ಜಿಮಖಾನಾ ಹಾಗೂ ವಿವಿಧ ವಿಭಾಗಗಳ ಉದ್ಘಾಟನಾ ಸಮಾರಂಭ

ಬೆಳಗಾವಿ.ಸೆ.26: ದಿ: 24 ರಂದು ಸನ್ಮತಿ  ಶಿಕ್ಷಣ  ಸಹಕಾರ  ಸಮಿತಿಯ ಮಹಾವೀರ ಪಿ. ಮಿಜರ್ಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಜಗದೀಶ ಎ. ಸವದತ್ತಿ ಪದವಿ-ಪೂರ್ವ ವಾಣಿಜ್ಯ ಮಹಾವಿದ್ಯಾಲಯಗಳ 2019-20 ರ ಶೈಕ್ಷಣಿಕ ವರ್ಷದ ಜಿಮಖಾನಾ ಹಾಗೂ ವಿವಿಧ ವಿಭಾಗಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

  ಸ್ವರಾಂಜಲಿ ತಂಡದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪದವಿ-ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ವ್ಹಿ. ಬಿ. ತುರಮರಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ರಾಜೀವ ಎಸ್. ದೊಡ್ಡಣ್ಣವರ ಕಾರ್ಯದಶರ್ಿ ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿ, ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ. ಶಿ. ಸ. ಸಮಿತಿಯ ಅಧ್ಯಕ್ಷರಾದ ಜಗದೀಶ ಎ. ಸವದತ್ತಿ ಅವರ ಪರಿಚಯ ಮಾಡಿ ಸ್ವಾಗತಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಶ್ರೀಮತಿ ನಿರ್ಮಲಾ ಐ. ಗಡಾದ ಅವರು ಶೈಕ್ಷಣಿಕ ವರ್ಷದ ಮಹಾವಿದ್ಯಾಲಯಗಳ ವಿವಿಧ ವಿಭಾಗಗಳ ಕಾರ್ಯ ಚಟುವಟಿಕೆ ಮತ್ತು ಸಾಧನೆಗಳ ಕುರಿತು ವರದಿ ವಾಚನ ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಜೀವ ಎಸ್. ದೊಡ್ಡಣ್ಣವರ ಅವರನ್ನು  ಜಗದೀಶ ಎ. ಸವದತ್ತಿ ಅವರು ಸನ್ಮಾನಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಯದ ವಿವಿಧ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾಥರ್ಿಗಳಿಗೆ ಮತ್ತು ಪಿ. ಯು. ಸಿ. ಹಾಗೂ ಪದವಿ ಸೆಮಿಸ್ಟರ್ಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನದ ಜೊತೆಗೆ ನಗದು ಕೊಟ್ಟು ಪ್ರೋತ್ಸಾಹಿಸಲಾಯಿತು. ಮಹಾವಿದ್ಯಾಲಯದ ಎನ್. ಎಸ್. ಎಸ್. ಅಧಿಕಾರಿ ಪ್ರೊ. ಮಹೇಶ ಎಸ್. ಪೂಜಾರಿ ಮಾತನಾಡಿ ಸಪ್ಟೆಂಬರ 24, 2019 ರಂದು ನಡೆದ ಎನ್. ಎಸ್. ಎಸ್. ಸಂಸ್ಥಾಪನಾ ದಿನದ ಕುರಿತು ಮತ್ತು ಮಹಾವಿದ್ಯಾಲಯದ ಎನ್, ಎಸ್, ಎಸ್. ಕಾರ್ಯಚಟುವಟಿಕೆಗಳ ಕಾರ್ಯ ವೈಖರಿಯನ್ನು ತಿಳಿಸಿದರು.

ಮುಖ್ಯ ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ "ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ" ಎಂಬುದನ್ನು ತಮ್ಮ ಯು.ಎಸ್.ಎ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುತ್ತ ವಿದ್ಯಾಥರ್ಿಗಳಿಗೆ ಮನಮುಟ್ಟುವಂತೆ ಹೇಳಿದರು. ಸ. ಶಿ. ಸ. ಸಮಿತಿಯ ಅಧ್ಯಕ್ಷರಾದ ಜಗದೀಶ ಎ. ಸವದತ್ತಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡೆ ಮತ್ತು ಕಾಲೇಜಿನ ಎಲ್ಲ ಜಿಮಖಾನಾ ವಿಭಾಗಗಳ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ವಿದ್ಯಾಥರ್ಿಗಳು ತಮ್ಮ ಸರ್ವತೋಮುಖ ಅಭಿವೃದ್ದಿ ಮಾಡಿಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು. ಪ್ರೊ. ನಾಗವೇಣಿ ಡಿ. ಧರೆನ್ನವರ ಕಾರ್ಯಕ್ರಮ ನಿರೂಪಿಸಿದರು. ಸ. ಶಿ. ಸ ಸಮಿತಿಯ ಪದವಿ-ಪೂರ್ವ ಮಹಾವಿದ್ಯಾಲಯ, ಪದವಿ ಮಹಾವಿದ್ಯಾಲಯ,   ಬಿ.ಬಿ.ಎ. ಮತ್ತು ಎಂ.ಕಾಂ. ವಿಭಾಗಗಳ ಎಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.