ಮುಖವಾಡಗಳ ತಯಾರಿಕಾ ಶಿಬಿರ ಉದ್ಘಾಟನೆ


ಲೋಕದರ್ಶನ ವರದಿ

ವಿಜಯಪುರ 24:  ಪುಸ್ತಕ ರೂಪದಲ್ಲಿರುವ ಒಂದು ನಾಟಕವನ್ನು ರಂಗದ ಮೇಲೆ ತರಲು, ಅದನ್ನು ಕನಿಷ್ಠ ಹತ್ತು ಸಲವಾದರೂ ವಾಚಿಸಬೇಕು" ಎಂದು ರಂಗಾಸಕ್ತ ಸಾಹಿತಿ ರಮೇಶ ಕೊಟ್ಯಾಳ ಹೇಳಿದರು. 

ನಗರದ ರವಿವಾರ ಹಿರಿಯ ರಂಗ ಸಂಸ್ಥೆ ಕಲಾ ಮಾಧ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ರಂಗ ಪರಿಕರ, ಉಡುಪು ಮತ್ತು ಮುಖವಾಡಗಳ ತಯಾರಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಟಕದ ಮೊದಲನೆ ಓದು, ಅದನ್ನು ರಂಗದ ಮೇಲೆ ತರಲು ಸಾಧ್ಯವೇ ಎಂಬುದನ್ನು ನಿರ್ಣಯಿಸಲು ಅವಶ್ಯವಾಗಿದ್ದರೆ ಉಳಿದ ಓದುಗಳು, ನಾಟಕಕ್ಕೆ ಬೇಕಾಗುವ ರಂಗ ಪರಿಕರಗಳ ಪಟ್ಟಿ ತಯಾರಿಸಲು, ಪಾತ್ರಗಳ ಉಡುಗೆ ತೊಡುಗೆ  ನಿರ್ಣಯಿಸಲು, ಕಾಲ, ಸಂಗೀತ, ಪ್ರಸಾದನ, ಇತ್ಯಾದಿಗಳನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ ಎಂದರು.

ಹವ್ಯಾಸಿ ಹಾಗೂ ಶಾಲೆ ಕಾಲೇಜುಗಳ ಶಿಕ್ಷಕರಿಗೆ ನಾಟಕ ಕಲಿಸುವಾಗ ಎದುರಾಗುವ ರಂಗಪರಿಕರ, ಉಡುಪು, ಮುಖವಾಡಗಳ ಸಮಸ್ಯೆಗಳನ್ನು ನಿಭಾಯಿಸುವ ದೃಷ್ಠಿಯಿಂದ ಕಲಾ ಮಾಧ್ಯಮದ ಶಿಬಿರ ಅರ್ಥಪೂರ್ಣ ಮತ್ತು ಉಪಯುಕ್ತ ಎಂದ ಅವರು ಶಿಬಿರದಿಂದ ಕೌಶಲ್ಯಪೂರ್ಣ ರಂಗಕಮರ್ಿಗಳು ಹೊರಹೊಮ್ಮಲಿ ಎಂದು ಆಶಿಸಿದರು.

ರಂಗತಜ್ಞ ಯೋಗೇಂದ್ರಸಿಂಗ ನಮ್ಮ ಪರಿಸರದಲ್ಲಿರುವ, ಹರಿದ ಬಟ್ಟೆ, ಬಿದಿರು, ಕಟ್ಟಿಗೆ  ತುಂಡು, ಬಣ್ಣ, ಅಂಟುಗಳಿಂದ  ಹೇಗೆ ರಂಗಪರಿಕರಗಳನ್ನು ತಯಾರಿಸಬಹುದೆಂದು ಪ್ರಾತ್ಯಕ್ಷತೆ ಮೂಲಕ ತಿಳುವಳಿಕೆ ನೀಡಿದರು.

ಉಡುಪು ತಯಾರಿಕರಾದ ಗಂಗಾ ಮನಗೂಳಿ, ಕಲಾವಿದ ಮಂಜುನಾಥ ಮಾನೆ,  ನಿವೃತ್ತ ಪ್ರಾಚಾರ್ಯ ಬಿ.ಎಂ. ಅಜೂರ, ಮುಖ್ಯಧ್ಯಾಪಕಿ ರೂಪಾ ಟೋಳ ಉಪಸ್ಥಿತರಿದ್ದರು. ಕಲಾ ಮಾಧ್ಯಮ ಕಾರ್ಯದಶರ್ಿ ಜಿ.ಎನ್. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು.