ನಾಳೆ ಅಟಲ್ ಟಿಂಕರಿಂಗ್ ಲ್ಯಾಬೋರೇಟರಿ ಉದ್ಘಾಟನೆ

ಲೋಕದರ್ಶನ ವರದಿ

ಶಿರಹಟ್ಟಿ 08: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಭೀಮರಡ್ಡಿ ಅಳವಂಡಿ ಕನರ್ಾಟಕ ಪಬ್ಲಿಕ್ ಸ್ಕೂಲ್ಗೆ ಕೇಂದ್ರ ಸರ್ಕಾರದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ ಅಡಿಯಲ್ಲಿ ಮಂಜೂರಾದ ಅಟಲ್ ಟಿಂಗರಿಂಗ್ ಲ್ಯಾಬೋರೇಟರಿಯ ಉದ್ಘಾಟನೆ ನಾಳೆ 10ರಂದು ಜರುಗಲಿದೆ.

ಗ್ರಾಮೀಣ ವಿಧ್ಯಾರ್ಥಿ /ನಿಯರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಈ ಅಟಲ್ ಟಿಂಗರಿಂಗ್ ಲ್ಯಾಬೋರೇಟರಿಯ ಉದ್ಘಾಟನೆಯು ಭೀಮರಡ್ಡಿ ಅಳವಂಡಿ ಕರ್ನಾಟಕ  ಪಬ್ಲಿಕ್ ಸ್ಕೂಲ್ನಲ್ಲಿ ಬೆಳಿಗ್ಗೆ 10.30ಕ್ಕೆ ಜರುಗಲಿದ್ದು, ಈ ಕಾರ್ಯಕ್ರಮವು ತಾಲೂಕಾ ಶಿಕ್ಷಣಾಧಿಕಾರಿ ಸಾಲಿಮಠ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು,  ಉದ್ಗಾಟನೆಯನ್ನು ಎಂಎಲ್ಸಿಗಳಾದ ಪ್ರೋ ಎಸ್ವಿ ಸಂಕನೂರು ನಡೆಸಿಕೊಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಎಸ್.ಪಿ ಬಳಿಗಾರ್, ಶಾಸಕ ರಾಮಣ್ಣ ಲಮಾಣಿ, ರೇಣುಕಪ್ಪ ಎಸ್ ಬುರಡಿ, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರುಗಳು ಆಗಮಿಸುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.