ಸಾಮೂಹಿಕ ವಿವಾಹಗಳಿಂದ ಬಾಂಧವ್ಯ ವೃದ್ಧಿ

ಲೋಕದರ್ಶನ ವರದಿ

ಹೊಸಪೇಟೆ 07: ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದರಿಂದ ಎಲ್ಲಾ ಜಾತಿ ಜನಾಂಗದವರಲ್ಲಿ ಬಾಂಧವ್ಯ ವೃದ್ಧಿಸುತ್ತದೆ ಎಂದು ಹಿರಿಯ ಮುಖಂಡ ಅಯ್ಯಾಳಿ ತಿಮ್ಮಪ್ಪ ತಿಳಿಸಿದರು.

ತಾಲೂಕಿನ ಅನಂತಶಯನಗುಡಿ ಗ್ರಾಮದಲ್ಲಿ ಗಾದಿಲಿಂಗೇಶ್ವರರ 3ನೇ ವರ್ಷದ ಪುರಾಣ, ಪುಣ್ಯಾರಾಧನಾ ನಿಮಿತ್ತ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ರಕ್ತದಾನ ಶಿಬಿರದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ರಕ್ತದಲ್ಲಿ ಗುಂಪುಗಳಿವೆ;  ಜಾತಿ-ಧರ್ಮಗಳಿಲ್ಲ.  ಎಲ್ಲರಲ್ಲೂ ಹರಿಯುವ ರಕ್ತದ ಬಣ್ಣ ಒಂದೇ ಆಗಿದೆ.  ಅದೇರೀತಿ ಯಾವುದೇ ಜಾತಿ ಜನಾಂಗವನ್ನು ಪರಿಗಣಿಸದೇ ಸಾಮೂಹಿಕ ವಿವಾಹಗಳು ನಡೆದಲ್ಲಿ, ಬಾಂಧವ್ಯ ಹೆಚ್ಚಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಇಮಾಮ್ ನಿಯಾಜಿ, ಗಾದಿಗನೂರು ಹಾಲಪ್ಪ, ಡಾ.ಶ್ರೀನಿವಾಸ ಬಳ್ಳಾರಿ, ರಾಜ್ಯ ರೈತ ಸಂಘದ ಕಾಯರ್ಾಧ್ಯಕ್ಷ  ಜಿ.ಎಂ.ವೀರಸಂಗಯ್ಯ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್, ಚಿಂಚಣಿ ಸಿದ್ದರಾಮಾನಂದ ಪುರಿಸ್ವಾಮಿ, ಮಾರೆಪ್ಪ, ಎಲ್.ಸಿದ್ಧನಗೌಡ್ರು, ದೇವರಮನೆ ಮಹೇಶ್ ಮುಂತಾದವರಿದ್ದರು. 

ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ರಕ್ತದಾನ ಶಿಬಿರದಲ್ಲಿ ಸುಮಾರು 25 ಯುವಕರು ಪಾಲ್ಗೊಂಡಿದ್ದರು; ವೈದ್ಯರಾದ ಸೋಮಶೇಖರ್, ಶಿವಮೂರ್ತಿ  ಮತ್ತು ಜಗದೀಶ ಭಾಗವಹಿಸಿದ್ದರು.