ಇಂಡಿ: ಬೀಳ್ಕೊಡುವ, ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್ ಘಟಕದ ಸಮಾರೋಪ ಸಮಾರಂಭ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ: ನರಸಿಂಹ

ಲೋಕದರ್ಶನ ವರದಿ

ಇಂಡಿ 10: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಜಿ.ಆರ್. ಗಾಂಧಿ ಕಲಾ ಹಾಗೂ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಬಿಎ/ಬಿಕಾಂ ಅಂತಿಮ ವರ್ಷದ ವಿದ್ಯಾಥರ್ಿಗಳಿಗೆ ಬೀಳ್ಕೊಡುವ ಹಾಗೂ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ಘಟಕದ ಸಮಾರೋಪ ಸಮಾರಂಭ ಜರುಗಿತು. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ನರಸಿಂಹ ರಾಯಚೂರ ಮಾತನಾಡಿ 'ಇಂದಿನ ಯುವ ಪೀಳಿಗೆಯವಿದ್ಯಾರ್ಥಿಗಳು  ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಶಿಕ್ಷಣ ಬಹುಮುಖ್ಯವಾಗಿದ್ದು, ಕಠಿಣ ಪ್ರಯತ್ನ ಮಾಡಿದ್ದಾದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ತಾವುಗಳು ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿ ಕುಟುಂಬಕ್ಕೆ, ಊರಿಗೆ ಹಾಗೂ ಕಾಲೇಜಿಗೆ ಹೆಸರು ತರುವ ಸಾಧಕ ವಿದ್ಯಾಥರ್ಿಗಳಾಗಿ' ಎಂದು ಕರೆ ಕೊಟ್ಟರು. 

ಸಂಸ್ಥೆಯ ನಿದರ್ೇಶಕ ಸಿದ್ದಣ್ಣ ತಾಂಬೆ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪ್ರಭಾಕರ ಬಗಲಿ ಗ್ರಾಮೀಣ ವಿದಾಥರ್ಿಗಳಾದ ತಾವುಗಳು ನಿರಂತರವಾದ ಓದಿನಿಂದ ಉನ್ನತವಾದ ಹುದ್ದೆಗಳನ್ನು ಪಡೆಯಲು ನಿರಂತರವಾದ ಪ್ರಯತ್ನಶೀಲರಾಗಿರೆಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾಥರ್ಿ ಒಕ್ಕೂಟ ಕಾಯರ್ಾಧ್ಯಕ್ಷರಾದ ಡಾ.ಎ.ಇ.ಗಾಯಕವಾಡ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರೊ.ಎಸ್.ಬಿ.ಜಾಧವ, ಪ್ರಾಚಾರ್ಯ ಡಾ.ಆನಂದ ನಡವಿನಮನಿ, ಕುಮಾರ ರವಿಕಾಂತ ಪೂಜಾರಿ, ಡಾ.ಸುರೇಂದ್ರ ಕೆ, ಡಾ.ಸಿ.ಎಸ್.ಬಿರಾದಾರ ಹಣಮಂತ ಷಣ್ಮುಖೆ, ಡಾ.ವ್ಹಿ.ಎ.ಕೋರವಾರ, ಪ್ರೊ.ಎಸ್.ಜಿ.ಸಣ್ಣಕ್ಕಿ, ಪ್ರೊ.ಎಮ್.ಆರ್.ಕೋಣದೆ, ಪ್ರೊ.ಪಿ.ಎಸ್.ದೇವರ, ಪ್ರೊ.ಜೆ.ಎಸ್.ಮಡಿಕ್ಯಾಳ, ಶ್ರೀ.ಆರ್ಪಿ.ಇಂಗನಾಳ, ಪ್ರೊ.ಆರ್.ಎ.ಗೊಳಗಿ, ಪ್ರೊ.ಎಸ್.ಎಸ್. ಲಚ್ಯಾಣ ಹಾಗೂ ಕಾರ್ಯಾಲಯದ  ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.