ಲೋಕದರ್ಶನ ವರದಿ
ಬೆಳಗಾವಿ 28: ದಿ. 27ರಂದು ನಗರದ ಶಾಲಾ ವಿದ್ಯಾಥರ್ಿಗಳು ಶಾಸಕ ಅನಿಲ ಬೆನಕೆರವರೊಂದಿಗೆ ಇಂದಿನ ಯುವಜನಾಂಗದ ಯುವಶಕ್ತಿಗೆ ಹಾಗೂ ಮಕ್ಕಳ ಕಲಿಕಾ ಚಟುವಟಿಕೆ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳ ಕಲಿಕೆಯ ಶಕ್ತಿ, ಸಾಮಾಜಿಕವಾಗಿ, ಧಾಮರ್ಿಕವಾಗಿ, ದೇಶದ ಯುವ ಸಮೂಹದ ಹಾಗೂ ದೇಶದ ಅಭಿವೃದ್ಧಿ ಕುರಿತು ಶಾಲೆಯ ವಿದ್ಯಾಥರ್ಿಗಳು ಶಾಸಕರ ಅಭಿಪ್ರಾಯದ ಬಗ್ಗೆ ಮತ್ತು ಶಾಸಕರ ರಾಜಕೀಯದ ಹಾದಿ ಮತ್ತು ರಾಜಕೀಯದಲ್ಲಿನ ವಿಚಾರಧಾರೆಗಳ ಬಗ್ಗೆ ಮತ್ತು ಅವರ ಶಿಕ್ಷಣದ ಬಗ್ಗೆ ಹಾಗೂ ಸಮಾಜದ ಮತ್ತು ಕ್ಷೇತ್ರದ ಬಗ್ಗೆ ಶಾಸಕರಿಗೆ ಇರುವ ಕಾಳಜಿ ಕುರಿತು ಚಚರ್ಿಸಿದರು.
ಈ ಸಂದರ್ಭದಲ್ಲಿ ಶಾಸಕರು ಶಾಲಾ ಮಕ್ಕಳು ಇಂದಿನ ಪೀಳಿಗೆಯಲ್ಲಿ ಕಲಿಕಾ ವಿದ್ಯಾಥರ್ಿಗಳಿಗೆ ಪ್ರಾಯೋಗಿಕ ಕಲಿಕೆಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಆದ್ದರಿಂದ ಮಕ್ಕಳಲ್ಲಿ ಹಾಗೂ ಇಂದಿನ ಯುವಜನಾಂಗಕ್ಕೆ ಭಾರತೀಯ ಸಂಸ್ಕೃತಿಯು ಅತ್ಯಮೂಲ್ಯವಾಗಿದ್ದು, ಸಮುದಾಯದಲ್ಲಿನ ನೈತಿಕತೆ ಹಾಗೂ ಉತ್ತಮ ಜ್ಞಾನದ ಆಧಾರದ ಮೇಲೆ ಇಂದಿನ ಶಿಕ್ಷಣವು ವ್ಯವಸ್ಥಿತವಾಗಿ ಮುನ್ನಡೆಯುತ್ತದೆ ಎಂದರು. ನಂತರದಲ್ಲಿ ರಾಜಕೀಯದ ಬಗ್ಗೆ ಅಭಿಪ್ರಾಯ ಕೇಳಿದ ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಶಾಸಕರು ನ್ಯಾಯಂಗವನ್ನು ಅಥವಾ ಕಾನೂನನ್ನು ಹಾಗೂ ಸಮಾಜದ ಒಳಿತನ್ನು ಯಾರು ಗೌರವಿಸುತ್ತಾರೋ ಅಂತವರು ಉತ್ತಮ ಪ್ರಜೆಗಳಾಗುವಲ್ಲಿ ಹಾಗೂ ಉತ್ತಮ ರಾಜಕಾರಣಿಯಾಗುವಲ್ಲಿ ಯಾವುದೇ ಸಂದೇಹವಿಲ್ಲ ಆದ್ದರಿಂದ ನಾನು ಇಂದು ಉತ್ತಮ ರಾಜಕಾರಣಿಯಾಗಿದೇನೆಂದರು.
ಭಾರತ ದೇಶದಲ್ಲಿ ಶ್ರೇ. 70ರಷ್ಟು ಹಳ್ಳಿಗಳಿಂದ ಕೂಡಿರುವುದರಿಂದ ಭಾರತ ಒಂದು ವೈವಿದ್ಯಮಯ ರಾಷ್ಟ್ರವಾಗಿದೆ ಹಾಗೂ ಭಾರತ ದೇಶವು ಶೇ. 65ರಷ್ಟು ಯುವ ಜನಾಂಗವನ್ನು ಹೊಂದಿರುವುದರಿಂದ ಇಡೀ ಜಗತ್ತು ನಮ್ಮ ಯುವ ಸಮೂಹವನ್ನು ನೋಡುತ್ತದೆ ವಿನಹ ವಯಸ್ಸಾದವರನ್ನಲ್ಲ ಎಂದು ಯುವ ಸಮೂಹದ ಮೇಲಿರುವ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು ಯುವ ಸಮೂಹವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಭಾರತ ಸಮುದಾಯ ಅಭಿವೃಧ್ದಿಯಾಗಬೇಕಾದರೆ ವಿದ್ಯಾಥರ್ಿಗಳಲ್ಲಿನ ಆಚಾರ ವಿಚಾರಗಳು ಉತ್ತಮವಾಗಿರಬೇಕು ಹಾಗೂ ಮಾತೃಭಾಷೆಗೆ ಮೊದಲ ಆದ್ಯತೆಯನ್ನು ನೀಡಿ ನಂತರದಲ್ಲಿ ಉಳಿದ ಭಾಷೆಯ ಬಗ್ಗೆ ಗಮನಹರಿಸಬೇಕು ಮತ್ತು ಬಡವರ, ರೈತಾಪಿ ವರ್ಗದವರ ಜೊತೆಗೆ ಉತ್ತಮ ಬಾಂದವ್ಯವನ್ನು ಹೊಂದಬೇಕೆಂದರು. ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಇಂದಿನ ಯುವ ಸಮೂಹದ ಪಾತ್ರ ಮಹತ್ವಾದ್ದಾಗಿರುವುದರಿಂದ ಎಲ್ಲರೂ ಒಂದಾಗಿ ಭಾರತವನ್ನು ವಿಶ್ವಗುರುವಾಗಿಸೋಣ ಎಂದು ಶಾಲಾ ಮಕ್ಕಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಆಕಾಡೆಮಿ ನಿದರ್ೇಶಕರಾದ ಸುಧೀರ ಕಮತೆ, ಅಕಾಡೇಮಿ ಸಂಯೋಜಕರಾದ ರೇಖಾ ವಾಘೆ, ಮುಖ್ಯೋಪಾಧ್ಯೆ ಅನುಪಮಾ, ಕಛೇರಿ ಸಿಬಂಧಿಗಳಾದ ಪ್ರವೀಣ ಕೆ. ಮುರಳಿ ಡಿ. ದೈಹಿಕ ಶಿಕ್ಷಕರಾದ ದಿ.ಜಿ.ಖೋತ, ಸಹಾಯಕ ಶಿಕ್ಷಕರಾದ ವಜರ್ಿನಿಯ ಹಾಗೂ ಶಾಲಾ ವಿದ್ಯಾಥರ್ಿಗಳಾದ ಸೀಮಾ ಗಡಕರಿ, ಮೇಹ್ರೀನ ಯರಗಟ್ಟಿ, ಫುರ್ಕಾನ ಸಯ್ಯದ, ಶ್ರೇಯಸ್ ನಾಯಕ್, ಸುಚೀತಾ ಟಾಕಡೆ ಹಾಗೂ ಇತರರು ಉಪಸ್ಥಿತರಿದ್ದರು.