ಲೋಕದರ್ಶನ ವರದಿ
ತಾಳಿಕೋಟೆ 22: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಹಾಕವಿ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು.
ಸರ್ವಜ್ಞ ರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ರವರು ಮಾತನಾಡಿ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಭಕ್ತಿಯಿಂದ ಸೇವೆ ಮಾಡಿದ ಬರವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು ಎಂದು ಹೇಳಿದ್ದರು. ಮುಂದೆ ಮಹಾತ್ಮರು ಹೆಳಿದಂತೆ ಹೆತ್ತಮ್ಮ ಕುಂಬಾರ ಮಾಳೆ ಮತ್ತು ತಂದೆ ಬಸವರಸರ ಉದರದಲ್ಲಿ ಜನಿಸಿ. ದೇಶ ಸಂಚರಿಸುತ್ತ ತ್ರಿಪದಿಗಳನ್ನು ಸರಳ ಆಡು ಭಾಷೆಯಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸುವಂತ ಸಾಹಿತ್ಯ ಹೊಂದಿರುವ 7700 ವಚನಗಳನ್ನು ರಚಿಸಿದ್ದಾನೆ. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ದತೆಯಿಂದ ಜನಪ್ರಿಯವಾಗಿವೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಂಗನಗೌಡ ಅಸ್ಕಿ (ಹಿರೂರ) ಮುಖ್ಯೋಪಾದ್ಯಾಯರಾದ ಸಂತೋಷ ಪವಾರ, ಶಶಿಧರ ಪಾಟೀಲ್, ರಾಜು ಜಳಗೇರಿ, ಬಸವರಾಜ ಚಳ್ಳಗಿ, ಶರಣು ವಾಟಾಳಿ, ಶಿವಲೀಲಾ ಚುಂಚುರ, ಶ್ರೀಶೈಲ್ ವಂದಾಲ, ಸಾಂತಗೌಡ ಬಿರಾದರ, ಇಸ್ಮಾಯಿಲ್ ಇರಗಂಜಿ, ಶಾಂತಾ ಬ್ಯಾಲ್ಯಾಳ, ಶಿವುಕುಮಾರ, ಹಾಗೂ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.