ರೈತರ ಸಾಲಮನ್ನಾ ಮಾಡಲು ಆಣೆ ಪ್ರಮಾಣದ ಬದಲಾಗಿ ಪ್ರಾಮಾಣಿಕತೆ ಮುಖ್ಯ: ಉದಾಸಿ

ಸಂಸದ ಉದಾಸಿ.

ಲೋಕದರ್ಶನ ವರದಿ

ಬ್ಯಾಡಗಿ29: ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲಮನ್ನಾ ಮಾಡಲು ಆಣೆ ಪ್ರಮಾಣದ ಬದಲಾಗಿ ಪ್ರಾಮಾಣಿಕತೆ ಅವಶ್ಯವಿದೆ, ಮನ್ನಾ ಮಾಡುವುದಿಲ್ಲ ಎಂದಿದ್ದರೇ ರೈತರೇ ಮಾಡಿದ ಸಾಲ ತುಂಬಿ ಋಣ ಮುಕ್ತರಾಗುತ್ತಿದ್ದರು ಕುಮಾರಸ್ವಾಮಿ ಅವರ ಋಣಮುಕ್ತ ಪ್ರಮಾಣ ಪತ್ರ ಅವಶ್ಯವಿರಲಿಲ್ಲ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

   ಸಾಲಮನ್ನಾ ವಿಷಯ ಕುರಿತು ಮಗನ ಮೇಲೆ ಪ್ರಮಾಣ ಮಾಡಿರುವ ಕುಮಾರಸ್ವಾಮಿ ಹೇಳಿಕೆಗೆ ಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉದಾಸಿ, ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಕುಮಾರಸ್ವಾಮಿ ನಡೆದುಕೊಂಡಿಲ್ಲ, ಸಾಲಮನ್ನಾ ವಿಷಯವನ್ನೇ ಬಹುದೊಡ್ಡದಾಗಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಕೇವಲ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು, ಸಕರ್ಾರ ರಚನೆಯಾಗಿ 8 ತಿಂಗಳು ಗತಿಸಿದರೂ ಇಂದಿಗೂ ಸಾಲಮನ್ನಾ ವಿಷಯವನ್ನು ಆಣೆ ಪ್ರಮಾಣಕ್ಕೆ ಕೊಂಡೊಯ್ಯುತ್ತಿರುವುದು ವಿಷಾದಕರ ಸಂಗತಿ ಎಂದರು.

   ರಾಜಧರ್ಮ ಪಾಲಿಸಲಿ: ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಿ ಎಚ್ಡಿಕೆ ರಾಜಧರ್ಮ ಪಾಲಿಸಲಿ, ನಿತ್ಯವೂ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದರ ಮಾಹಿತಿ ಪಡೆದ ಹೊರತಾಗಿಯೂ ಸಾಲಮನ್ನಾಕ್ಕ ವಿವಿಧ ಷರತ್ತುಗಲನ್ನು ವಿಧಿಸಿ ವಿಳಂಬ ಧೋರಣೆ ತೋರುತ್ತಿದ್ದು ಇನ್ನಷ್ಟು ರೈತರ ತಮ್ಮ ಜೀವ ಕಳೆದುಕೊಳ್ಳಬೇಕಾಗಿದೆ ಎಂದು ಪ್ರಶ್ನಿಸಿದರು. 

  ಅದೇ ಧಾಟಿಯಲ್ಲಿ ಕಾಂಗ್ರೆಸ್:  ಇತ್ತೀಚೆಗೆ ಜರುಗಿದ ಪಂಚ ರಾಜ್ಯ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅದೇ ಧಾಟಿಯಲ್ಲಿ ಮಾತನಾಡಿ ಅಧಿಕಾರಕ್ಕೆ ಬಂದಿದೆ, ಆದರೆ ಅಧಿಕಾರ ಸಿಕ್ಕ ಬಳಿಕ ಧಾಟಿಯನ್ನೇ ಬದಲಾಯಸಿದ್ದಾರೆ, ಕೇವಲ ಅಧಿಕಾರಕ್ಕಾಗಿ ಸಾಲಮನ್ನಾ ಘೋಷಣೆ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದ್ದು, ಅಭಿವೃದ್ಧಿಯ ಯಾವುದೇ ಮ್ಯಾನುಫಾಸ್ಟೋ ಬಳಸದೇ ಮುಗ್ಧ ರೈತರನ್ನು ಬಲಿಪಶು ಮಾಡಲಾಗುತ್ತಿದೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಲಮನ್ನಾ ವಿಚಾರದಲ್ಲಿ ಮಗನ ಮೇಲೆ ಆಣೆ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಕ್ಕಳೆಷ್ಟಿದ್ದಾರೋ ಗೊತ್ತಿಲ್ಲ ರೈತರ ಸಾಲವನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಮಗನ ಮೇಲೆ ಆಣೆ ಪ್ರಮಾಣ ಮಾಡುವುದಕ್ಕಿಂತ ಬಿಜೆಪಿಗೆ ರಾಜ್ಯ ಸಕರ್ಾರದ  ಪ್ರಾಮಾಣಿಕತೆ ಅವಶ್ಯವಿದೆ ಎಂದರು.

   ಇಂಟರ್ಸಿಟಿ ಶೀಘ್ರದಲ್ಲೇ ನಿಲುಗಡೆ: ಬ್ಯಾಡಗಿ ತಾಲೂಕಿನ ಜನರ ಬಹುದಿನದ ಬೇಡಿಕೆ ಬೆಂಗಳೂರು ಇಂಟರ್ಸಿಟಿ ರೈಲ್ವೆ ಶೀಘ್ರದಲ್ಲಿಯೇ ಬ್ಯಾಡಗಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ, ಇದಕ್ಕೆ ಯಾವುದೇ ಅನುಮಾನಗಳು ಬೇಡ,  ಬ್ಯಾಡಗಿ-ಮೋಟೆಬೆನ್ನೂರ ಮೇಲ್ಸತುವೆ ಕಾಮಗಾರಿ ಈಗಾಗಲೇ ಭರದಿಂದ ಸಾಗಿದ್ದು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ, ಬ್ಯಾಡಗಿ ನಿಲ್ದಾಣಕ್ಕೆ ಮೂಲ ಸೌಕರ್ಯಕ್ಕೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ ಆದರೆ ಬ್ಯಾಡಗಿಗೆ ಹೊಸ ರೈಲ್ವೆ ನಿಲ್ದಾಣ ನಿಮರ್ಾಣವಾಗಲಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಛತ್ರದ, ರಾಮಣ್ಣ ಕೋಡಿಹಳ್ಳಿ, ನಾರಾಯಣಪ್ಪ ಕನರ್ೂಲ, ಬಸವರಾಜ ಹಂಜಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.