ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತ: ಐಹೊಳೆ
ರಾಯಬಾಗ 26: ಡಾ.ಬಿ.ಆರ್.ಅಂಬೇಡ್ಕರರವರು ರಚಿಸಿದ ಭಾರತ ಸಂವಿಧಾನದಲ್ಲಿ ಭಾರತ ಎಲ್ಲ ನಾಗರಿಕರಿಗೆ ಸಮಾನತೆಯನ್ನು ಕಲ್ಪಿಸಿ ನ್ಯಾಯ ಒದಗಿಸಿದ್ದಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಭಾನುವಾರ ಪಟ್ಟಣದ ತಾಲೂಕು ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿ ಅನೇಕ ರಾಜ್ಯ, ಭಾಷೆ, ಧರ್ಮ, ವೈವಿಧ್ಯಮ ಸಂಸ್ಕೃತಿಗಳಿಂದ ಕೂಡಿದ್ದರೂ, ನಾವೆಲ್ಲರೂ ಒಂದೇ ಎಂದು ಭಾವನೆಯಿಂದ ಕೂಡಿ ಬಾಳುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ತಹಶೀಲ್ದಾರ ಸುರೇಶ ಮುಂಜೆಯವರು ಧ್ವಜಾರೋಹಣ ನೆರವೇರಿಸಿದರು. ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ತಾ.ಪಂ.ಇಒ ಅರುಣ ಮಾಚಕನೂರ, ಸಿಪಿಐ ಬಿ.ಎಸ್.ಮಂಟೂರ, ಬಿಇಒ ಬಸವರಾಜಪ್ಪ ಆರ್., ಸಮಾಜ ಕಲ್ಯಾಣಾಧಿಕಾರಿ ವಿ.ಎಸ್.ಚಂದರಗಿ, ಪಿಡಬ್ಲೂಡಿ ಎಇಇ ಆರ್.ಬಿ.ಮನವಡ್ಡರ, ಟಿಎಚ್‌ಒ ಡಾ.ಎಸ್.ಎಮ್.ಪಾಟೀಲ, ಕೃಷಿ ಅಧಿಕಾರಿ ವಿನೋದ ಮಾವರಕರ, ಪರಮಾನಂದ ಮಂಗಸೂಳಿ, ಭಾರತಿ ಕಾಂಬಳೆ, ಕಲ್ಪನಾ ಕಾಂಬಳೆ, ವಿಶ್ವನಾಥ ಹಾರೂಗೇರಿ, ಬಸವರಾಜ ಕಾಂಬಳೆ, ವಿನಾಯಕ ಭಾಟೆ, ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ವಸಂತ ಹೊಸಮನಿ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ದೈಹಿಕ ಶಿಕ್ಷಣ ಪರೀವಿಕ್ಷಕ ಎಮ್.ಪಿ.ಜಿರಗ್ಯಾಳ ಸ್ವಾಗತಿಸಿ, ನಿರೂಪಿಸಿದರು. ಪಿ.ಎಸ್.ಶಾರಬಿದ್ರೆ ವಂದಿಸಿದರು.