ಅಂತರಾಜ್ಯ ಮಟ್ಟದ ಭವ್ಯ ಟಗರಿನ ಕಾಳಗ ಕಾರ್ಯಕ್ರಮ

ಅಂತರಾಜ್ಯ ಮಟ್ಟದ ಭವ್ಯ ಟಗರಿನ ಕಾಳಗ ಕುರಿತು ಕಾರ್ಯಕ್ರಮದ ಕಾರ್ಯಾಧ್ಯಕ್ಷ ಮಲಗೌಡ ನೇಲರ್ಿ ಮಾಹಿತಿ ನೀಡಿದರು.

ಲೋಕದರ್ಶನ ವರದಿ

ಚಿಕ್ಕೋಡಿ12: ತಾಲೂಕಿನ ನಾಗರಮುನ್ನೋಳ್ಳಿಯಲ್ಲಿ ಚಿಕ್ಕೋಡಿ ಜಿಲ್ಲಾ ಮಟ್ಟದ 531 ನೇ ಕನಕದಾಸರ ಜಯಂತಿ ಮತ್ತು ಅಂತರಾಜ್ಯ ಮಟ್ಟದ ಭವ್ಯ ಟಗರಿನ ಕಾಳಗ ಡಿ.18ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಮತ್ತು ಕಾರ್ಯಾಧ್ಯಕ್ಷ ಮಲಗೌಡ ನೇಲರ್ಿ ತಿಳಿಸಿದರು.

     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕವಲಗುಡ್ಡ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ.

     ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಲಿದ್ದು, ನಿಪ್ಪಾಣಿ ಎಪಿಎಂಸಿ ಅಧ್ಯಕ್ಷ ಸುಭಾಷಗೌಡ ಪಾಟೀಲ ದ್ವೀಪ ಪ್ರಜ್ವಲನೆ ನೇರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಅರಣ್ಯ ಸಚಿವ ಆರ್.ಶಂಕರ, ಸಹಕಾರ ಸಚಿವ ಬಂಡೆಪ್ಪಾ ಕಾಶಂಪೂರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಶಾಸಕ ಸತೀಶ ಜಾರಕಿಹೊಳಿ, ಸಕರ್ಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಶಾಸಕ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಮಾಜಿ ಶಾಸಕರಾದ ಎ.ಬಿ.ಪಾಟೀಲ, ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ಶ್ಯಾಮ ಘಾಟಗೆ ಸೇರಿದಂತೆ ಇನ್ನುಳಿದ ಜಿಲ್ಲಾ ನಾಯಕರು ಮತ್ತು ಕುರುಬ ಸಮಾಜದ ಮುಖಂಡರು ಬೃಹತ್ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಅದೇ ದಿನ ಸಂಜೆ ಅಂತರಾಜ್ಯ ಮಟ್ಟದ ಭವ್ಯ ಟಗರಿನ ಕಾಳಗ ನಡೆಯಲಿದೆ. ಎಂಟು ಹಲ್ಲಿನ ಟಗರಿನ ಕಾಳಗ, ಆರು ಹಲ್ಲಿನ ಟಗರಿನ ಕಾಳಗ, ನಾಲ್ಕು ಹಲ್ಲಿನ ಟಗರಿನ ಕಾಳಗ, ಎರಡು ಹಲ್ಲಿನ ಟಗರಿನ ಕಾಳಗ ಮತ್ತು ಹಾಲು ಹಲ್ಲಿನ ಟಗರಿನ ಕಾಳಗದ ಸ್ಪಧರ್ೆ ನಡೆಯಲಿದೆ. ಎಲ್ಲ ಸ್ಪಧರ್ೆಗಳಿಗೆ ಪ್ರತ್ಯೇಕ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಆಸಕ್ತರು ಕಮೀಟಿ ಸದಸ್ಯರನ್ನು ಸಂಪಕರ್ಿಸಿ ಹೆಸರು ನೊಂದಾಯಿಸಬೇಕೆಂದು ಅವರು ತಿಳಿಸಿದರು.

ರಘು ಬಡಗೇರ, ಲಕ್ಷ್ಮೀಸಾಗರ ಈಟಿ, ಸಾಗರ ಕೊಟಬಾಗಿ, ಹಬಲು ಪೇಂಡಾರೆ, ಅಹ್ಮದ ಮುಲ್ತಾನಿ, ಸಿದ್ದು ನಾಗರಾಳೆ, ಅವ್ವಣ್ಣಾ ನಾಗರಾಳೆ, ಮಹಾದೇವ ಬೆಳಗಲಿ ಮುಂತಾದವರು ಇದ್ದರು.