ರಘು ಆಚಾರ್ಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯ

ಲೋಕದರ್ಶನ ವರದಿ

ಶಿಗ್ಗಾವಿ20 : ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಮಠ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಎಮ್.ಎಲ್.ಸಿ ರಘು ಆಚಾರ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು  ತಾಲೂಕಾ ಹಿಂದೂ ಸಾಧು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ತಾಲೂಕು ತಹಶೀಲ್ದಾರ  ಶಿಗ್ಗಾವಿ ಇವರ ಮುಖಾಂತರ, ಮಾನ್ಯ ವಿಧಾನಪರಿಷತ್ ಸಭಾಪತಿಗಳು ಕನರ್ಾಟಕ ಘನ ಸಕರ್ಾರ ಬೆಂಗಳೂರ ಇವರಿಗೆ  ಶಿಗ್ಗಾವಿಯ ವಿರಕ್ತಮಠದ ಸಂಗನಬಸವ ಸ್ವಾಮಿಗಳ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

  ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು ಶಿಗ್ಗಾಂವ ಮಾತನಾಡಿ ನಾಡಿನಲ್ಲಿ ತನ್ನದೇ ಆದ ಘನತೆ, ಗೌರವವನ್ನು ಹೊಂದಿರುವ ಸಿರಿಗೇರಿಯ ಬೃಹನ್ ಮಠದ ಶಾಖಾ ಮಠವಾದ ಚಿತ್ರದುರ್ಗದ ಸಾಣೆಹಳ್ಳಿಮಠ ನಾಡಿನಲ್ಲಿ ತನ್ನದೇ ಆದ ವಿಭಿನ್ನ ರೀತಿಯ ಸಾಮಾಜಿಕ ಹಾಗೂ ಧಾಮರ್ಿಕ ಸೇವೆಯ ಮೂಲಕ ಪ್ರಖ್ಯಾತಿಯನ್ನು ಹೊಂದಿದ್ದು ಇರುತ್ತದೆ. ಪ್ರತಿವರ್ಷದಂತೆ ಸಾಣೆಹಳ್ಳಿಯ ಮಠದಲ್ಲಿ ನಾಟಕೋತ್ಸವ ಏರ್ಪಟ್ಟ ಸಂದರ್ಭದಲ್ಲಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಇಂದಿನ ರಾಜಕೀಯ ಡೋಲಾಯ ಮಾನ ಸ್ಥಿತಿಯ ಬಗ್ಗೆ ರಾಜಕೀಯ ನಾಯಕರ ಇಚ್ಛಾ ಶಕ್ತಿಯ ಕೊರತೆಯ ಬಗ್ಗೆ ಜನರಲ್ಲಿ ಅವರ ನಂಬಿಕೆ ವಿಶ್ವಾಸ ಗಳಿಸುವಲ್ಲಿ ಎಷ್ಟೋ ಹಿನ್ನಡೆ ಉಂಟಾಗಿದೆ ಎನ್ನುವುದರ ಬಗ್ಗೆ ಉಲ್ಲೇಖ ಮಾಡಿದ್ದು ಇವತ್ತಿನ ಪರಿಸ್ಥಿತಿಯ ಬಗ್ಗೆ ವ್ಯಕ್ತಪಡಿಸಿದ್ದು ಇದ್ದು ಅದನ್ನು ತಪ್ಪು ಗ್ರಹಿಕೆಯಿಂದ ರಘು ಆಚಾರ್ಯರು ಅವಹೇಳನಕಾರಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ಇಂತಹ ಹೇಳಿಕೆಗಳು ರಾಜಕೀಯ ನಾಯಕರುಗಳಲ್ಲಿ ಪುನರಾವರ್ತನೆ ಆಗದಂತೆ ನಡೆದುಕೊಳ್ಳಬೇಕು ಅಂತಾ ಹೇಳಿದರು. 

  ಚನ್ನಬಸಪ್ಪ.ಬ.ಹರಿಗೊಂಡ ,ಗಂಗಾಧರ ಕಲ್ಯಾಣ, ಸುಭಾಸ ಚವ್ಹಾಣ, ಚನ್ನಪ್ಪ ಚಿನ್ನಪ್ಪನವರ, ಬಸವರಾಜ ಶಿವಣ್ಣನವರ, ರಮೇಶ ವನಹಳ್ಳಿ , ನಾಗಪ್ಪ ಹೊಂಡದಕಟ್ಟಿ, ಬಸವರಾಜ ಗುಂಜಳ, ಅಶೋಕ ಹುಣಸಿಹುಳಿ, ಪ್ರಕಾಶ ಹಾದಿಮನಿ, ಸಂತೋಷ ಶೆಟ್ಟೆಪ್ಪನವರ, ಮಂಜುನಾಥ ಹಾದಿಮನಿ, ಶಂಕ್ರಪ್ಪ ಹೊಂಡದಕಟ್ಟಿ, ಸಂತೋಷಗೌಡ ಪಾಟೀಲ, ಚಂದ್ರು ಹಾದಿಮನಿ, ಪ್ರಕಾಶ ಕುಂದೂರ ತಾಲೂಕಿನ ಬಾಂಧವರು ಮತ್ತು ಮಠದ ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.