ಲೋಕದರ್ಶನ ವರದಿ
ಅಥಣಿ 05: ಬಾಟಲಿ ನೀರು ಕುಡಿಯಬೇಡಿ, ಒಂದು ವೇಳೆ ಮುಚ್ಚಳದ ಸೀಲು ಒಡೆದ ಬಳಿಕ ಮತ್ತೆ ಬೇರೆ ನೀರು ಹಾಕಿ ಕುಡಿಯುವುದು ಕ್ಯಾನ್ಸರರೋಗಕ್ಕೆ ಆಹ್ವಾನ ನೀಡಿದಂತೆ. ಮೇಲಾಗಿ ಬಿಸಿ ನೀರು ಹಾಕಿ ಕುಡಿದರೆ ಬೇಗನೆ ಕ್ಯಾನ್ಸರ ರೋಗಕ್ಕೆ ಆಮಂತ್ರಣ ನೀಡುವಿರಿ. ಎಂದು ಶ್ವಾಸಗುರು ವಚನಾನಂದ ಸ್ವಾಮೀಜಿ ಯೋಗ ಶಿಬಿರಾಥರ್ಿಗಳಿಗೆ ಕಿವಿ ಮಾತು ಹೇಳಿದರು.
ಸ್ಥಳೀಯ ಭೋಜರಾಜ ಕ್ರೀಡಾಂಗಣದಲ್ಲಿ ನಡೆದು ಬಂದಿರುವ ಯೋಗ ಉತ್ಸವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ವಿಷಯ ಮಾತನಾಡುತ್ತಾ ಈ ಬಾಟಲಿ ನೀರಿನ ಬಗ್ಗೆ ವಿದೇಶದ ಲಂಡನ್ ದಲ್ಲಿ ಏರಪೋಟಿಗೆ ಹೋದಾಗ ಏನು ಎಚ್ಚರಿಕೆ ನೀಡದೆ ಮುಚ್ಚಳಿಕ ಮಾತ್ರ ಕಸಿದುಕೊಳ್ಳುತ್ತಾರೆ. ಇದೆ ಅವರ ಎಚ್ಚರಿಕೆ ನೀಡುವ ಶಿಕ್ಷೆ. ಬನ್ನಿಗಿಡ ಮತ್ತು ಆಲದ ಗಿಡಕ್ಕೆ ಪ್ರದಕ್ಷಣೆ ಹಾಕುವುದು ಅದು ಮೌಢ್ಯವಲ್ಲ ಇದರಿಂದ ಒಳ್ಳೆಯ ಪ್ರಾಣವಾಯು ದೋರೆಯುತ್ತದೆ. ಆದರೆ ಗಿಡಗಳಿಗೆ ನೂಲು ಸುತ್ತುವುದು, ಸೀರೆ ಸುತ್ತವುದು, ಇದು ಮೌಢ್ಯ. ಬದಲಾಗಿ ಸೀರೆ ಇಲ್ಲದವರಿಗೆ ದಾನ ಮಾಡಿ. ಎಂದು ತಿಳಿಸಿದರು.
ಸ್ನಾನ ಮಾಡುವಾಗ ಬೀಸಿ ನೀರಿಗಾಗಿ ಪ್ಲಾಸ್ಟಿಕ್ ಬಕೆಟ ಬಳಿಕೆ ಸಹ ಯೋಗ್ಯವಲ್ಲ, ಸ್ಟೀಲ್ ಬಕೆಟ ಬಳಿಕೆಯಲ್ಲಿರಲಿ. ಉಚ್ವಾಸ, ನಿಚ್ವಾಸ ಕಡೆಗೆ ಸದಾ ಗಮನವಿರಲಿ ದೇಹದಲ್ಲಿ 216 ಎಲುಬುಗಳು ಇರುತ್ತವೆ. ಹೆಣ್ಣು ಮಕ್ಕಳ ಎಲುಬುಗಳಲ್ಲಿ ಬಲ ಸ್ವಲ್ಪ ಕಡಿಮೆ, ಅವರು ಬಳೆ ತೋಡುವುದು ಬಲ ಹೆಚ್ಚುಸುವದಕ್ಕಾಗಿ ಇದರಲ್ಲಿ ವಿಜ್ಞಾನವಿದೆ. ಲಂಬಾಣಿಗಳು ನಾಲಿಗೆ ಸಹಿತ ರಿಂಗ್ ಹಾಕುತ್ತಾರೆ. ರಿಂಗ್ ಹಾಕುವುದರಲ್ಲಿ ವಿಜ್ಞಾನವಿರುತ್ತದೆ. ಕಾಗೆ, ಮೊಲ, ಮುಂತಾದ ಪ್ರಾಣಿಗಳಲ್ಲಿ ಒಂದು ಶಕ್ತಿ ಇರುತತ್ದೆ. ಅವು ಅಪಾಯಕಾರಿಯಲ್ಲ ಅದಕ್ಕಾಗಿ ಆಸನಗಳಲ್ಲಿ ಹೆಚ್ಚಾಗಿ ಪ್ರಾಣಿಗಳ ಜೀವನೆವನ್ನೇ ಅಳವಡಿಸಿಕೊಂಡು ಹೆಸರು ಸೂಸಿಲಸಲಾಗಿದೆ. ಎಂದು ಹೇಳಿದರು. ನಾಳೆ ಯೋಗಉತ್ಸವ ಕಡೆಯದಾಗಿದೆ. ಮತ್ತು ಇಂದು ಮೈತ್ರಿ ಭೋಜನ ಯಶ್ವಸಿಯಾಗಿ ನಡೆಯಿತು.