ಲೋಕದರ್ಶನ ವರದಿ
ಕಂಪ್ಲಿ 25:ತಾಲ್ಲೂಕು ಸಮೀಪದ ದೇವಲಾಪುರ ಗ್ರಾಮದ ಕರೇಗುಡ್ಡ ಬಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿನ ಬಲೆಗೆ ಆರನೇ ನರಭಕ್ಷ ಚಿರತೆ ಗುರುವಾರ ಬೆಳಗಿನ ಜಾವ ಬಿದ್ದಿದ್ದು, ಜನರಲ್ಲಿ ಆತಂಕದ ಛಾಯೆ ದೂರ ಮಾಡಿದೆ.
ಚಿರತೆ ದಾಳಿಗೆ ಇಬ್ಬರು ಮಕ್ಕಳು ಬಲಿಯಾಗಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಚಿರತೆಗಳ ಹಾವಳಿಗೆ ಜನರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ನಿರಂತರವಾಗಿ ಚಿರತೆಗಳು ಆಡು, ನಾಯಿ, ದನಕರು, ಕಾಡು ಬೆಕ್ಕು ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಮತ್ತು ಜನರ ಕಣ್ಣಿಗೆ ಪ್ರತ್ಯಕ್ಷದಿಂದ ಜನತೆ ಸಂಪೂರ್ಣವಾಗಿ ಭಯಬೀತರಾಗಿದ್ದರು. ಅಲ್ಲದೆ, ಅರಣ್ಯ ಅಧಿಕಾರಿಗಳು ಕಾಯರ್ಾಚರಣೆಯನ್ನು ನಿರಂತರವಾಗಿ ಮುಂದುವರಿಸಿದ ಬೆನ್ನಲ್ಲೆ ದೇವಲಾಪುರ ಗ್ರಾಮದ ಕರೇಗುಡ್ಡದ ಗೌಡ್ರು ಮಾರೆಪ್ಪ ಎಂಬುವ ಹೊಲದಲ್ಲಿ ಇಟ್ಟಿದ್ದ ಹೊಸ ಬೋನಿಗೆ 9 ವರ್ಷದ ಗಂಡು ಚಿರತೆ ಬೆಳಗಿನ ಜಾವ ಬಿದ್ದಿದೆ. ಚಿರತೆ ಸೆರೆ ಅರಿತ ಗ್ರಾಮದ ಜನರು ನೋಡಲೆಂದು ತಂಡ ತಂಡವಾಗಿ ಆಗಮಿಸಿ, ಚಿರತೆ ನೋಡಿ ನಿಟ್ಟುಸಿರು ಬಿಟ್ಟರು. ಸತತ 5 ಚಿರತೆಗಳನ್ನು ಹಿಡಿಯಲಾಗಿತ್ತು. ಆದರೆ, ಈಗ ಮತ್ತೊಂದು ಚಿರತೆ ಬಲೆಗೆ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಇನ್ನೇಷ್ಟು? ಚಿರತೆಗಳಿವೆ ಎಂಬ ಆತಂಕದ ಛಾಯೆ ವ್ಯಕ್ತವಾಗಿದೆ. ಕಾನಗುಡ್ಡ, ಕರೇಗುಡ್ಡ ಸೇರಿದಂತೆ ಗುಡ್ಡಗಾಡು ಪ್ರದೇಶದಲ್ಲಿ ಇನ್ನೂ ಮೂರ್ನಾಲ್ಕು ಚಿರತೆಗಳಿರುವ ಆರೋಪಗಳು ಕೇಳಿ ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಯರ್ಾಚರಣೆ ಮುಂದುವರೆಸಿ, ಇನ್ನೂಳಿದ ಚಿರತೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಹಿಂದೆ ಐದು ನರಭಕ್ಷಕ ಚಿರತೆಗಳ ಸೆರೆ ಹಿಡಿಯಲಾಗಿತ್ತು. ಇತ್ತೀಚೆಗೆ ರಾಮಸಾಗರ ಗ್ರಾಮದಲ್ಲಿ ಎರಡು ಆಡು ಬಲಿ ಪಡೆದಿತ್ತು. ಮತ್ತು ಜನರ ಕಣ್ಣಿಗೆ ಕೂಡ ಪ್ರತ್ಯಕ್ಷವಾಗಿದೆ.
ಬೆಳಗಿನ ಜಾವದಲ್ಲಿ ಬೋನಿನ ಕಡೆ ಆಗಮಿಸಿದ ಎರಡು ಚಿರತೆಗಳಲ್ಲಿ ಒಂದು ಚಿರತೆ ಬೋನಿಗೆ ಸೆರೆಯಾಗಿದೆ. ಮತ್ತೊಂದು ಚಿರತೆ ಬೋನಿನ ಬಳಿ ಕಾದು ಕುಳಿತಿದೆ. ಬೋನಿನಿಂದ ಹೊರಗಡೆ ಬರಬಹುದೆಂದು ಸಹಪಾಟಿ ಚಿರತೆಗಾಗಿ ಕಾಯುತ್ತಿತ್ತು. ಆದರೆ, ಬೋನಿನಲ್ಲಿ ಚಿರತೆ ಬಿದ್ದಿರುವುದು ಕಂಡು ಬಂದಿದೆ. ಬೋನಿನ ಬಳಿ ಧಾವಿಸಿದಾಗ ಬೋನಿನ ಹೊರಗಡೆ ಕುಳಿತುಕೊಂಡಿದ್ದ ಚಿರತೆ ನೋಡಿದ ತಕ್ಷಣ ಗುಡ್ಡದ ಕಡೆ ಹೊರಟು ಹೋಗಿದೆ. ಇನ್ನೂ ಈ ಭಾಗದಲ್ಲಿ ಚಿರತೆಗಳಿವೆ ಎಂದು ಪ್ರತ್ಯಕ್ಷದಶರ್ಿ ಗೊಲ್ಲರ ನಾಗರಾಜ ತಿಳಿಸಿದ್ದಾರೆ.