ಇಟ್ಟೆಲೋ... ಮಾಲಿಂಗ್ಯಾ ದೊಸ್ತ, ಬಸ್ಯಾಗ್ಯಾ...ಜೀವಂತ ಬೆಂಕಿ...!
ಜಮಖಂಡಿ : 4 : ನಾಲ್ಕ ವರ್ಷದ ಗ್ಯಾಳತನದ ಬಸ್ಯಾಗೆ ದಾರು ಕುಡಿಸಿ ಪೆಟ್ರೋಲ್ ಹಾಕಿ ಜೀವಂತ ಸುಟ್ಟೆಲ್ಲೋ... ಮಾಲಿಂಗ್ಯಾ...!
ತಾಲ್ಲೂಕಿನ ಕುಂಬಾರಹಳ್ಳ ಗ್ರಾಮಸ್ಥರನೆ ಬೆಚ್ಚಿ ಬೀಳಿಸುವಂತಹ ಕೊಲೆಯ ಘಟನೆಯೊಂದು ನಡೆದಿದೆ.
ಅಥಣಿ ತಾಲೂಕಿನ ಜನವಾಡ ಗ್ರಾಮದ ಬಸಪ್ಪ ತಳವಾರನಿಗೆ ಪೇಟ್ರೋಲ್ ಸುರಿದ್ದು ಜೀವಂತವಾಗಿ ಸುಟ್ಟು ಕೊಲೆಯಾದ ದುರ್ದೈವಿ,
ಹನಗಂಡಿ ಗ್ರಾಮದ ಮಹಾಲಿಂಗ ಸಿದ್ರಾರಾಯ ಬಿದರಿ (31) ಕುಂಬಾರಹಳ್ಳ ಗ್ರಾಮದಲ್ಲಿ ಮನೆ ಬಾಡಿಗೆಯನ್ನು ಮಾಡಿಕೊಂಡು ತನ್ನ ಗೆಳೆಯನಾದ ಬಸಪ್ಪ ತಳವಾರನಿಗೆ ಕಂಠ ಪೂರ್ತಿ ಸಾರಾಯಿ ಕುಡಿಸಿ, ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಬೆಂಕಿ ಹಚ್ಚಿ ಕೊಲೆಗೈದ ಆರೋಪಿ.
ಮಹಾಲಿಂಗ ಮತ್ತು ಬಸಪ್ಪ ಕಳೆದ ನಾಲ್ಕು ವರ್ಷಗಳ ಕಾಲದ ದೋಸ್ತಿ ಇದ್ದು. ಇಬ್ಬರು ಈ ಹಿಂದೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರದಲ್ಲಿ ಜಗಳ ಮಾಡಿಕೊಂಡಿರುವ ಹಿನ್ನಲೆ ಕೊಲೆ ನಡೆದಿದೆ ಎನ್ನಲಾಗಿದೆ.
ಮಹಾಲಿಂಗ ಬಿದರಿ ಎಂಬ ವ್ಯಕ್ತಿಯು ತನ್ನ ಗೆಳೆಯನಾದ ಬಸಪ್ಪ ತಳವಾರನಿಗೆ ಕಂಠ ಪೂರ್ತಿ ಸಾರಾಯಿ ಕುಡಿಸಿ. ತಾನು ಸಹ ಸಾರಾಯಿ ಕುಡಿದು. ಮನೆಯಲ್ಲಿ ಅಡುಗೆ ಮಾಡುತ್ತೆನೆ ಇಬ್ಬರು ಸೇರಿ ಊಟ ಮಾಡೋಣ ಅಂತಾ ಹೇಳಿ ಮನೆಗೆ ಕರೆದುಕೊಂಡು ಬಂದ ಮಹಾಲಿಂಗ. ಆತನ ಮಾತನ್ನು ನಂಬಿ ಬಂದ ಬಸಪ್ಪ ತಳವಾರ ಇಬ್ಬರು ಸೇರಿಕೊಂಡು ಮತ್ತೆ ಮನೆಯಲ್ಲಿ ಸಾರಾಯಿ ಕುಡಿದು. ಸಾರಾಯಿ ನಶೆಯಲ್ಲಿ ಇದ್ದ ಬಸಪ್ಪನ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿ ಕೊಲೆಯನ್ನು ಮಾಡಲಾಗಿದೆ ಎಂದು ಪೋಲಿಸರಿಂದ ಮಾಹಿತಿ ಲಭ್ಯವಾಗಿರುತ್ತದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್,ಪಿ, ಅಮರನಾಥ ರೆಡ್ಡಿ, ಡಿಎಸ್‌ಪಿ, ಶಾಂತವೀರ ಈ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಗಂಗಾಧರ ಪೂಜಾರಿ ಭೇಟಿ ನೀಡಿ. ಆರೋಪಿ ಮಹಾಲಿಂಗ ಬಿದರಿಯನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಲಾಗಿದೆಂದು ಎಸ್‌ಪಿ, ಅಮರನಾಥ ರೆಡ್ಡಿ ತಿಳಿಸಿದ್ದಾರೆ.