ಜಮೀರ್ ಜಿಗರಿ ಅವರ 29ನೇ ವರ್ಷದ ಹುಟ್ಟುಹಬ್ಬವನ್ನು ಮಕ್ಕಳಿಗೆ ವಿದ್ಯಾ ಸಲಕರಣೆಗಳಾದ ಪುಸ್ತಕ,ಪೆನ್ನು ವಿತರಣೆ
ಹಾವೇರಿ 07:ಇಲ್ಲಿನ ಜ್ಯೋತಿಬುದ್ದಿಮಾಂದ್ಯ ಮಕ್ಕಳವಸತಿಯುತ ಶಾಲೆಯಲ್ಲಿ ಜಮೀರ ಜಿಗರಿ ಸ್ನೇಹ ಬಳಗ ವತಿಯಿಂದ ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಜಮೀರ್ ಜಿಗರಿ ಅವರ 29ನೇ ವರ್ಷದ ಹುಟ್ಟುಹಬ್ಬವನ್ನು ಮಕ್ಕಳಿಗೆ ವಿದ್ಯಾ ಸಲಕರಣೆಗಳಾದ ಪುಸ್ತಕ,ಪೆನ್ನು ವಿತರಣೆ ಮಾಡಿ,ಸಿಹಿ ತಿನಿಸುಗಳನ್ನು ನೀಡುವುದರ ಮುಖಾಂತರ ಆಚರಿಸಲಾಯಿತು.
ಜಮೀರ್ ಜಿಗರಿ ಮಾತನಾಡಿ ಹುಟ್ಟು ಉಚಿತ ಸಾವು.ಖಚಿತ ನಾವು ಮಾಡಿದ ದಾನಧರ್ಮ ಶಾಶ್ವತ.ಬದುಕಿಗೆ ಸಾರ್ಥಕತೆ ದೊರೆಯಬೇಕಾದರೆ ಇಂತಹ ಸಮಾಜಮುಖಿ ಕೆಲಸಕ್ಕೆ ಎಲ್ಲ ಯುವ ಪೀಳಿಗೆ ಮುಂದಾಗಬೇಕು.ಬುದ್ಧಿ ಮಾಂದ್ಯ ಮಕ್ಕಳು ಆಚರಣೆ ಸಮಯದಲ್ಲಿ ತೋರಿದ ನಿಷ್ಕಲ್ಮಶ ಪ್ರೀತಿ ಅವಿಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅತಾವುಲ್ಲಾ ಖಾಜಿ,ವಿನಯ್ ಪಾಲಕರ್, ಮುತ್ತು ಕೊರವರ,ಸಾಧಿಕ್ ಕಬ್ಬೂರ್,ಜಯಪ್ಪ ಲಮಾಣಿ,ಅಮಿರ ಸಿಡಿಗನಾಳ,ಇಮಾಮ್ ಹಿರೇಮಗ್ದೂರ್,ಸಾಧಿಕ್ ಸವಣೂರ್,ಗಂಗಾಧರ್ ಇಂಗಳಗುಂದಿ,ಸಾಧಿಕ್ ಯಾದವಾಡ,ಅಹಮದ್ ರಜಾ ರಾಟಿಮನಿ,ಮುಹಿಬ್, ಇರ್ಷಾದ್,ವಸಿಂ,ಸಾಹಿಲ್ ಮಾಣಿಕ್,ಜಬ್ಬರ ನಾಲಬಂದ,ನಯಾಜ್ ಬೋರ್ಗಲ್, ಸುಲೇಮಾನ್ ಯಲವಗಿ,ಗುಲಾಮ ಸೇರಿದಂತೆ ಶಾಲೆಯ ಗುರುಗಳು ಹಾಗೂ ವಿದ್ಯಾರ್ಥಿಗಳು ಇದ್ದರು.