ಬೈಲಹೊಂಗಲ 02: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವನೆಯಿಂದ ಮಕ್ಕಳು ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಮುಖ್ಯ ಎಂದು ಎಸ್.ಡಿ.ಎಮ್.ಸಿ ಮಾರ್ಗದರ್ಶಕ ನಾರಾಯಣ ನಲವಡೆ ಹೇಳಿದರು.
ಅವರು ತಾಲೂಕಿನ ನಯಾನಗರದ ಸಕರ್ಾರಿ ಪ್ರೌಢ ಶಾಲೆಯ ಮಕ್ಕಳ ವಾಷರ್ಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕ್ರೀಡೆಯನ್ನು ಬರಿ ಗೆಲುವಿಗಾಗಿ ಸ್ವೀಕರಿಸದೆ ಆರೊಗ್ಯವಂತ ಸದೃಢ, ಶರೀರ ಹೊಂದಲು ಸಾಧನವಾಗಿ ಬಳಸಿಕೊಳ್ಳುವುದು ಅವಶ್ಯಕ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಎನ್.ಆರ್. ಮಾಳನ್ನವರ ವಹಿಸಿದ್ದರು.
ಶಿಕ್ಷಕ ಎಮ್.ಬಿ.ಬೈಲಪ್ಪನವರ ಇವರು ಪ್ರಾಸ್ಥಾವಿಕವಾಗಿ ಮಾತನಾಡಿ, ಶಿಕ್ಷಕ ಆರ್.ಬಿ.ಹಾದಿಮನಿ ಇವರು ಕ್ರೀಡಾಳುಗಳಿಗೆ ಪ್ರಮಾಣವಚನ ಬೋಧಿಸಿದರು.
ಶಿಕ್ಷಕ ಬಿ.ವಿ.ಪತ್ತಾರ ಇವರು ಶಾಲೆಯಲ್ಲಿ ಹಾಜರಾತಿ, ಸ್ವಚ್ಚತೆ, ಪಾಠಗಳಲ್ಲಿ ಮುಂದೆ ಬಂದ ವಿದ್ಯಾಥರ್ಿಗಳಿಗೆ ಸ್ಟಾರ್ ಗಳನ್ನು ಅಥಿತಿಗಳಿಂದ ಕೊಡಿಸಿ ಮಕ್ಕಳನ್ನು ಗೌರವಿಸಿದರು.
ವೇದಿಕೆ ಮೇಲೆ ರಾಜು ಸೂರ್ಯವಂಶಿ, ಸೈನಿಕ ಬಸಪ್ಪ ಚಂದರಗಿ, ವಿಜಯಕುಮಾರ ಕಡಕೋಳ, ಬ್ರಹ್ಮಾನಂದ ಕಡ್ಲಿಬುಡ್ಡಿ, ಬಿ.ವಿ.ಪತ್ತಾರ ಎನ್.ಎಸ್,ಬೊಡ್ಕಿ, ಎಸ್.ಎಮ್.ಅಂಗಡಿ, ಪಿ.ಎಮ್.ನಿಕ್ಕಮ್ಮನವರ ದೈಹಿಕ ಶಿಕ್ಷಕರಾದ ಸಿದ್ದಯ್ಯಾ ಹಿರೇಮಠ, ಜಿ.ಬಿ.ಪಟ್ಟಣಶಟ್ಟಿ ಇದ್ದರು.
ನೇತ್ರಾವತಿ ಉಗರಖೋಡ ಸ್ವಾಗತಿಸಿದರು. ಜ್ಯೋತಿ ಅಡಕಿ, ಮಿನಾಜ ನದಾಫ್ ನಿರೂಪಿಸಿದರು. ಅಶ್ವಿನಿ ತೋಟಗಿ ವಂದಿಸಿದರು.