ಭಾರತೀಯರು ಆರಾಧನಾ ಪ್ರಿಯರು: ಡಾ. ಗುರುದೇವಿ ಹುಲೆಪ್ಪನವರಮಠ

ಲೋಕದರ್ಶನ ವರದಿ

ಬೆಳಗಾವಿ 06: ಭಾರತೀಯರು ಆರಾಧನಾ ಪ್ರಿಯರು. ಜರ್ಮನ್ರು ಭಾರತೀಯರನ್ನು ಪ್ರೀತಿಸುತ್ತೀರಿ ಏಕೆಂದು ರವೀಂದ್ರನಾಥ ಟ್ಯಾಗೋರ್ ಅವರು ಕೇಳಿದಾಗ, ನಾವೇಕೆ ನಿಮ್ಮನ್ನು ಪ್ರೀತಿಸುತ್ತೆವೆಂದರೆ? ನೀವು ಭಾರತೀಯರು ದೇವರನ್ನು ಪ್ರೀತಿಸುತ್ತೀರಿ ಅದಕ್ಕೆ ನಾವು ನಿಮ್ಮನ್ನು ಪ್ರೀತಿಸುತ್ತೇವೆಂದರು. ವರ್ಷವಿಡಿ 12 ಶಿವರಾತ್ರಿಗಳಿರುತ್ತವೆ. ಆದರೆ ಫೆಬ್ರುವರಿ ಮಾರ್ಚನಲ್ಲಿ ಬರುವ ಈ ಶಿವರಾತ್ರಿಯು ವಿಶೇಷವಾಗಿರುವಂತದ್ದು. ಈ ದಿವಸ ಶಿವನು ಶಕ್ತಿಯೊಂದಿಗೆ ಬೆರೆಯುವ ಪವಿತ್ರ ದಿವಸ. ಶಿವನವಾಸ ಭಕ್ತನ ಮನದ ಮೊನೆಯ ಕೊನೆಯಾಗಿರುವುದು. ಶಿವನಿಗೆ ಹತ್ತು ಹಲವು ನಾಮಗಳು ಜಗದೀಶ್ವರ, ಭೂತೇಶ್ವರ, ಯೋಗೀಶ್ವರ, ಪರಮೇಶ್ವರ, ವಿಷಕಂಠ, ಮಣಿಕಂಠ ಮುಂತಾಗಿವೆ. ಶಿವನು ಸಕಲ ಚಟುವಟಿಕೆಗಳ ಮೂಲ. ಶಿವ ಎಂದರೆ ಮಂಗಳಕರ ಪ್ರಕಾಶಕ. ಶಿವಪುರಾಣದ ಪ್ರಕಾರ ಶಿವನ ಪೂಜೆಗೆ ಅನೇಕ ವಿಧಗಳಿವೆ ಇಂದು 1008 ಜಪಗಳನ್ನು ಶಿವನ ಕುರಿತು ಮಾಡಿದರೆ ಅದ್ಭುತ ಫಲ ಲಭ್ಯವಾಗುವುದು. ಇಂದು ಶಿವನನ್ನು ಬಿಲ್ವಪತ್ರೆ ಇಂದ ಅರ್ಚಣೆ ಮಾಡಿದರೆ ಕೋಟಿ ಜನ್ಮಕ್ಕಾಗುವಷ್ಟು ಪುಣ್ಯ ಸಿಗುತ್ತದೆ ಎನ್ನಲಾಗಿದೆ ಎಂದುಡಾ. ಗುರುದೇವಿ ಹುಲೆಪ್ಪನವರಮಠ ಅವರು ಕಾರಂಜಿಮಠದಲ್ಲಿ ನಡೆದ 223ನೇ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು

ರುದ್ರಾಕ್ಷಿ ಶಿವನ ಆಭರಣ. ಶಿವನು ರುದ್ರಾಕ್ಷಿ ಧರಿಸಿದ ಮೇಲೆಯೇ ರುದ್ರಾಕ್ಷ ಎಂಬ ಹೆಸರು ಬಂತೆಂಬುದು ಶಿವಪುರಾಣದ ಅಭಿಪ್ರಾಯ. ತ್ರಿಪುರಾಸುರನನ್ನು ಸಂವರಿಸಲು ಶಿವನು ಒಂದು ಸಾವಿರ ವರ್ಷ ತಪಸ್ಸು ಮಾಡಿದನು. ಅದು ಅರ್ಧ ಕಣ್ಣು ತೆರೆದು. ಆಗ ಕಣ್ಣಿನಿಂದ ನೀರು ಬಂದದ್ದೆ ರುದ್ರಾಕ್ಷಿ ಸೃಷ್ಟಿಗೆ ಕಾರಣವಾಯಿತು. ಇಂತ ರುದ್ರಾಕ್ಷಿಯನ್ನು ಧರಿಸುವುದರಿಂದ ಆರೋಗ್ಯ ವೃದ್ದಿಸುತ್ತದೆ. ರುದ್ರಾಕ್ಷಿಯಿಂದ ಆಯಸ್ಕಾಂತೀಯ ಕಿರಣಗಳು ಬಿಡುಗಡೆಯಾಗುತ್ತವೆ ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು "ರುದ್ರಾಕ್ಷಿ ಮಹತ್ವ ಕುರಿತು ಉಪನ್ಯಾಸ ನೀಡುತ್ತಾ ಡಾ. ಸ್ಪೂತರ್ಿ ಶಿವಾನಂದ ಮಾಸ್ತಿಹೊಳಿ ಅವರು ಈ ಮೇಲಿನಂತೆ ನುಡಿದರು. 

ಸಾಮಾಜಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನ ಫಲವೇ ಇಂದು ಕಾರಂಜಿಮಠದ ಪೂಜ್ಯರು  ನನ್ನನ್ನು "ವೈದ್ಯ ಭೂಷಣ" ಪ್ರಶಸ್ತಿ ನೀಡಿ ಸನ್ಮಾನಿಸಿದ್ದಕ್ಕೆ ನನಗೆ ತುಂಬ ಸಂತೋಷವಾಗಿದೆ. ತಾಯಿಯಿಂದ ಹಾಗೂ ತಂದೆಯಿಂದ ನಾನು ಬಹಳ ಕಲಿತಿದ್ದೇನೆ. ಇಂತ ಸಂದರ್ಭದಲ್ಲಿ ಇವರ ಸ್ಮರಣೆ ಮಹತ್ವದ್ದು. ನಮ್ಮ ಹಿರಿಯರಂತೆ ನಾವು ಬದುಕಬೇಕು. ಅವರು ತಿನ್ನುತ್ತಿದ್ದ ಆಹಾರ ಪದಾರ್ಥಗಳನ್ನೇ ತಿನ್ನಬೇಕು. ದೂರದರ್ಶನದಲ್ಲಿ ಬರುವ ಅಡ್ವಟೈಜ್ಗಳೆಲ್ಲ ಸತ್ಯಕ್ಕೆ ದೂರವಾದವುಗಳು. ಬೇಗ ಮಳಗಿ ಬೇಗ ಏಳಬೇಕು. ದೇಹಕ್ಕೆ ಶ್ರಮವನ್ನು ನೀಡಬೇಕು. ಪ್ರತಿಯೊಬ್ಬರು. ವ್ಯಾಯಾಮ ಮಾಡಬೇಕು. ಸಕ್ಕರೆ, ಎಣ್ಣೆಗಳನ್ನು ಕಡಿಮೆ ಉಪಯೋಗಿಸಬೇಕು. ಕಾಯಿಪಲ್ಯ, ಹಣ್ಣು, ಮೊಳಕೆಕಾಳು, ಮೊಸರು ಮಜ್ಜಿಗೆಯನ್ನು ಹೆಚ್ಚು ಉಪಯೋಗಿಸಬೇಕು. ಕನಿಷ್ಠ 8ಗಂಟೆ ನಿದ್ರೆಮಾಡಬೇಕು. ಪ್ರತಿನಿತ್ಯ 20 ನಿಮಿಷ ನಡಿಗೆ, 20 ನಿಮಿಷ ಯೋಗ, 20 ನಿಮಿಷ ಪ್ರಾಣಾಯಾಮ ಮಾಡಬೇಕು ಎಂದು ಡಾ|| ರವಿ ಬಿ ಪಾಟೀಲ ಅವರು ಅಭಿಪ್ರಾಯವನ್ನು ಹಂಚಿಕೊಂಡರು.

ಮಾಜಿ ಮಹಾಪೌರರಾಗಿರುವ ಡಾ. ಸಿದ್ಧನಗೌಡ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಯತ್ತಾ ಇಂದಿನ ಶಿವರಾತ್ರಿ ಹಾಗೂ ಶಿವಾನುಭವ ಕಾರ್ಯಕ್ರಮ ವಿಶೇಷವಾಗಿ ಆರೋಗ್ಯದ ಕಾರ್ಯಕ್ರಮವಾಗಿದ್ದು ತುಂಬಾ ಸಂತಸ ಶಿವನ ಸ್ಮರಣೆಯೆಂದರೆ ಅದು ಪರಿಪೂರ್ಣ ಆರೋಗ್ಯವೇ ಸರಿ. ಶಿವರಾತ್ರಿಯ ನಿಮಿತ್ಯ ಉಪವಾಸದಿಂದ ದೇಹಾರೋಗ್ಯ ಪರಿಪೂರ್ಣತೆಯನ್ನು ತಲುಪುತ್ತದೆ. ಮಾನಸಿಕವಾಗಿ ನಾವು ಸದೃಡವಾಗುತ್ತೇವೆ ಎಂದರು. 

ಸಮ್ಮುಖವಹಿಸಿ ಮಾತನಾಡಿದ ಶಿವಯೋಗಿ ದೇವರು ಬಸವಣ್ಣನವರು ಹೇಳಿರುವಂತೆ ಪರಶಿವನನ್ನು ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು. ಉಪವಾಸ ಬರಿ ದೇಹದ ದಂಡನೆಯಾಗದೆ ದೇವರ ನಿಜವಾದ ಉಪಾಸನೆ ಮಾಡುವುದಾಗಬೇಕು. ಭಕ್ತಿ ಶ್ರದ್ಧೆಯಿಂದ ಶಿವನ ನಾಮಸ್ಮರಣೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಇದುವೇ ಜೀವನದ ಮುಖ್ಯ ಗುರಿಯಾಗಿರಬೇಕು ಎಂದರು. ಗುರುಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಕಾರ್ಯಕ್ರಮದ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತಾದರೆ ಇಂತ ಕಾರ್ಯಕ್ರಮಗಳನ್ನು ಮಾಡಿದ್ದಕ್ಕು ಸಾರ್ಥಕ ಎಂದರು. ಎಲ್ಲರು ಸೇರಿ ಶಿವನ ಕುರಿತು ಚಿಂತನ ಮಾಡುವುದೇ ಒಂದು ಯೋಗ ಎಂದರು.

ಡಾ.ರಾಜಶೇಖರ, ಡಾ. ಬಸವರಾಜ ಜಗಜಂಪಿ, ವಿಜಯ ಶಾಸ್ತ್ರಿಗಳು, ಅಶೋಕ ಇಟಗಿ ಮುಂತಾದವರು ಉಪಸ್ಥಿತರಿದ್ದರು ಪ್ರೊ. ಶಾನವಾದ ನಿರೂಪಿಸಿದರು. ವಿ. ಕೆ. ಪಾಟೀಲ ವಂದನಾರ್ಪಣೆ ಮಾಡಿದರು. ಮಾತೃಮಂಡಳಿಯ ತಾಯಂಡಿರು ಪ್ರಾರ್ಥಣೆ ಹಾಗು ವಚನ ಮಂಗಲ ಮಾಡಿದರು.