ಲೋಕದರ್ಶನ ವರದಿ
ಇಂಡಿ 02: ಪುರಸಭೆ ಚುನಾವಣೆಯಲ್ಲಿ ನಮ್ಮನ್ನು ಆಯ್ಕೆ ಮಾಡಿದ ಜನರ ಋಣ ತೀರಿಸಲು ನಾವು ಬಂದಿದ್ದೇವೆ. ಯಾವುದೇ ಪಕ್ಷಪಾತ ಮಾಡದೆ ವಾರ್ಡ ಅಭಿವೃದ್ದಿಯತ್ತ ನಾವು ಗಮನಹರಿಸುತ್ತೇವೆ ಎಂದು ನೂತನವಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯ ಭೀಮನಗೌಡ ಪಾಟೀಲ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ಸಹಕಾರಿ ಸಂಘದ ಕಾಯರ್ಾಲಯದಲ್ಲಿ ಹಮ್ಮಿಕೊಂಡ ನೂತನ ಪುರಸಭಾ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ಐದು ಬಾರಿಯಿಂದ ಸತತವಾಗಿ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷ ಸ್ಥಾನ ಪಡೆದುಕೊಂಡು ಕಾರ್ಯ ಮಾಡಿದ್ದೇನೆ. ನನ್ನೊಂದಿಗೆ ಈಗ ಹತ್ತು ಹಲವು ಹೊಸ ಸದಸ್ಯರು ಆಯ್ಕೆಯಾಗಿದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ದಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.
ಎರಡನೇ ಅವಧಿಗೆ ಸದಸ್ಯರಾಗಿ ಆಯ್ಕೆಯಾದ ಅನೀಲಗೌಡ ಬಿರಾದಾರ ಮಾತನಾಡಿದರು.
ನೂತನವಾಗಿ ಸದಸ್ಯರಾಗಿ ಆಯ್ಕೆಯಾದ ಶ್ರೀಶೈಲ ಪೂಜಾರಿ, ಅಸ್ಲಮ್ ಕಡಣಿ, ರೇಣುಕಾ ಉಟಗಿ, ಸತೀಶ ಕುಂಬಾರ, ಸಾಯಬಣ್ಣ ಮೂರಮನ್, ಉಮೇಶ ದೇಗಿನಾಳ ಅವರನ್ನು ಸತ್ಕರಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಉಮೇಶ ಬಳಬಟ್ಟಿ, ನಿಂಗನಗೌಡ ಬಿರಾದಾರ, ಭೀಮಾಶಂಕರ ಪ್ರಚಂಡಿ, ಶರಣಗೌಡ ಬಂಡಿ, ಯಲಗೊಂಡ ಬೇವನೂರ, ಶ್ರೀಶೈಲ ಕೋರಳ್ಳಿ, ಪ್ರಶಾಂತಗೌಡ ಬಿರಾದಾರ, ಸಂತೋಶ ದೇವರ, ಈಶ್ವರ ಪಾಟೀಲ, ಕುಮಾರಗೌಡ ಪಾಟೀಲ, ಸಂಜೀವ ದಶವಂತ ಅಶೋಕ ಬಳಬಟ್ಟಿ, ಶಿವು ಗಡಗಲಿ, ಸಚಿನ ಬಾರಿಕಾಯಿ, ನಾಗು ದಶವಂತ, ಪ್ರವೀಣ ಮಠ ಮತ್ತಿತರರು ಇದ್ದರು.