ಆಯುಷ್ಮಾನ ಭಾರತ ಯೋಜನೆಯ ಮಾಹಿತಿ ಕಾರ್ಯಗಾರ

ಲೋಕದರ್ಶನ ವರದಿ

ಶಿಗ್ಗಾವಿ 7: ಕೇಂದ್ರ ಸಕರ್ಾರದ ಆಯುಷ್ಮಾನ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷ ರೂಗಳ ಆರೋಗ್ಯ ವಿಮೆಯನ್ನು ಮಾಡಿದೆ ಆದರೆ ರಾಜ್ಯದಲ್ಲಿರುವ ಸಮ್ಮಿಶ್ರ ಸಕರ್ಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು 5 ಲಕ್ಷ ವಿರುವ ವಿಮೆಯನ್ನು 2 ಲಕ್ಷಕ್ಕೆ ಇಳಿಸಿ 3 ಲಕ್ಷ ಹಣದ ವಿಮೆಗೆ ಕತ್ತರಿ ಹಾಕಿ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲಾ ಎಂಬ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕನರ್ಾಟಕ ರಾಜ್ಯ ಕಾಮರ್ಿಕರ ಹಿತರಕ್ಷಣಾ ಮತ್ತು ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಫಕ್ಕಿರೇಶ ಶಿಗ್ಗಾವಿ ಸಕರ್ಾರದ ವಿರುದ್ದ ಹರಿಹಾಯ್ದರು.

       ಪಟ್ಟಣದ ಶರೀಫ ಭವನದಲ್ಲಿ ನಡೆದ ಕನರ್ಾಟಕ ರಾಜ್ಯ ಕಾಮರ್ಿಕರ ಹಿತರಕ್ಷಣಾ ಮತ್ತು ಜಾಗೃತ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಆಯುಷ್ಮಾನ ಭಾರತ ಯೋಜನೆಯ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2015 ರಲ್ಲಿ ನಮ್ಮ ಕಾಮರ್ಿಕರ ಸಂಘದ ವತಿಯಿಂದ 30 ಸಾವಿರ ಆರೋಗ್ಯ ವಿಮೆ ಇರುವ ಆರ್ಎಸ್ಬಿವೈ ಯೋಜನೆಯ ಮಾಹಿತಯನ್ನು ವಿವರಿಸಿ ಕಾಡರ್ುಗಳನ್ನು ವಿತರಿಸಿದ್ದೆವು ಅದೇ ಆರ್ಎಸ್ಬಿವೈ ಯೋಜನೆಯ ಫಲಾನುಭವಿಗಳು ಇಂದು 30 ಸಾವಿರ ವಿಮೆಯು ಬದಲಾಗಿ 5 ಲಕ್ಷಗಳ ವರೆಗೆ ಮೊದಿ ನೇತೃತ್ವದ ಕೇಂದ್ರ ಸಕರ್ಾರ ನೀಡಿದ್ದು ಈ ಯೋಜನೆಗಳ ಜೊತೆಗೆ ಆಮ್ಆದ್ಮಿ ಭಿಮಾ ಯೋಜನೆ, ಕಟ್ಟಡ ಕಾಮರ್ಿಕರಿಗೆ ಗುರುತಿನ ಚೀಟಿ, ಉಜ್ವಲ ಯೋಜನೆ, ಉಚಿತ ವಿದ್ಯೂತ್ ಮೀಟರ ಅಳವಡಿಕೆ, ಹೀಗೆ ಸಕರ್ಾರದ 46 ಯೋಜನೆಗಳಲ್ಲಿ 16 ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವಂತ ಕಾರ್ಯ ಹಾಗೂ ಕಾಮರ್ಿಕರ ಹೋರಾಟದ ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡುತ್ತಾ ಸೇವಾ ಮನೋಭಾವದಿಂದ ನಮ್ಮ ಸಂಘ ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ ಎಂದರು.

ವೈದ್ಯ ಡಾ. ಎಮ್ ಎಮ್ ತಿಲರ್ಾಪೂರ ಮಾತನಾಡಿ ಉತ್ತಮ ಆರೋಗ್ಯ ಮನುಷ್ಯನ ಮುಲಭೂತ ಹಕ್ಕು ಈ ವಿಷಯದಲ್ಲಿ ಆರೊಗ್ಯಯುವ ರಾಷ್ಟ್ರ ನಿಮರ್ಾಣದ ಕಡೆಗ ಪ್ರಧಾನಿ ಮೊದಿ ದಿಟ್ಟ ಹೆಚ್ಚೆಯನ್ನು ಇಟ್ಟಿದ್ದಾರೆ ಕಡು ಬಡವರಿಗಾಗಿ ಮಾಡಿದ ಈ ಯೋಜನೆಗಳ ಲಾಭವನ್ನು ಎಲ್ಲರು ಪಡೆಯಬೇಕು ಮತ್ತು ಈ ಯೋಜನೆಯನ್ನು ಮಾಹಿತಿಯ ಮೂಲಕ ತಲುಪಿಸುತಿರುವ ಸಂಘದ ರಾಜಾಧ್ಯಕ್ಷ ಫಕ್ಕಿರೇಶ ಶಿಗ್ಗಾವಿ ಅವರನ್ನು ಅಭಿನಂದಿಸಿದರು.

      ಶಿಗ್ಗಾವಿ ಎಸ್ಪಿಎಮ್ ಅಧಿಕಾರಿ ಶಂಕ್ರಣ್ಣ ಕೊಂಡಿಕೊಪ್ಪ ಮಾತನಾಡಿ ಈಗಾಗಲೇ 6 ಸಾವಿರ ಆಯುಷ್ಮಾನ ಭಾರತ ಯೋಜನೆಯ ಮಾಹಿತಿ ಪತ್ರಗಳು ಅಂಚೆ ಇಲಾಖೆಗೆ ಬಂದಿದ್ದು ವಿಳಾಸದಲ್ಲಿ ಸ್ವಲ್ಪ ತೊಂದರೆಯಾಗಿದ್ದು ಸಾರ್ವಜನಿಕರ ಸಹಕಾರ ಅಗತ್ಯವಿದ್ದು ಕೂಡಲೆ ಮುಟ್ಟಿಸಲಾಗುವದು ಮತ್ತು ಕಡು ಬಡವರಿಗಾಗಿ ರುಪಿಸಿದ ಈ ಯೋಜನೆ ಲಾಭ ಸಾರ್ವಜನಿಕರ ಪರವಾಗಿದೆ ಎಂದರು. 

      ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ ಮಾತನಾಡಿದರು.

ವಿರಕ್ತಮಠ ಮಠದ ಸಂಗನಬಸವ ಮಹಾ ಸ್ವಾಮಿಗಳು ಹಾಗೂ ಬಂಕಾಪೂರದ ಹಜರತ್ ಸೈಯದ್ ಷಾ ಮಹಮ್ಮದ ಖುತಬೇ ಆಲಮ್ ಖಾದ್ರಿ ಸಾನಿದ್ಯ ವಹಿಸಿದ್ದರು.

ಮಹಿಳಾ ಘಟಕದ ಅಧ್ಯಕ್ಷೆ ನಿಂಗಮ್ಮಾ ಮಾಡಗೇರಿ, ಯಲ್ಲಮ್ಮ ಬಾರಕೇರ, ದುರಗಪ್ಪ ವಡ್ಡರ, ಮಾರುತಿ ಭಜಂತ್ರಿ, ಮುನ್ನಾ ಬಿಸ್ತಿ, ಈರಪ್ಪ ಹಳೆಪ್ಪನವರ, ವಿಜಯ ಬುಳ್ಳಕ್ಕನವರ, ಶಕೀಲ್ಅಮ್ಮದ ಚಿಂದಡಿ, ಅಬ್ದುಲ್ವಾಹಬ್ ಚಿಂದಡಿ, ಮಂಜುನಾಥ ಮಿಜರ್ಿ, ಮಂಜುನಾಥ ವಡ್ಡರ, ಖಾದರಗೌಸ್ ಶೇಖಲ್ಲಿ, ಶೇಖಪ್ಪ ಗುಳೇದ, ಚಂದ್ರು ಡೋಳ್ಳೆಶ್ವರ, ಪ್ರಕಾಶ ಕಾಳೆ, ಭಾರತಿ ಪೂಜಾರ, ಜಮೀರ್ ಮಣಕಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಡಿ.ಎಸ್.ಓಲೇಕಾರ ಕಾರ್ಯಕ್ರಮ ನಿರ್ವಹಿಸಿದರು.