ಮೈಲಾರದಲ್ಲಿ ಕನಕಗುರುಪೀಠದ ಶಾಖಾಮಠ ಉದ್ಘಾಟನೆ

ಲೋಕದರ್ಶನವರದಿ

ರಾಣೇಬೆನ್ನೂರ 04- ಸುಕ್ಷೇತ್ರವೆಂದೇ ನಾಡಿದ್ದಕ್ಕೂ ಹೆಸರಾಗಿರುವ ಮೈಲಾರದಲ್ಲಿ ಮೇ.7 ರಿಂದ ಮೇ.9ರವರೆಗೆ ಕನಕಗುರುಪೀಠ ಶಾಖಾಮಠದ ಉದ್ಘಾಟನೆ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳ ಕುರಿತು ಜನರಲ್ಲಿ ಜಾಗ್ರತಿ ಮೂಡಿಸುವ ಸಂಬಂಧ ಮೇ.5 ರಂದು ಮುಂಜಾನೆ 11.30ಕ್ಕೆ ನಗರದ ಹಲಗೇರಿ ರಸ್ತೆಯಲ್ಲಿನ ಹೊರ ಬೀರಪ್ಪನ ಗುಡಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಮೈಲಾರದವರೆಗೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

      ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ರ್ಯಾಲಿಗೆ ಚಾಲನೆ ನೀಡುವರು. 2000ಕ್ಕೂ ಅಧಿಕ ಬೈಕ್ಗಳ ಮೂಲಕ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಗುಡ್ಡದ ಆನ್ವೇರಿ, ದೇವರಗುಡ್ಡ, ಹೊನ್ನತ್ತಿ, ಗುತ್ತಲ ಮಾರ್ಗವಾಗಿ ಮೈಲಾರಕ್ಕೆ ತಲುಪಲಿದೆ. ಸಮಾಜ ಬಾಂಧವರು ಈ ರ್ಯಾಲಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಮರಡೆಪ್ಪ ಪೂಜಾರ ಹಾಗೂ ಕಾರ್ಯದಶರ್ಿ ಮೃತ್ಯುಂಜಯ ಗುದಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.