ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ಭಾರತೀಯ ಸಂಸ್ಕೃತಿಯು ಮರೆಮಾಚುತ್ತಿದೆ: ಡಾ.ಇಂಗನಾಳ

ಲೋಕದರ್ಶನ ವರದಿ

ಮುಧೋಳ:29:-ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ಭಾರತೀಯ ಸಂಸ್ಕೃತಿಯು ಮರೆಮಾಚುತ್ತಿರುವುದು ವಿಷಾದನೀಯ,ಭಾರತೀಯ

ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಉದ್ದೇಶದಿಂದ ಎಸ್.ಆರ್.ಕಂಠಿ ಕಾಲೇಜಿನ ಕಲಾ ವಿಭಾಗದ ಆಶ್ರಯದಲ್ಲಿ ಇದೇ ಪ್ರಥಮ ಭಾರಿಗೆ ಜನಪದ ಜಾತ್ರೆ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ದೇಶಿ ಆಟಗಳು, ದೇಶಿ ಊಟಗಳು, ದೇಶಿ

ಜನಪದ ಗೀತೆ ಮತ್ತು ನೃತ್ಯ,ವಸ್ತು ಪ್ರದರ್ಶನ,ವೇಷ-ಭೂಷಣ,ವಾದ್ಯಮೇಳದಂತಹ ಹಲವು ಸ್ಪಧರ್ೆಗಳನ್ನು ಏರ್ಪಡಿಸಲಾಗಿದೆ. ವಿದ್ಯಾಥರ್ಿ-ವಿದ್ಯಾಥರ್ಿನಿಯರು ಆಸಕ್ತಿಯಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ತಾವು ಹಮ್ಮಿಕೊಂಡಿರುವ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಪ್ರಾಚಾರ್ಯ ಡಾ. ಎನ್.ಬಿ.ಇಂಗನಾಳ ಹೇಳಿದರು.

    ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಕಾಲೇಜಿನ ಕಲಾ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಮತ್ತು ಶನಿ ವಾರ ಎರಡು ದಿನಗಳ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಆಹಾರ ಮೇಳ ಸ್ಪಧರ್ೆಗೆ ಚಾಲನೆ ನೀಡಿ ಮಾತನಾಡಿ,ಭಾರತೀಯ ಸಂಸ್ಕೃತಿ ಯನ್ನು ನೆನಪು ಮಾಡಿಕೊಳ್ಳುವದಾಗಿದೆ,ಕಾಲೇಜಿನ ಶೇ.80ರಷ್ಟು ವಿದ್ಯಾಥರ್ಿಗಳು ಗ್ರಾಮೀಣ ಭಾಗದವರಾಗಿದ್ದು,ಅವರಿಗೊಸ್ಕರ ಮತ್ತು ನಗರ ಪ್ರದೇಶದಲ್ಲಿರುವ ವಿದ್ಯಾಥರ್ಿಗಳಿಗೊಸ್ಕರ ಇಂತಹ ಸ್ಪಧರ್ೆಯನ್ನು ಆಯೋಜಿಸುವ ಮೂಲಕ ದೇಶಿ ಸಂಸ್ಕೃತಿಯನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

  ದೇಶಿ ಆಹಾರ ಮೇಳ ಸ್ಪಧರ್ೆಯಲ್ಲಿ 8ತಂಡಗಳು ಭಾಗವಹಿಸಿದ್ದವು.ಸಜ್ಜೆರೊಟ್ಟಿ, ಬಿಳಿಜೋಳರೊಟ್ಟಿ, ಗೊಂಜಾಳರೊಟ್ಟಿ, ಚಪಾತಿ,ಸಜ್ಜಕ,ಶೇಂಗಾ ಮತ್ತು ಹೂರಣದ ಹೋಳಿಗೆ, ಬದನೆಕಾಯಿ, ಚವಳಿಕಾಯಿ,ಬೆಂಡೆಕಾಯಿ ಹೀಗೆ ವಿವಿಧ ತರಹದ ಕಾಯಿಪಲ್ಯೆ ಸವತೆಕಾಯಿ,ಗಜ್ಜರಿ,  ಟೊಮೆಟೋ, ಮೂಲಂಗಿ, ಮೆಂತೆ ಮತ್ತು ಸಬ್ಬಸಗಿ ಸೊಪ್ಪು, ಜುನಕ, ವಿವಿದ ಬಗೆಯ ಚಟ್ನಿಗಳು, ಹುಗ್ಗಿ, ಸ್ಯಾಂಡಗೆ,ಹುಳ್ಳಾನುಚ್ಚು,ತಾಲಿಪಟ್ಟಿ, ದ್ವಿದಳದಾನ ಪಲ್ಯೆ, ಪಡ್ಡು, ದೋಸೆ, ಕಡಬು, ಕೆಂಪುಕಾರ, ಬೆಣ್ಣೆ, ತುಪ್ಪ, ಕಚರ್ಿಕಾಯಿ,ಬಿಳಿಅನ್ನ,ಮಸಾಲಿ ಅನ್ನ,ಕೆನೆ ಮೊಸರು,ಮಾದಲಿ ಹೀಗೆ ತರಹ ತರಹದ ಅಡುಗೆಯನ್ನು ವಿದ್ಯಾಥರ್ಿಗಳು ಸಿದ್ದಪಡಿಸಿಕೊಂಡು ಬಂದಿದ್ದರು,ಇಂತಹ ರುಚಿ ರುಚಿಯಾದ ಊಟವನ್ನು ಸವಿ ಯಲು ತಾಮುಂದೆ ನಾಮುಂದೆ ಎಂದು ಕ್ಯೂ ಹೆಚ್ಚಿ ಊಟು ಮಾಡಿ ಸಂಭ್ರಮಿಸಿದರು.

   ಹಗ್ಗಜಗ್ಗಾಟ,ಲಗೋರಿ,ಖೋಖೋ ಹೀಗೆ ವಿವಿಧ ಗ್ರಾಮೀಣ ಆಟಗಳ ಸ್ಪಧರ್ೆಗಳು ನಡೆದವು, ಸಾಂಪ್ರಾದಾಯಿಕ ಉಡುಗೆ-ತೊಡುಗೆ ಗಳನ್ನುತೊಟ್ಟುಕೊಂಡು ಜನಪದ ಗೀತೆ ಮತ್ತು ನೃತ್ಯ ಸ್ಪಧರ್ೆಗಳು ನಡೆದವು ಈ ಎಲ್ಲ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ಬೋಧಕ,ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

   ಶನಿವಾರ ಬೆಳಿಗ್ಗೆ 8ಕ್ಕೆ ಜಾನಪದ ವಸ್ತುಪ್ರದರ್ಶನ, ವೇಷ- ಭೂಷಣ ಸ್ಪಧರ್ೆ, ವಾದ್ಯಮೇಳ ನಡೆಯಲಿವೆ ನಂತರ ಸಮಾರೋಪ

ಸಮಾರಂಭದಲ್ಲಿ ಸ್ಪಧರ್ೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.