ಯಲಬುಗರ್ಾ: ಇವತ್ತು ಜಗತ್ತೀನಲ್ಲಿ ಅತ್ಯಂತ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಒಂದು ಯಾಕೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಭಾವ ಹಾಗೂ ಉತ್ತಮ ಜನಪರ ಆಡಳಿತದಿಂದ ಇಡಿ ವಿಶ್ವವೇ ನಮ್ಮ ದೇಶದ ಸ್ನೇಹಕ್ಕೆ ಕಾದು ಕುಳಿತಿವೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಕುಡಗುಂಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಪ,ಜಾ/ಪ,ಪಂಗಡದವರಿಗೆ ಉಚಿತ ಗ್ಯಾಸ್ ವಿತರಿಸಿ ಅವರು ಮಾತನಾಡಿದರು.
ನಮ್ಮ ಗ್ರಾಮೀಣ ಭಾಗದ ಜನರು ಗ್ಯಾಸ್ ಸೌಲಭ್ಯದಿಂದ ವಂಚಿತರಾಗಿದ್ದರು ಬರಿ ಕಟ್ಟಿಗೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದರು ಇದನ್ನು ಅರಿತ ಪ್ರಧಾನಿಗಳು ಮಹಿಳೆಯರ ಅನುಕೂಲಕ್ಕಾಗಿ ಉಜ್ವಲ ಯೋಜನೆಯನ್ನು ಜಾರಿಗೆ ತರುವದರ ಮೂಲಕ ಅವರ ಕಷ್ಟಕ್ಕೆ ಸಹಕಾರಿಯಾದರು, ಈ ಯೋಜನೆಯಿಂದ ಸಾಕಷ್ಟು ಕುಟುಂಬಗಳು ಇತರರಂತೆ ಜೀವನ ಸಾಗಿಸುತ್ತಿದ್ದಾರೆ, ಇದರ ಜೊತೆಗೆ ರೈತರಿಗೆ ಶಾಲಾ ಮಕ್ಕಳಿಗೆ, ಆಗತಾನೆ ಹುಟ್ಟಿದ ಮಗುವಿಗೂ ಸಹ ಸುಕನ್ಯ ಸಮೃದ್ಧಿ ಯೋಜನೆಯನ್ನ ಜಾರಿಗೆ ತರುವದರ ಮೂಲಕ ಮಹಿಳೆಯರ ಮನ ಗೆದ್ದರು ಇದರ ಜೊತೆಗೆ ಮುಂದುವರೆದ ಬೇರೆ ಬೇರೆ ರಾಷ್ಟ್ರಗಳು ಸಹಿತ ಇಂದು ಭಾರತದ ಏಳಿಗೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಗಳುತ್ತಿವೆ ಎಂದರು.
ಜಿಪಂ ಸದಸ್ಯೆ ಪ್ರೇಮಾ ಈರಪ್ಪ ಕುಡಗುಂಟಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ ಎಚ್ ಪಾಟೀಲ, ಕಳಕಪ್ಪ ತಳವಾರ, ಸಿದ್ರಾಮೇಶ ಬೇಲೆರಿ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಮೇಟಿ, ಅಮರೇಶ ಹುಬ್ಬಳ್ಳಿ, ಪ್ರಭುರಾಜ ಕಲಬುಗರ್ಿ, ಶಿವನಗೌಡ್ರ ಬನ್ನಪ್ಪಗೌಡ್ರ, ಈರಪ್ಪ ಕುಡಗುಂಟಿ, ಚಂದ್ರು ಮರದಡ್ಡಿ, ಸೇರಿದಂತೆ ಅನೇಕರು ಹಾಜರಿದ್ದರು.