ಧರ್ಮಟ್ಟಿ ಸೇತುವೆಗೆ ಬಂದೀತೇ ದುರಸ್ಥಿ ಭಾಗ್ಯ?


 ಸೇತುವೆ ಕುಸಿದು 6 ತಿಂಗಳಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

 ವರದಿ: ಸುಧೀರ ನಾಯರ್

 ಮೂಡಲಗಿ 09:  ಮೂಡಲಗಿಯಿಂದ  ಯಾದವಾಡಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಬರುವ  ಧರ್ಮಟ್ಟಿ ಗ್ರಾಮದ ಸಮೀಪ ಹಳ್ಳಕ್ಕೆ ನಿಮರ್ಿಸಿರುವ ಸೇತುವೆಯೂ  ಅರ್ಧಭಾಗ ಕುಸಿದು 5_6 ತಿಂಗಳು ಕಳೆದಿದ್ದು ಸೇತುವೆ ದುರಸ್ಥಿ ಕಾಣದೇ ವಾಹನ  ಸಂಚಾರಕ್ಕೆ  ತೊಂದರೆಯಾಗುತ್ತಿರುವುದಲ್ಲದೇ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ವಾಹನ ಸವಾರರ ಮತ್ತು ಗ್ರಾಮಸ್ತರು ಆರೋಪಿಸುತ್ತಿದ್ದಾರೆ.

   ಮೂಡಲಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು. ಈ ಸೇತುವೆಯ ಮೇಲೆ ಪ್ರತಿದಿನ ನೂರಾರು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು  ಸಂಚರಿಸುತ್ತಿದ್ದರೂ  ಜನಪ್ರತಿನಿಧಿಗಳು, ಅಧಿಕಾರಿಗಳು  ಮೌನವಾಗಿರುವುದು ಸಾರ್ವಜನಿಕರಲ್ಲಿ  ಆಶ್ಚರ್ಯ ಮೂಡಿಸಿದೆ. ಅಲ್ಲದೇ ಈ ಸೇತುವೆ ನಿಮರ್ಾಣದತ್ತ ಗಮನಹರಿಸುವ  ವಾರಸುದಾರರು ಇಲ್ಲವೇ ಎಂಬ ಪ್ರಶ್ನೇ ಸಾರ್ವಜನಿಕರನ್ನು ಕಾಡುತ್ತಿದೆ. 

         ಸೇತುವೆಯ   ಮೇಲೆ   ಪ್ರತಿದಿನ  ಕಬ್ಬು  ಹೇರಿದ  ಟ್ರ್ಯಾಕ್ಟರ್, ಸಕರ್ಾರಿ ಬಸ್ಸ್ ಮತ್ತು ನೂರಾರು  ವಾಹನಗಳು  ಹಾದು ಹೋಗುವುದಲ್ಲದೇ ಈ ರಸ್ತೆಯಲ್ಲಿಯೇ ಪ್ರತಿ ನಿತ್ಯ ನೂರಾರು ಶಾಲಾ ಮಕ್ಕಳು ಸೈಕಲ್ ಮೂಲಕ ಸಂಚರಿಸುತ್ತಾರೆ. ಸೇತುವೆಯ ಅರ್ಧ ಭಾಗ ಕುಸಿದಿರುವುದರಿಂದ ಸವಾರರು ಭಯದಿಂದ ಸಂಚಾರಿಸುವಂತಾಗಿದೆ. ಸೇತುವೆ ಕುಸಿದಿರುವುದರಿಂದ ಹಲವಾರು ಅಪಘಾತಗಳು ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. 

     ಕಳೆದ 5-6 ತಿಂಗಳ   ಹಿಂದೆ  ಕಲ್ಲು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲಿಯೇ ಒಬ್ಬರು ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆಯೂ ಸಂಭವಿಸಿದೆ.   ಈ ಕುರಿತು  ಜಿಲ್ಲಾಧಿಕಾರಿ,  ಶಾಸಕರಿಗೆ,  ಜಿಲ್ಲಾ  ಪಂಚಾಯತಿ ಎಂಜಿನೀಯರ್ಗಳಿಗೆ    ಹಲವಾರು  ಭಾರಿ  ಮನವಿ  ಕೊಟ್ಟರು  ಪ್ರಯೋಜನವಾಗಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ  ನವೀಕರಣಗೂಳಿಸಿ ವಾಹನ  ಸವಾರರಿಗೆ  ಅನುಕೂಲ  ಮಾಡಿಕೊಡಬೇಕೆಂದು. ಮೂಡಲಗಿ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮದ  ವಾಹನ ಸವಾರ, ರೈತರ  ಆಗ್ರಹವಾಗಿದೆ.

  ಬಾಕ್ಸ್ 1: ನಾನು ಪ್ರತಿನಿತ್ಯ ಈ ಸೇತುವೆಯ ಮೇಲೆ ಸಂಚಾರಿಸುತ್ತೆನೆ. ಸೇತುವೆ ಕುಸಿದು 5-6 ತಿಂಗಳೂ ಕಳೆದರೂ ಇನ್ನೂ ಕಾಮಗಾರಿ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಯನ್ನು ಎತ್ತಿ ತೋರಿಸುತ್ತಿದೆ. ಈ ಸೇತುವೆಯ ಮೇಲೆ ರಾತ್ರಿ ವೇಳೆ ಸಂಚಾರಿಸುವುದು ಅಪಾಯಕಾರಿಯಾಗಿದೆ.  ಜನಪ್ರತಿನಿಧಿಗಳು ಅಪಘಾತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

                ಗುರುನಾಥ ಗಂಗನ್ನವರ.  ಗುಜನಟ್ಟಿ ನಿವಾಸಿ

ಬಾಕ್ಸ್ 2:  ಸೇತುವೆ  ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು  ದುರಸ್ಥಿ ಕೆಲಸಕ್ಕೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

                    ಆರ್, ಎ. ಗಾಣಿಗೇರ. ಸಹಾಯಕ ಕಾರ್ಯ ನಿವರ್ಾಹಕ ಅಭಿಯಂತರರು ಗೋಕಾಕ