ನಡೆದಾಡುವ ದೇವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಜಯ ಕನರ್ಾಟಕ ಸಂಘಟನೆಯಿಂದ ತಹಶೀಲ್ದಾರ್ ವಿಜಯಕುಮಾರ್ಗೆ ಮನವಿ

ಲೋಕದರ್ಶನವರದಿ

ಹಗರಿಬೊಮ್ಮನಳ್ಳಿ 18:ತ್ಯಾಗ ಹಾಗೂ ಸೇವಾ ಮನೋಭಾವವನ್ನು ಕರಗತ ಮಾಡಿಕೊಂಡ ನಡೆದಾಡುವ ದೇವರು ಎಂದೇ ಹೆಸರುವಾಸಿಯಾದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಜಯ ಕನರ್ಾಟಕ ಸಂಘಟನೆಯ ತಾಲೂಕು ಘಟಕವು ಪ್ರಧಾನ ಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಶುಕ್ರವಾರ ಮನವಿಯನ್ನು ನೀಡಿತು.

ಈ ಸಂಧರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಟಿ.ಮಂಹೇಂದ್ರ ಮಾತನಾಡಿ ಡಾ.ಶಿವಕುಮಾರ ಸ್ವಾಮಿಗಳು ಶತಮಾನ ಕಂಡ ಅಗ್ರಪಂತೀಯ ಸಂತರು, ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿಯಾಗಿರುವ ಇವರು ಶಿಕ್ಷಣ, ಅನ್ನದಾನ, ಸಮಾಜ ಸೇವೆ ಹಾಗೂ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ವಿಧ್ಯಾಥರ್ಿಗಳಿಗೆ ಅಕ್ಷರ ಜ್ಞಾನ ಹಾಗೂ ಸೇವಾ ಮನೋಭಾವನೆಯಿಂದ ಗಳಿಸಿದ ಅಸಂಖ್ಯಾತ ಭಕ್ತವರ್ಗಹೊಂದಿರುವ ಮಹಾನ್ ವ್ಯೆಕ್ತಿಯನ್ನು ಕೇಂದ್ರ ಸರಕಾರ ಈ ಕೂಡಲೇ ಪರಿಗಣಿಸಿ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಹೇಳಿದರು. ಶ್ರೀಗಳು ಶೀಘ್ರವೇ ಗುಣಮುಖರಾಗಲೆಂದು ಸಂಘಟನೆ,ಸರ್ವ ಭಕ್ತ ಸಮೂಹ ಹಾಗೂ ಲಕ್ಷಾಂತರ ವಿಧ್ಯಾಥರ್ಿಗಳ ಪರವಾಗಿ ಆ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವೆ ಎಂದರು.

ಈ ಸಂಧರ್ಭದಲ್ಲಿ  ಸಂಘಟನೆಯ ಉಪಾಧ್ಯಕ್ಷರಾದ ಎಲ್.ಕೆ.ಯಮುನಾನಾಯ್ಕ್, ಸಂತೋಷಕುಮಾರ್, ಸಂಚಾಲಕ ಕೆ.ಉಮೇಶ್, ಖಜಾಂಜಿ ಉದಯಕುಮಾರ,  ಪ್ರಧಾನ ಕಾರ್ಯದಶರ್ಿ ವರಲಹಳ್ಳಿ ಶಿವುಕುಮಾರ, ಕಾಯರ್ಾಧ್ಯಕ್ಷ ಹೆಚ್,ವಾಜೀದ್ ಹಾಗೂ ಸದಸ್ಯರಾದ ಎ.ಜಿ.ಮರೇಗೌಡ್ರು,       ಹೆಚ್,ಹುಚ್ಚಪ್ಪ, ಕೆ,ಮಂಜುನಾಥ್, ಪಿ.ಮಾರುತಿ, ಕೆ.ಸಂತೊಷ ಇನ್ನಿತರರು ಇದ್ದರು.