ಕಾಯಕ ಶರಣರ ಜಯಂತ್ಯೋತ್ಸವ
ಮುಂಡಗೋಡ 12 : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಕಾಯಕ ಶರಣರ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆಯಲ್ಲಿ ತಹಸೀಲ್ದಾರ ಶಂಕರ ಗೌಡಿ, ಉಪ ತಹಸೀಲ್ದಾರ ಜಿ.ಬಿ ಭಟ್, ಚಿದಾನಂದ ಹರಿಜನ, ಬಾಬಣ್ಣ ಕೋಣನಕೇರಿ, ಬಸವರಾಜ ಸಂಗಮೇಶ್ವರ, ಕೆಂಜೋಡಿ ಗಲಬಿ ಮುಂತಾದವರು ಉಪಸ್ಥಿತರಿದ್ದರು.