನ್ನು ಮರೆತು ದುರ್ಬಲರ ದ್ವನಿಯಾಗಿ ಸಲ್ಲಿಸುವ ನಿಮ್ಮ ಸೇವೆ ಅತ್ಯಂತ ಮಹತ್ವಪೂರ್ಣ. ವಾಸ್ತವ ವರದಿಸದಾ ನಿಮ್ಮಿಂದ ಹೊರಬರಲಿ ನಿಮ್ಮ ಬರವಣಿಗೆ ಓದುಗರ ಹೃದಯ ಮುಟ್ಟಿ ಸಮಾಜದ ಸಮಸ್ಯೆಗೆ ಸ್ಪಂದಿಸುವಂತಾಗಲಿ ಪತ್ರಿಕಾ ಮೌಲ್ಯ ಕಾಪಾಡುವುದರೊಂದಿಗೆ ಸಂಘ ಅತ್ಯುತ್ತಮವಗಿ ಕಾರ್ಯ ನಿರ್ವಹಿಸಲಿ ಎಂದರು
ಟಿ.ವ್ಹಿ.9 ವರದಿಗಾರ ಅಶೋಕ ಯಡಳ್ಳಿ ಮಾತನಾಡಿ ಅತ್ಯಂತ ಕಷ್ಟದ ಬದುಕು ಗ್ರಾಮೀಣ ಪತ್ರಕರ್ತರದ್ದಾಗಿದ್ದು ಸರಕಾರದ ಸೌಲಭ್ಯಗಳು ಪತ್ರಕರ್ತರಿಗೆ ದೊರಕಿ ಧ್ವನಿ ಇಲ್ಲದವರ ಧ್ವನಿಯಾಗಿ ಅವರು ಕಾರ್ಯ ನಿರ್ವಹಿಸುವಂತಾಗಲಿ ಎಂದರು. ಶಿರಶ್ಯಾಡದ ಅಭಿನವಮುರುಗೇಂದ್ರಮಹಾಸ್ವಾಮಿಗಳು ಸಾನಿಧ್ಯತೆವಹಿಸಿಅಶೀರ್ವಚನ ನೀಡಿದರು. ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಧನ್ಯಕುಮಾರ ಧನಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಕನರ್ಾಟಕ ಪತ್ರಕರ್ತರ ಸಂಘವು ಸಾಹಿತ್ಯ ದಿಗ್ಗಜ ಡಿ.ವಿ.ಜಿ ಅವರು ಪ್ರಾರಂಭಿಸಿದವರು ಇಲ್ಲಿ ರಾಜ್ಯಾದ್ಯಂತ ಸುಮಾರು 7 ಸಾವಿರ ಸದಸ್ಯರನ್ನು ಹೊಂದಿರುವ ಸಂಘವಾಗಿದೆ. ಅಲ್ಲದೇ ಪತ್ರಕರ್ತರ ಹಿತಾಶಕ್ತಿಯನ್ನು ಕಾಯುವ ರಾಜ್ಯದ ಏಕೈಕ ಸಂಘವಾಗಿದೆ. ಅಲ್ಲದೇ ಈ ಸಂಘವು ಕಾಮರ್ಿಕ ಇಲಾಖೆಯಯಲ್ಲಿ ನೊಂದಣಿಯಾಗಿದೆ. ಈ ಸಂಘವು ಕಾಮರ್ಿಕ ಕಾನೂನು ಪ್ರಕಾರ ನಡೆಯುತ್ತಿದೆ. ಈ ಸಂಘಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೈಸ್ವಾಮಿ, ಹಾಗೂ ಪತ್ರಕರ್ತರರಾದ ಅಜರ್ುಣದೇವ, ಎಸ್.ವ್ಹಿ.ಜಯಸೀಲರಾವ, ಬಿ.ವ್ಹಿ. ಮಲ್ಲಿಕಾಜರ್ುಣಯ್ಯ, ಉದಯ ಟಿ.ವಿಯ ಮುಂಜಾನೆಚಿು ಸತ್ಯ, ಗಂಗಾಧರ ಮೊದಲಿಯಾರ, ಸ್ಭೆರಿದಂತೆ ಹತ್ತು ಹಲವು ಜನಾನುರಾಗಿ ಪತ್ರಕರ್ತರು ಈ ಸಂಘವನ್ನು ಬೆಳೆಸಿದ್ದಾರೆ. ಈ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕನರ್ಾಟಕ ಸರಕಾರದದಿಂದ ಮಾನ್ಯತ ಪಡೆದ ಸಂಘವಾಗಿದೆ ಹೊರತು ಮತ್ತೇ ಯಾವುದೇ ಸಂಘ ಮಾನ್ಯತೆಯನ್ನು ಪಡೆದಿಲ್ಲ ಎಂದು ತಿಳಿಸಿದರು.
ಅತಿಥಿಗಳಾಗಿ ಪುರಸಭೆ ಅದ್ಯಕ್ಷ ಶ್ರೀಕಾಂತ ಕುಡಿಗನೂರ, ತಾ.ಪಂ.ಅದ್ಯಕ್ಷ ಶೇಖರ ನಾಯಕ, ಜಿ.ಪಂ.ಸದಸ್ಯ ಮಹಾದೇವ ಪೂಜಾರಿ, ತಾ.ಪಂ.ಸದಸ್ಯ ಪ್ರಕಾಶ ಮುಂಜಿ, ಪುರಸಭೆ ಮಾಜೀ ಅದ್ಯಕ್ಷ ಭೀಮನಗೌಡ ಪಾಟೀಲ, ಪಿ.ಎಸ್.ಆಯ್.ರವಿ.ಯಡವಣ್ಣವರ, ಅಂಜುಮನ ಇಸ್ಲಾಂ ಕಮೀಟಿಯ ಸದಸ್ಯ ಮುನ್ನಾ ಬಾಗವಾನ, ಅಂಗನವಾಡಿ ನೌಕರರ ಸಂಘದ ತಾಲೂಕ ಅದ್ಯಕ್ಷೆ ಭಾರತಿ ವಾಲಿ, ಕ್ಷೇತ್ರ ಶೀಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ,ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಶರಣಬಸಪ್ಪ ಮಸಳಿ,ಉಪಾದ್ಯಕ್ಷ ಫಿರೋಜ ರೋಜಿಂದಾರ, ದಿಗ್ವಿಜಯ ಜಿಲ್ಲಾ ವರದಿಗಾರ ಶಶಿಕಾಂತ ಮೆಂಡೆಗಾರ,ರಾಜು ಕುಲಕಣರ್ಿ,ದೌಲತ್ರಯ ವಡವಡಗಿ, ವಿನಾಯಕ ಸೊಂಡೂರ , ದೇವೇಂದ್ರ ಹೆಳವರ, ಸಜೇಂದ್ರ ಲಂಬು, ಅಜೀತ ಧನಶೆಟ್ಟಿ, ಭೀಮಾಶಂಕರ ಮೂರಮನ, ಶ್ರೀಕಾಂತ ದೇವರ, ಖಾಜಾಪಟೇಲ ನಂದ್ರಾಳ,ಅಯೂಬ ನಾಟೀಕಾರ, ಸಾಗರ ಕಾಂಬಳೆ, ವೆಂಕಟೇಶ, ತಾಲೂಕು ಉಪಾಧ್ಯಕ್ಷ ಲಾಲ್ಸಿಂಗ್ ರಾಠೋಡ, ರಾಮಚಂದ್ರ ಸಿಂಪಿ, ಅಬುಶಾಮಾ ಹವಾಲ್ದಾರ, ನಾಗರಾಜ ಆಸಂಗಿ, ಸದ್ದಾಂ ಹುಸೇನ ಜಮಾದಾರ, ಅಲ್ಲಾಭಕ್ಷ ಗೋರೆ, ಹಜರತ ಮುಲ್ಲಾ, ಅನೀಲ ಕಾಖಂಡಕಿ, ಕಿಟ್ಟು ಈಶ್ವರಗೊಂಡ, ಲಕ್ಷ್ಮಣ ಹಿರೇಕುರಬರ, ಸಿದ್ದು ಹತ್ತಳ್ಳಿ, ವಿನಾಯಕ ತಂಗಾ, ಮಹಿಬೂಬ ಬಾಗವಾನ, ಬೀರಪ್ಪ ಹೋಸೂರ, ಶಿವಾನಂದ ಹರಿಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಈದೇ ಸಂದರ್ಭದಲ್ಲಿ ಗಣ್ಯಮಾನ್ಯರನ್ನು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳನ್ನು ಸಂಘದ ವತಿಯಿಒಂದ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರ ಸಂಘದ ಜಿಲ್ಲಾ ಉಪಾದ್ಯಕ್ಷ ರಾಜು ಕುಲಕಣರ್ಿ ಸ್ವಾಗತಿಸಿದರು, ಶಿಕ್ಷಕ ರಾಘವೇಂದ್ರ ಕುಲಕಣರ್ಿ ನಿರೂಪಿಸಿದರು, ಅಬುಶಾಮ ಹವಾಲದಾರ ವಂದಿಸಿದರು.