ಲೋಕಸಭೆ ಚುನಾವಣೆಯ ಹಿನ್ನಲ್ಲೆಯಲ್ಲಿ ಲೋಪ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಿ

ಲೋಕದರ್ಶನ ವರದಿ 

ಚಿಕ್ಕೋಡಿ: ಮುಂಬರುವ ಲೋಕಸಭೆ ಚುನಾವಣೆಯ ಹಿನ್ನಲ್ಲೆಯಲ್ಲಿ ಲೋಪ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕೆಂದು ಜಿಲ್ಲೆಯ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೆಗನ್ನವರ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದ ತಹಶೀಲ್ದಾರ ಕಚೇರಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು,  ಮತದಾರರ ಪಟ್ಟಿ ಪರಿಸ್ಕರಣ ಈಗಾಗಲೇ ನಡೆದಿದ್ದು, ಎರಡೆರಡು ಕಡೆ ಮತದಾರರ ಯಾದಿಯಲ್ಲಿ ಹೆಸರು ಬಂದಿರುವದು ಗಮನಿಸಿ ಒಂದು ಹೆಸರು ಕಡಿಮೆ ಮಾಡಿಕೊಳ್ಳಬೇಕು. ಬರುವ ಜನವರಿ ತಿಂಗಳ ಒಳಗಾಗಿ ಯಾವುದೇ ಲೋಪ ರಹಿತವಿಲ್ಲದ ಮತದಾರರ ಯಾದಿ ತಯಾರಿಸಲು ಉಪವಿಭಾಗಾಧಿಕಾರಿ, ತಹಶೀಲ್ದಾರರು ಬಿಎಲ್ಒಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಬಿಎಲ್ಒಗಳು ಪ್ರತಿ ಮತದಾರರನ ಮನೆ ಮನೆಗೆ ಭೇಟಿ ನೀಡಿ ಮನೆಯಲ್ಲಿ ಎಷ್ಟು ಜನ ಇದ್ದಾರೆ. ಅವರ ಮತಗಳು ಯಾವ ಮತಗಟ್ಟೆಯಲ್ಲಿವೆ ಎಂಬ ಸಮಗ್ರ ಮಾಹಿತಿಯನ್ನು ಕಲೆ ಹಾಕಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ದೋಷ ಇದ್ದರೆ ಅಂತವರಿಗೆ ಯಾವ ಸಮಸ್ಯೆ ಇದೆ ಎಂಬುದನ್ನು ಆಯಾ ನಮೂನೆ ಪಾರ್ಮ ನೀಡಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದರು.

ಗ್ರಾಮೀಣ ಮತ್ತು ನಗರ ಪ್ರದೇಶದ ಅಲ್ಪಸಂಖ್ಯಾತ ಮತ್ತು ಎಸ್ಸಿ,ಎಸ್ಟಿ ಕಾಲೋನಿಗಳಿಗೆ ಭೇಟಿ ನೀಡಿ ಮತದಾರರ ಯಾದಿಯಲ್ಲಿ ಹೆಸರು ನಮೂದು ಬಗ್ಗೆ ಪರಿಶೀಲನೆ ನಡೆಸಬೇಕು. ನಿಧನರಾದವರ ಹೆಸರು, ಸ್ಥಳಾಂತರಾದವರ ಹೆಸರು ಕಡಿಮೆ ಮಾಡುವ ಮತ್ತು ಯಾರು ಮತದಾನ ಯಾದಿಯಲ್ಲಿ ಹೆಸರು ಸೂಚಿಸಿಲ್ಲ ಅಂತವರನ್ನು ಗುತರ್ಿಸಿ ಅವರಿಗೆ ನೊಟಿಸ್ ನೀಡಬೇಕು. ಮತದಾರು ಸಹ ಇದಕ್ಕೆ ಸ್ಪಂದಿಸಿ ಬಿಎಲ್ಒಗಳಿಗೆ ಸಹಕಾರ ನೀಡಬೇಕು ಎಂದರು.

ಈಗಾಗಲೇ ಅಥಣಿ, ಕಾಗವಾಡ ವಿಧಾನಸಭೆ ಕ್ಷೇತ್ರಗಳಲ್ಲಿ ಭೂತ ಮಟ್ಟದಲ್ಲಿ ಮತದಾರರ ಯಾದಿ ಕುರಿತು ಪರಿಶೀಲನೆ ನಡೆಸಲಾಗಿದೆ. ಇದೀಗ ಚಿಕ್ಕೋಡಿ-ಸದಲಗಾ ಮತ್ತು ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿ ಬಿಎಲ್ಒ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಲೋಪ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕೆಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಕ್ಕರೆ ಕಾಖರ್ಾನೆಗಳು ರೈತರಿಗೆ ಸೂಕ್ತ ದರ ನೀಡಲಿ:  ಕಳೆದ ಹಂಗಾಮಿನಲ್ಲಿ ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಸೂಕ್ತ ದರ ನೀಡಬೇಕು. ಒಂದು ವೇಳೆ ದರ ನೀಡದ ಕಾಖರ್ಾನೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ರವಿಂದ್ರ ಕರಲಿಂಗನ್ನವರ. ಪ್ರವೀಣ ಬಾಗೇವಾಡಿ, ಪ್ರವೀಣ ಕರಾಂಡೆ, ಅರುಣ ಶ್ರೀಖಂಡೆ ಮುಂತಾದವರು ಇದ್ದರು.