ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ

ಲೋಕದರ್ಶನವರದಿ

ಗೋಕಾಕ02: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಗೋಕಾಕ ತಾಲೂಕಾ ಘಟಕದ ನೌಕರರು ಶನಿವಾರದಂದು ಗ್ರೇಡ್-2 ತಹಶೀಲ್ದಾರ ಎಸ್.ಕೆ.ಕುಲಕಣರ್ಿ ಅವರಿಗೆ ಮನವಿ ಸಲ್ಲಿಸಿದರು.

  ನಗರದ ಬಸವೇಶ್ವರ ವೃತ್ತದಿಂದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ನೌಕರರು ತಹಶೀಲ್ದಾರ ಕಾಯರ್ಾಲಯದವರೆಗೆ ಜಾಥಾ ನಡೆಸಿ ಸಕರ್ಾರಕ್ಕೆ ಒತ್ತಾಯಿಸಿದರು. 

      ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವರ್ಗದ ನೌಕರರಿಗೆ ಯಾವುದೇ ರೀತಿ ಸೇವಾ ಭದ್ರತೆ,ವೇತನ ಶ್ರೇಣಿ, ಪಿಂಚಣಿ ನೀಡಲಾರದೆ ಹಗಲಿರುಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಹಕಾರ ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಬೇಕು. ಸಂಘದಲ್ಲಿ ದುಡಿಯುವ ಎಲ್ಲ ವರ್ಗದ ನೌಕರರನ್ನು ಖಾಯಂಗೊಳಿಸಿ ವೇತನ ಶ್ರೇಣಿ,ಪಿಂಚಣಿಯನ್ನು ನೀಡಬೇಕು. ಸಹಕಾರ ಸಂಘದ ನೌಕರರಿಗೆ ಯಾವುದೇ ರೀತಿ ಸೌಲಭ್ಯಗಳಿಲ್ಲ ಇದರಿಂದ ನೌಕರರು ಜೀವನ ನಡೆಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ದಿ.4ರಂದು ಸಂಘದ ಮೂಲಕ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.ನಂತರ ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಕೂಡಾ ಕೃಷಿ ಪತ್ತಿನ ಸಹಕಾರ ಸಂಘದ ನೌಕರರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಪ್ರತಿಭಟನೆಯಲ್ಲಿ ಕನರ್ಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕಗಳ ಕ್ಷೇಮಾಭಿವೃದ್ದಿ ಮಹಾಮಂಡಳದ ಜಿಲ್ಲಾ ಘಟಕ ಬಸವರಾಜ ಕಾರಿ, ಅಡಿವೆಪ್ಪ ಮುರಗೋಡ, ನಾರಾಯಣ ಜಡಕಿನ, ರಮೇಶ ಪರಕನಟ್ಟಿ, ಶಿದ್ರಾಮ ಕಟ್ಟಿಕಾರ, ಅವ್ವಣ್ಣಾ ಮದಿಹಳ್ಳಿ, ರಮೇಶ ದಳವಾಯಿ, ಬಾಳಯ್ಯ ಪೂಜೇರಿ, ಈರಣ್ಣಾ ಕಮತೆ, ಲಕ್ಷ್ಮಣ ಮಾರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.