ಧಾಮರ್ಿಕ ಸಂಸ್ಕಾರ ಹೊಂದಿದರೆ ಉತ್ತಮ ಜೀವನ ಸಾಧ್ಯ: ಮುನವಳ್ಳಿ

ಲೋಕದರ್ಶನ ವರದಿ

ಗಂಗಾವತಿ 21: ಪ್ರತಿಯೊಬ್ಬರು ಧಾಮರ್ಿಕ ಸಂಸ್ಕಾರ ಹೊಂದಿದರೆ ಉತ್ತಮ ತೆರನಾಗಿ ಜೀವನ ನಿರ್ವಹಣೆ ಮಾಡಲು ಸಾಧ್ಯ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ಜಯನಗರದಲ್ಲಿನ ಗಂಗಾಧರೇಶ್ವರ ಸಮುದಾಯಭವನ ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು. ನಮ್ಮ ದೇಶ ಸನಾತನ ಸಂಸ್ಕೃತಿಯನ್ನು ಹೊಂದಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿರುವ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರಿ ಹೇಳಿದ್ದರು. ದೇವರನ್ನು ನಾವು ನಮ್ಮ ವೃತ್ತಿಯಲ್ಲಿ ಕಾಣಲು ಸಾಧ್ಯ ಎಂದು ತಿಳಿಸಿದರು.

ಗಂಗಾಧರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಈ ಸಮುದಾಯಭವನವನ್ನು ಕಡಿಮೆ ವೆಚ್ಚದಲ್ಲಿ ವಿವಾಹ ಮತ್ತು ಇತರ ಸಮಾರಂಭಗಳಿಗೆ ಬಾಡಿಗೆ ನೀಡಬೇಕು. ಎಲ್ಲ ವರ್ಗಗಳ ಜನರಿಗೆ ಇದರ ಪ್ರಯೋಜನ ತಲುಪಬೇಕು ಎಂದು ಮುನವಳ್ಳಿ ತಿಳಿಸಿದರು.

ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಸೂಳೆಕಲ್ ಭುವನೇಶ್ವರಯ್ಯ ತಾತನವರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಎಂ.ಮಲ್ಲಿಕಾಜರ್ುನನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಸಂಸದ ಶಿವರಾಮೇಗೌಡ, ತಿಪ್ಪೇರುದ್ರಸ್ವಾಮಿ ಪಾಲ್ಗೊಂಡಿದ್ದರು.