ನವೀನ ತಂತ್ರಜ್ಞಾನದ ಫೋಸರ್್ ಜಿಮ್ ಉದ್ಘಾಟನೆ

ಮೂಡಲಗಿ 02: ಶಾರೀರಿಕವಾಗಿ ಸದೃಢರಾಗಲು ಹಿತಮಿತವಾದ ಆಹಾರ ಜೊತೆಯಲ್ಲಿ ಸದೃಢ ಕಾಯ ಹೊಂದಬೇಕಾದರೆ ವ್ಯಾಯಾಮವು ಅವಶ್ಯಕವಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಹಲವಾರು ದೇಹಕ್ಕೆ ಚೈತನ್ಯ ನೀಡುವ ಸಾಮಗ್ರಿಗಳಿದ್ದು ಇವುಗಳ ಉಪಯೋಗ ಪಡೆದುಕೊಂಡು ಆರೋಗ್ಯವಂತ ದೇಹವನ್ನು ಕಾಪಾಡಿಕೊಳ್ಳಬೇಕೆಂದು ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಹೇಳಿದರು.

 ಅವರು ಮಂಗಳವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ನವೀನ ತಂತ್ರಜ್ಞಾನದ ಫೋಸರ್್ ಜಿಮ್ ಉದ್ಘಾಟಸಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ವ್ಯಾಯಾಮದ ಕೊರತೆಯಿಂದಾಗಿ ಮಧುಮೇಹ, ರಕ್ತದೊತ್ತಡ, ಅಸ್ತಮಾ, ನರದೌರ್ಬಲ್ಯದಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಾನಸಿಕ ಒತ್ತಡಗಳಿಂದ ಹೊರಬರಲು ವ್ಯಾಯಮ ಅಗತ್ಯ ಎಂದರು.

  ಅಜೀಜ ಡಾಂಗೆ, ಸ್ಯಾಂಡಲ್ವುಡ್ ಗಾಯಕ ಶಬ್ಬಿರ್ ಡಾಂಗೆ ಮಾತನಾಡಿ, ನಗರಗಳಲ್ಲಿ ಅತೀ ಒತ್ತಡದ ಜೀವನದಲ್ಲಿ ದೇಹದ ಬಗ್ಗೆ ನಿಷ್ಕಾಳಜಿ ಹೊಂದಿ ಅನೇಕ ರೋಗಗಳಿಗೆ ತುತ್ತಾಗುತ್ತಿರು ಜನತೆಗೆ ಇಂತಹ ವ್ಯಾಯಾಮ ಶಾಲೆಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

   ಸಮಾರಂಭದಲ್ಲಿ ಪುರಸಭೆ ಸದಸ್ಯರಾದ ಜಯಾನಂದ ಪಾಟೀಲ, ಶಿವಾನಂದ ಚಂಡಕಿ, ಹನಮಂತ ಗುಡ್ಲಮನಿ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ್ ಬಳಿಗಾರ, ಸಂತೋಷ ಪಾಶರ್ಿ, ಸುಭಾಸ ದಂಡಗಿ, ಶಂಕರ ತುಕ್ಕನ್ನವರ, ಅನ್ವರ ನದಾಫ್, ಬಿ.ಆರ್.ಪಿ, ಕೆ.ಎಲ್.ಮೀಶಿ, ಎ.ಪಿ ಪರಸನ್ನವರ, ಇಸ್ಮಾಯಿಲ್ ಇನಾಮದಾರ, ಯಲ್ಲಾಲಿಂಗ ವಾಳದ, ಅಸ್ಗರಅಲಿ ಇನಾಮದಾರ, ಮಕತುಮ್ ಪೈಲವಾನ, ರಿಯಾಜ ಇನಾಮದಾರ, ಚಂದ್ರು ದರೂರ, ರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಕಾಟೇಶ್ ಬಾಡಿಲೈನ್, ತರಭೇತುದಾರ ಆರೀಪ್ ಇನಾಮದಾರ, ನಫಿಸ್ ಖೈರದಿ ಹಾಗೂ ತರಬೇತಿಯ ಯುವ ಸಮುದಾಯ ಹಾಜರಿದ್ದರು.