ಸಂಬರಗಿ 10: ಮಹಾರಾಷ್ಟ್ರದ ಜತ್ತ ತಾಲೂಕಿನ ವಜ್ರವಾಡ ಗ್ರಾಮದ 4ನೇ ತರಗತಿಯ 11ವರ್ಷದ ಬಾಲಕಿ ಅಕ್ಷರಾ ಸಿದ್ದಯ್ಯಾ ಮಠಪತಿ ಗುರುವಾರ ಕಾಣೆಯಾಗಿದ್ದು ಶನಿವಾರ ಬಾಲಕಿಯ ಮೃತ ದೇಹವು ತೆರೆದ ಬಾವಿಯಲ್ಲಿ ಪತ್ತೆಯಾಗಿದೆ.
ಘಟನೆಯ ವಿವರ: ವಜ್ರವಾಡ ಗ್ರಾಮದ ಅಕ್ಷರಾ ಸಿದ್ದಯ್ಯಾ ಮಠಪತಿ ಬೆಳಿಗ್ಗೆ ಶಾಲೆಗೆ ಹೋದ ನಂತರ ಮರಳಿ ಮನೆಗೆ ಬಂದಿಲ್ಲ. ಅವರ ಮನೆಯ ಎಲ್ಲ ಜನರು ಕೂಡಿಕೊಂಡು ಕಳೆದುಕೊಂಡ ಬಾಲಕಿಯ ಹುಡುಕಾಟ ಮಾಡಿದರೂ ಸಿಕ್ಕಿಲ್ಲ. ಈ ಕುರಿತು ಬಾಲಕಿ ಕಾಣೆಯಾಗಿದ್ದಾಳೆಂದು ಜತ್ತ ಪೋಲೀಸ್ ಠಾಣೆಗೆ ಅವಳ ಚಿಕ್ಕಪ್ಪ ಪವಾಡಯ್ಯ ಮಠಪತಿ ಅವರು ದೂರು ದಾಖಲಿಸಿದರು. ಆನಂತರ ಗುರುವಾರ ಹಾಗೂ ಶುಕ್ರವಾರ ಪೋಲಿಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಶೋಧಕಾರ್ಯ ನಡೆಸಿದರೂ ಬಾಲಕಿಯನ್ನು ಹುಡುಕುವಲ್ಲಿ ವಿಫಲರಾದರು. ವಜ್ರವಾಡ ಗ್ರಾಮದ ಹೊರವಲಯದ ತೋಟದ ತೆರೆದ ಬಾವಿಯಲ್ಲಿ ಆ ಬಾಲಕಿಯ ಶವವು ಶನಿವಾರ ಪತ್ತೆಯಾಯಿತು. ಜತ್ತ ಪೋಲೀಸ್ ಠಾಣೆಯ ಪಿ.ಎಸ್.ಐ ರಣಜೀತ ಗುಂಡರೆ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಾಲಕಿಯ ಶವವನ್ನು ಜತ್ತ ಸಕರ್ಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಲಾಯಿತು. ಈ ಸಾವು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಪೋಟೋ ಶಿಷರ್ಿಕೆ: ಅಕ್ಷರಾ ಮಠಪತಿ ಇವಳ ಭಾವಚಿತ್ರ (09 ಸಂಬರಗಿ 2)
ಅಕ್ಷರಾ ಶವ ದೊರೆತ ತೆರೆದ ಬಾವಿಯ ಜತ್ತ ಪೋಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು