ಮುಂದಿನ ಜನ್ಮ ಕನರ್ಾಟಕದಲ್ಲಾಗಲಿ: ತ್ರಿಪಾಠಿ

ಲೋಕದರ್ಶನ ವರದಿ

ಮುಧೋಳ: ಕನ್ನಡ ನಾಡು, ಭಾಷೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದು ಅಪೇಕ್ಷಿಸುತ್ತೇನೆ ತಾಲೂಕಿನ ಮುದ್ದಾಪುರ ಗ್ರಾಮವ್ಯಾಪ್ತಿಯ ಜೆ.ಕೆ.ಸಿಮೆಂಟ್ ಕಂಪೆನಿ ಮುಖ್ಯಸ್ಥ ಆರ್ಬಿಎಂ ತ್ರಿಪಾಠಿ ಹೇಳಿದರು.

ಅವರು ಗುರುವಾರ ಕಾಖರ್ಾನೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. ಬಳಿಕ ಕನ್ನಡದಲ್ಲೆ ಮಾತನಾಡಿ, ಇಲ್ಲಿನ ಸಾಹಿತ್ಯಕ್ಕೆ ದೇಶದಲ್ಲೇ ಹೆಚ್ಚಿನ ಜ್ಷಾನಪೀಠ ಪ್ರಶಸ್ತಿಗಳು ಲಭ್ಯವಾಗಿವೆ. ಸಂಸ್ಥೆ ಕನ್ನಡ ಭಾಷೆ ಬೆಳೆಸುವುದರಲ್ಲಿ ಭಾಗಿಯಾಗುತ್ತಿದೆ ಎಂದು ಹೇಳಿದರು. 

ಹಿರಿಯ ಅಧಿಕಾರಿಗಳಾದ ಜಯಂತ ಮಲ್ಹೋತ್ರಾ, ಆರ್.ಸಿ.ಪುರೋಹಿತ, ಅನೀಲ ಗುಪ್ತಾ, ಉಮಾಶಂಕರ ಚೌಧರಿ, ಪ್ರಖರ ಶ್ರೀವಾತ್ಸವ, ದುಗರ್ಾರಾಮ ಮುಂತಾದವರು ಇದ್ದರು.  ಎಚ್ಆರ್ಡಿ ಮುಖ್ಯಸ್ಥ ಶಿವಯ್ಯಸ್ವಾಮಿ ಸ್ವಾಗತಿಸಿದರು. ಲೋಕಣ್ಣ ನಂದಗಾಂವ ನಿರೂಪಿಸಿದರು. ನಿಶಾಂತ ಹೊಸೂರ ವಂದಿಸಿದರು.