ವ್ಯಕ್ತಿಗತ ಅಪಾದನೆ ಸರಿಯಿಲ್ಲಾ: ಪ್ರಮೋದ ಹೆಗಡೆ
ಮುಂಡಗೋಡ 26: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಪಾದನೆ ಮಾಡಬೇಕಾದರೆ ವಿಷಯಾಧಾರಿತ ಇರಬೇಕು ವ್ಯಕ್ತಿಗತ ಅಪಾದನೆ ಮಾಡುವುದು ಸರಿಯಿಲ್ಲಾ ಕಾಂಗ್ರೆಸ್ ಹತ್ತಿರ ಯಾವುದೇ ವಿಷಯಾಧರಿತ ಇಲ್ಲದ್ದರಿಂದ ವ್ಯಕ್ತಿಗತ ಅಪಾದನೆ ಮಾಡುವುದು ಕಾಂಗ್ರೇಸ್ಗೆ ದುರಹಂಕಾರದ ಹುಚ್ಚು ಹಿಡಿದಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಹೇಳಿದರು.
ಅವರು ಮಂಗಳವಾರ ಬಸವೇಶ್ವರ ದೇವಸ್ಥಾನದ ಹತ್ತಿರವಿರುವ ಬಿಜೆಪಿ ಕಾಯರ್ಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತದ್ದರು.
5 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲವು ಪಡೆದಿರುವ ಅನಂತಕುಮಾರ ಹುಚ್ಚ, ಗ್ರಾಮ ಪಂಚಾಯತ್ ಸದಸ್ಯನಾಗಲಿಕ್ಕೆ ನಾಲಾಯಕ್ಕೆ ಎಂದಿರುವುದು ಉತ್ತರಕನ್ನಡದ ಮತದಾರರಿಗೆ ಅವಮಾನ ಮಾಡಿದಂತೆ ಎಂದರು.
ಅನಂತಕುಮಾರ ಹೆಗಡೆಯವರಿಗೆ ರಾಷ್ಟ್ರೀಯತೆ, ಹಿಂದುತ್ವದ ಕುರಿತು ಹುಚ್ಚು ಹಿಡಿದಿದೆ. ಅವರು ಪಕ್ಷಕ್ಕಾಗಿ ರಾಷ್ಟ್ರೀಯತೆಗಾಗಿ ಹಿಂದುತ್ವಕ್ಕಾಗಿ ತಮ್ಮ ಪ್ರಾಣವನ್ನು ಮುಡುಪಿಟ್ಟಿದ್ದಾರೆ ಎಂದರು. ಕಾಂಗ್ರೆಸ್ ಕನರ್ಾಟಕ ಸೇರಿದಂತೆ ದೇಶದಲ್ಲಿಡೆ ನಶಿಸಿಹೋಗುತ್ತಿದೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಹೊಂದಲು ಸಹ ಅವರಲ್ಲಿ ಸಂಖ್ಯಾ ಬಲವಿಲ್ಲ.
ನಮ್ಮಲ್ಲಿ ಮೂಲ ಬಿಜೆಪಿ ಹಾಗೂ ಹೊಸ ಬಿಜೆಪಿ ಎಂದು ಭೇದ ಭಾವವಿಲ್ಲ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ನಮ್ಮೆಲ್ಲರ ಗುರಿ ಬಿಜೆಪಿ ಅಭ್ಯಥರ್ಿ ಶಿವರಾಮ ಹೆಬ್ಬಾರರನ್ನು ಗೆಲ್ಲಿಸುವುದು.ಅವರನ್ನು ಗೆಲ್ಲಿಸುವುದಕ್ಕೆ ಜಿಲ್ಲೆಯ ಹೊರಡಗಡೆಯಿಂದ ಹರತಾಳ ಹಾಲಪ್ಪ ಕುಮಾರ ಬಂಗಾರಪ್ಪ ಸೇರಿದಂತೆ 75 ನಾಯಕರು ಧುರಿಣರು ಆಗಮಿಸಿ ಪಕ್ಷದ ಗೆಲವಿಗೆ ಕಂಕಣ ಕಟ್ಟಿ ನಿಂತಿದ್ದಾರೆ ಎಂದರು
ರಾಜ್ಯದ ಉಪಚುನಾವಣೆಯಲ್ಲಿ ಸ್ಪಧರ್ಿಸಿದ ಬಿಜೆಪಿಯ 15 ಅಭ್ಯಥರ್ಿಗಳು ಗೆಲವು ಸಾಧಿಸುತ್ತಾರೆ ಇದರೊಂದಿಗೆ ಯಡ್ಯೂರಪ್ಪ ಮೂರೆವರೆ ವರ್ಷ ಸುಭದ್ರವಾಗಿ ನಿರಾಂತಕವಾಗಿ ಸರಕಾರ ನಡೆಸುತ್ತಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ವಾಯುವ್ಯ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ವಿ.ಎಸ್.ಪಾಟೀಲ್, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ್, ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಗುಡ್ಡಪ್ಪಕಾತೂರ, ಎಸ್ಸಿ ಮೋಚರ್ಾ ಜಿಲ್ಲಾಧ್ಯಕ್ಷ ಅಶೋಕ ಚಲವಾದಿ, ಉಮೇಶ ಬೀಜಾಪರು, ಬಸವರಾಜ ಓಶಿಮಠ, ಜಿಲ್ಲಾ ಬಿಜೆಪಿ ಯುತ್ ಕಾರ್ಯದಶರ್ಿ ಚನ್ನಪ್ಪಾ ಹಿರೆಮಠ. ಸುನೀಲ ವಣರ್ೇಕರ, ಸುಭಾಸ ಲಮಾಣಿ, ಶೇಖರ ಲಮಾಣಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.